ಕೆಎಚ್‍ಡಿಸಿ ನಿಗಮದಡಿಯಲ್ಲಿ ಪೆಟ್ರೋಲ್ ಪಂಪ್ ಸ್ಥಾಪಿಸಲು ತೇರದಾಳ ಟ್ಟಣದಲ್ಲಿ ಸ್ಥಳ ಪರಿಶೀಲಿಸುತ್ತಿರುವ ನಿಗಮದ ಅಧ್ಯಕ್ಷ ಸಿದ್ದು ಸವದಿ ಹಾಗೂ ಅಧಿಕಾರಿಗಳು.

ಕೆಎಚ್‍ಡಿಸಿ ನಿಗಮದಿಂದ ಪೆಟ್ರೋಲ್ ಪಂಪ್ : ಸಿದ್ದು ಸವದಿ

ನಿಗಮಕ್ಕೆ ಟಾನಿಕ್ ನೀಡಲು ಮುಂದಾದ ಸರ್ಕಾರ : ನೇಕಾರರಲ್ಲಿ ಹೊಸ ಆಶಾಭಾವ     

ತೇರದಾಳ : ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಚೈತನ್ಯವನ್ನು ನೀಡಲು ಸರಕಾರ ಹಲವಾರು ಕ್ರೀಯಾಯೋಜನೆಗಳನ್ನು ರೂಪಿಸಿ ನಿಗಮದ ನಷ್ಟವನ್ನು ಸರಿದೂಗಿಸಲು ಹರಸಾಹಸ ಪಟ್ಟರೂ ಕೂಡ ಕಷ್ಟದಿಂದ ವಿಮುಕ್ತಿಗೊಳ್ಳದ ನಿಗಮಕ್ಕೆ ಸರಕಾರ ನಿಗಮದ ಪ್ರತಿ ಕೇಂದ್ರಗಳಲ್ಲಿ ಹೊಸ ಪೆಟ್ರೋಲ್ ಪಂಪ್ ತೆರೆಯುವ ಕ್ರೀಯಾ ಯೋಜನೆ ರೂಪಿಸಿ ನಿಗಮಕ್ಕೆ ಟಾನಿಕ್ ನೀಡಲು ಮುಂದಾಗಿರುವುದು ನೇಕಾರರ ಬಾಂಧವರಲ್ಲಿ ಹೊಸ ಆಶಾಭಾವವನ್ನು ಮೂಡಿಸಿದೆ.

   ಈ ನಿಟ್ಟಿನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿದ್ದು ಸವದಿಯವರು ಇಂದು ಪಟ್ಟಣದ ಕೆಎಚ್‍ಡಿಸಿ ನಿಗಮದ ಕೇಂದ್ರಕ್ಕೆ ಭೇಟಿ ನೀಡಿ ನಿಗಮದ ಅಡಿಯಲ್ಲಿ ಪೆಟ್ರೋಲ್ ಪಂಪ್ ಸ್ಥಾಪಿಸಲು ಲಭ್ಯವಿರುವ ಸ್ಥಳಾವಕಾಶವನ್ನು ಪರಿಶೀಲಿಸಿದರು. ಈ ಸಂಧರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ನಿಗಮವನ್ನು ಪುನಶ್ಚೇತನಗೊಳಿಸಲು ಪ್ರತಿ ಬಾರಿ ನಮ್ಮ ಸರಕಾರ ಆಡಳಿತದ ಚುಕ್ಕಾಣೆ ಹಿಡಿದಾಗಲೆಲ್ಲ ವಿಶೇಷ ಪ್ಯಾಕೇಜ್ ಘೋಷಿಸುವುದರೊಂದಿಗೆ ನಿಗಮ ಹಾಗೂ ನಿಗಮದ ನೇಕಾರರ ಕಲ್ಯಾಣಕ್ಕೆ ತನ್ನದೇಯಾದ ಕೊಡುಗೆಗಳನ್ನು ನೀಡಿದ್ದು ವಿಶೇಷವಾಗಿ ನೇಕಾರ ನಾಡಿನವರಾದ ನನ್ನನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿರುವುದು ಸರಕಾರ ನಿಗಮದ ಶ್ರೇಯೋಭಿವೃದ್ಧಿ ಕುರಿತು ಹೊಂದಿರುವ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯಸರಕಾರ ನಷ್ಟದಲ್ಲಿರುವ ನಿಗಮವನ್ನು ಲಾಭದೆಡೆಗೆ ಕೊಂಡೊಯ್ಯಲು ನಿಗಮದ ಪ್ರತಿ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಆಧರಿಸಿ ಹಾಗೂ ಪರ್ಯಾಯ ಸ್ಥಳಾವಕಾಶವನ್ನು ಗುರುತಿಸಿ ನಿಗಮದ ಅಡಿಯಲ್ಲಿಯೇ ಹೊಸ ಪೆಟ್ರೋಲ್ ಪಂಪ್‍ಗಳನ್ನು ತೆರದು ಪೆಟ್ರೋಲ್ ಇದರಿಂದ ಬರುವ ಆದಾಯವನ್ನು ನಿಗಮಕ್ಕೆ ವಿನಿಯೋಗಿಸಿಕೊಂಡು ನಿಗಮವನ್ನು ಲಾಭದತ್ತ ಮುನ್ನಡೆಸಲು ಹಾಗೂ ನಿಗಮದಡಿಯಲ್ಲಿ ಪ್ರಾರಂಭಿಸಿದ ಪೆಟ್ರೋಲ್ ಪಂಪಗಳಲ್ಲಿ ನೇಕಾರರ ಮಕ್ಕಳಿಗೆ ಉದ್ಯೋಗ ಪ್ರಾಧಾನ್ಯತೆಯನ್ನು ನೀಡಲು ಮತ್ತು ನೇಕಾರರಿಗೆ ಮೂಲಭೂತ ಸೌಲಭ್ಯಗಳನ್ನು ಪೂರೈಸಲು ಕ್ರೀಯಾ ಯೋಜನೆ ರೂಪಿಸಿದ್ದು ಈ ಬೆಳವಣಿಗೆಯಿಂದ ನಿಗಮ ಉದ್ದಿಮೆ ಮಾದರಿಯಲ್ಲಿ ಬೆಳೆದು ಲಾಭದಾಯಕ ಹಾದಿಯಲ್ಲಿ ಸಾಗಿದರೆ ಪಾರಂಪರಿಕವಾಗಿ ನೇಕಾರಿಕೆಯನ್ನು ಅವಲಂಭಿಸಿರುವ ಸಾವಿರಾರು ನೇಕಾರ ಬಾಂಧವರಿಗೆ ಅನುಕೂಲವಾಗಲಿದೆಯಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು.

    ಈ ಸಂಧರ್ಭದಲ್ಲಿ ಶಾಸಕರೊಂದಿಗೆ ನಿಯೋಗದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ  ಜವಾಹರ ಹುಬ್ಬಳ್ಳಿ, ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅಧಿಕಾರಿಗಳು ಮತ್ತು ಬಿಜೆಪಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಗ್ರಾಮೀಣ ಘಟಕ ಅಧ್ಯಕ್ಷ ಸುರೇಶ ಅಕ್ಕಿವಾಟ,  ಸದಾಶಿವ ಹೊಸಮನಿ, ಪುರಸಭೆ ನಾಮನಿದೇರ್ಶಕ ಸದಸ್ಯ ಶೀತಲ ಘೂಳಣ್ಣವರ ಸೇರಿದಂತೆ ನೇಕಾರ ಬಾಂಧವರು ಉಪಸ್ಥಿತರಿದ್ದರು.

----------------------
👇