ಬಂಡಿಗಣಿ 27:ಮಹಾತ್ಮ ಗಾಂಧೀಜಿ ಕನಸು ನನಸಾಗಬೇಕಾದರೆ ಪ್ರತಿ ಗ್ರಾಮಗಳು ಸುಧಾರಣೆ ಆದರೆ ದೇಶ ಉದ್ದಾರವಾಗುವದು.ಅಧಿಕಾರಿಗಳು ಸಾತ್ವಿಕರಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದರೆ ಯಾರಿಗೂ ಹೆದರುವ ಅವಶ್ಯಕತೆವಿಲ್ಲ.ಧರ್ಮದಿಂದ ಇದ್ದವರನ್ನು ಧರ್ಮ ಸದಾಕಾಲ ರಕ್ಷಣೆ ಮಾಡುತ್ತದೆ.ಅಧಿಕಾರ ದುರುಪಯೋಗವಾಗಬಾರದು.ಕಾವಿ, ಖಾದಿ,ಕಾಖಿ ಒಂದಾಗಿ ನಡೆದರೆ ದೇಶ ರಾಮ ರಾಜ್ಯವಾಗುವದೆಂದು ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ಬಂಡಿಗಣಿಯ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದಲ್ಲಿ ಅನುಭವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸತತ ಪ್ರಯತ್ನದೊಂದಿಗೆ ದೈವ ಬಲವಿದ್ದರೆ ಜೀವನದಲ್ಲಿ ಬೇಕಾದನ್ನು ಪಡೆಯಲು ಸಾಧ್ಯವಿದೆ.ಸುಗುಣ ನಿರ್ಗುಣದಲ್ಲಿ ಭಕ್ತಿ ಮಾಡಿ ಮುಕ್ತಿ ಹೊಂದಿರಿ. ಅಪತ್ತಿನಲ್ಲಿ ಸಹಾಯವಾದವರಿಗೆ ಅನ್ಯಾಯ ಮಾಡದೇ ಮರೆಯದೆ ಸಹಾಯ ಸಹಕಾರ ನೀಡಿ ಸ್ಮರಿಸಬೇಕು.ತಾಯಿ ತಂದೆ ಗುರು ಹಿರಿಯರ ಮಾತು ಕೇಳಿ ಸನ್ಮಾರ್ಗದಲ್ಲಿ ಸಾಗಿದರೆ ಒಳ್ಳೆಯದಾಗುತ್ತದೆ.ಒಳ್ಳೆಯವರ ಸಂಗ ಮಾಡಿದರೆ ಒಳ್ಳೆಯವರಾಗಲು ಸಾಧ್ಯ.ಆಸ್ತಿ ಅಂತಸ್ತು ಹಣದ ಆಸೆಗಾಗಿ ಹೀನ ಕೃತ್ಯ ಮಾಡಿ ಪಾಪಕ್ಕೆ ಗುರಿಯಾಗಬಾರದು. ಸತ್ಯದ ಕಾಯಕ ಮಾಡಿ ಸಂಪತ್ತು ಗಳಿಸಬೇಕು. ಅಷ್ಟಾವರಣದ ಪೂಜೆ, ಸಾವಿರ ವರ್ಷ ತಪಸ್ಸಿಗಿಂತ ನೀತಿಯೇ ಶ್ರೇಷ್ಠವಾದದ್ದು.ಗುರುವಿನ ಮೇಲೆ ಅಪನಂಬಿಕೆವಿಡದೆ ಪೂರ್ಣವಾಗಿ ನಂಬಿ ನಡೆಯಿರಿ. ಅನುಭವದಿಂದ ಭಕ್ತಿ ಮಾಡಿ ಮುಕ್ತಿ ಪಡೆದು ಪರಿಶುದ್ಧ ವಾದ ಮನಸ್ಸನ್ನು ಹೊಂದಿದರೆ ಮಾನವ ಜನ್ಮ ಉದ್ದಾರವಾಗುವುದೆಂದು ಹೇಳಿದರು. ಕುಲಹಳ್ಳಿ ಗ್ರಾಮ ಪಂ, ಅಭಿವೃದ್ಧಿ ಅಧಿಕಾರಿ ಸಂಗಮೇಶ ಸೋರಗಾಂವಿ ಮಾತನಾಡಿ ಭಕ್ತರಿಗೆ ಸನ್ಮಾರ್ಗ ತೋರಿಸಿ ಭಕ್ತಿ ನೀತಿ ಕಲಿಸಿ ಪವಾಡ ಮಾಡಿ ಸಮಾಜ ಕಲ್ಯಾಣ ಮಾಡುವ ಮಹಾತ್ಕಾರ್ಯವನ್ನು ದಾನೇಶ್ವರ ಶ್ರೀಗಳು ಮಾಡುತ್ತಿದ್ದಾರೆ ನಮಗೆಲ್ಲರಿಗೂ ಶ್ರೀಗಳ ಮಾರ್ಗದರ್ಶನ ಅವಶ್ಯವಿದೆ ಎಂದು ಹೇಳಿದರು. ದಾನೇಶ್ವರ ಶ್ರೀಗಳನ್ನು ಕುಲಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಅಧಿಕಾರಿಗಳು ಸನ್ಮಾನಿಸಿದರು. ಈ ಸಮಯದಲ್ಲಿ ವಿಜಯ ವೇದಾಂಗ ಶ್ರೀ. ಮುತ್ತೂರ ಮಾತೋಶ್ರೀ. ಬಸವರಾಜ ಶರಣರು.ವಿ ಎಚ್ ಸನದಿ ಲೆಕ್ಕ ಸಹಾಯಕ. ಮಲ್ಲಪ್ಪ ತಂಬಾಕು ಪ ಉಪಾಧ್ಯಕ್ಷ.ಉಮಾ ಕವಟಗೊಪ್ಪ ಕಾರ್ಯದರ್ಶಿ.ನಿರ್ಮಲಾ ಬಾಗಾದಿ. ಬಸವರಾಜ ಹೂಗಾರ.ಕರೆಪ್ಪ ದಡ್ಡಿಮನಿ. ಮಾರುತಿ ದೊಡಮನಿ. ಶಿವು ಹಿರೇಮಠ ಸೇರಿದಂತೆ ಭಕ್ತರಿದ್ದು. ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು.

Social Plugin