ತೇರದಾಳದ ಬಸ್ ನಿಲ್ದಾಣದ ಹತ್ತಿರ ರೈತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ತೇರದಾಳ : ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಕಂದಾಯ ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 
  ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ ನಾಡಗೌಡ ಹಾಗೂ ಹಸಿರು ಸೇನೆಯ ಸಂಘಟನೆಯ ಕಾರ್ಯದರ್ಶಿ ಮೃತ್ಯುಂಜಯ ತೆಳಗಿನಮನಿ ಮಾತನಾಡಿ ಮಾರುಕಟ್ಟೆಗಳಲ್ಲಿ ಬೆಲೆ ಗಗನಕ್ಕೇರಿದೆ ಆದರೆ ರೈತರು ಬೆಳೆದ ಬಳೆಗೆ ಬೆಲೆ ಇಲ್ಲದಂತಾಗಿದೆ. ಇಂದಿರಾಗಾಂಧಿ ಆಡಳಿತದಲ್ಲಿ ಬ್ಯಾಂಕ್, ಸಂಸ್ಥೆಗಳನ್ನು ಸಾರ್ವಜನಿಕ ವಲಯಗಳಾಗಿ ಮಾಡಿ ರಾಷ್ಟ್ರೀಕೃತ ಯೋಜನೆಗಳನ್ನಾಗಿ ಮಾಡಿದ್ದರು. ಈಗ ಭಾಜಪ ಆಡಳಿತದಲ್ಲಿ ಎಲ್ಲವನ್ನು ಮಾರುತ್ತಿದ್ದಾರೆ ಎಂದು ಆರೋಪಿಸಿದರು. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಸಂಚು ರೂಪಿಸುತ್ತಿದೆ. ರೈತರ ಪಾಲಿಗೆ ಮಾರಕವಾಗಿರುವ ಈ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ ಬಂದ್ ಹಮ್ಮಿಕೊಂಡಿದೆ. ರೈತರು ರಾಷ್ಟ್ರದ ಬೆನ್ನೆಲಬು ಎಂದು ಸುಳ್ಳು ಹೇಳುತ್ತಿರುವ ಸರ್ಕಾರ ಚುನಾವಣೆಯಲ್ಲಿ ಬರಿ ಆಶ್ವಾಸನೆಗಳನ್ನು ಹೇಳುತ್ತಾ ಬಂದಿದೆ. ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೆ ಬೇಷರತ್ತಾಗಿ ವಾಪಪಸ್ಸು ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನೆಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿದರು. 
   ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಮಗೆಪ್ಪ ತಾರದಾಳ, ಬುಜಬಲಿ ಕೆಂಗಾಲಿ, ಭರಮಪ್ಪ ಸವದಿ, ಬಾಬು ಕುಲಗೂಡ, ಲಕ್ಷ್ಮಣ ಹಳ್ಳೂರ, ಅಪ್ಪಾಸಾಬ ಪಡಸಲಗಿ, ಹನಮಂತ ಪೂಜಾರಿ, ದೇಸಾಯಿ, ರಾಜು ನದಾಫ, ಪರಸಪ್ಪ ಕಂಬಾರ, ಪರಸಪ್ಪ ಗಾಡದಿ, ಶ್ರೀಶೈಲ ಬೃಂಗಿ, ಅಜೀತ ಬನಜವಾಡ, ಕಮಲದಿನ್ನಿ ಸೇರಿದಂತೆ ನೂರಾರು ಜನ ರೈತ ಸಂಘದ ಪದಾಧಿಕಾರಿ ಹಾಗೂ ಪಟ್ಟಣದ ಪ್ರಮುಖರು ಇದ್ದರು.
   ಹೆಚ್ಚುವರಿ ಪಿಎಸ್‍ಐ ಎಸ್.ಕೆ. ಸೂರ್ಯವಂಶಿ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೂಬಸ್ತ್ ಗೆ ಕ್ರಮ ಕೈಗೊಳ್ಳಲಾಗಿತ್ತು.