ತೇರದಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಬೆಳೆಯೊಂದಿಗೆ ಆರೋಪಿಯ ಬಂಧನ.

ಅಕ್ರಮ ಗಾಂಜಾ ಬೆಳೆ ಬೆಳೆದ ಆರೋಪ, ಓರ್ವನ ಬಂಧನ

ತೇರದಾಳ : ಪಟ್ಟಣದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ  ಪಟ್ಟಣದ ಪೋಲಿಸರು ಜಮೀನಿನ ಸಾಗುವಳಿದಾರನೊಬ್ಬನನ್ನು ಬಂಧಿಸಿದ್ದಾರೆ.

   ಬಾಗಲಕೋಟ ಜಿಲ್ಲೆಯ ಪೋಲಿಸ್ ಅಧೀಕ್ಷಕರಾದ ಲೋಕೇಶ ಜಗಳಾಸರ್, ಜಮಖಂಡಿ ಪೋಲಿಸ್ ಉಪಾಧೀಕ್ಷಕರಾದ ಎಂ.ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ತಹಶೀಲ್ದಾರ ಸಂಜಯ ಇಂಗಳೆ ಇವರ ಸಮಕ್ಷಮದಲ್ಲಿ ದಾಳಿ ನಡೆಸಿದ ಪಿಎಸ್‍ಐ ರಾಜು ಬೀಳಗಿ ಹಾಗೂ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯ ಜಮೀನಿನ ಕಬ್ಬಿನ ಬೆಳೆಯಲ್ಲಿ ಆಕ್ರಮವಾಗಿ ಬೆಳೆದಿದ್ದ 13 ಗಾಂಜಾ ಗಿಡಗಳ ಒಟ್ಟು 7ಕೆಜಿ 490ಗ್ರಾಂ ದಷ್ಟು ಅಂದಾಜು ಬೆಲೆ 37450ರೂ. ಬೆಲೆ ಬಾಳುವ ಗಾಂಜಾವನ್ನು ವಶ ಪಡಿಸಿಕೊಂಡು ಓರ್ವನನ್ನು ಬಂಧಿಸಲಗಿದೆ ಎಂದು ತಿಳಿದು ಬಂದಿದೆ. 

   ಪ್ರಕರಣ ತೇರದಾಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಸಿಪಿಐ ಜೆ.ಕರುಣೇಶಗೌಡ ತನಿಖೆ ಕೈಗೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಆಹಾರ ನಿರೀಕ್ಷಕ ಪಿ.ಎಸ್.ಮಠಪತಿ, ಪೋಲಿಸ್ ಸಿಬ್ಬಂದಿಗಳಾದ ಕೆ.ಎಚ್.ಸನಹಟ್ಟಿ, ಎಮ್.ಆರ್.ಕೆಂಚನ್ನವರ, ಎ.ಬಿ.ಸನದಿ, ಎಮ್.ಎಮ್. ಎತ್ತಿನಮನಿ, ಎಸ್.ಎಸ್.ಜಕಾತಿ, ಎಸ್.ಐ.ಸೋನಾವನೆ, ಎಮ್.ಆರ್.ಗುರವ ಭಾಗವಹಿಸಿದ್ದರು. 

   ಈ ಕಾರ್ಯಕ್ಕೆ ಬಾಗಲಕೋಟ ಜಿಲ್ಲೆಯ ಪೋಲಿಸ್ ಅಧೀಕ್ಷಕರಾದ ಲೋಕೇಶ ಜಗಳಾಸರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.