ತೇರದಾಳ ಪಟ್ಟಣದ ಲಿಂ.ಶಿವಲಿಂಗೇಶ್ವರ ಸ್ವಾಮಿಗಳವರ 19ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಧರ್ಮ ಜಾಗೃತೆ ಪಾದಯಾತ್ರೆಯನ್ನು ಶಿವಕುಮಾರ ದೇವರು ಹಮ್ಮಿಕೊಂಡಿದ್ದರು.

ತೇರದಾಳ : ಹನ್ನೆರಡನೆಯ ಶತಮಾನದ ಶರಣರು ಲಿಂಗಪೂಜೆ, ದಾಸೋಹ, ಸಮಾನತೆ, ಆಮೇಲೆ ಹಾನಗಲ್ ಕುಮಾರ ಮಹಾಸ್ವಾಮಿಗಳು ಶಿವಯೋಗ ಮಂದಿರ, ಅಖಿಲ ಭಾರತ ವೀರಶೈವ ಮಹಾ ಸಭೆ, ಇದೇ ಪರಂಪರೆಯಲ್ಲಿ ಶಿವಲಿಂಗ ಮಹಾಸ್ವಾಮಿಗಳು ವಿರಕ್ತ ಮಠದಿಂದ ಪ್ರಸಾದ ಸಮೀತಿ ಇವುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದರು ಶಿವಕುಮಾರ ದೇವರು ಹೇಳಿದರು. 

   ಪಟ್ಟಣದ ವಿರಕ್ತ ಮಠದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಭಾಗದ  ಜನತೆಗೆ ಅನ್ನ ದಾಸೋಹ ಮಾಡುವಂತೆ ಎಲ್ಲರಿಗೂ ನೀಡುವಂತೆ ಭಾವವನ್ನು ವಿರಕ್ತ ಮಠದ ಶಿವಲಿಂಗ ಮಹಾಸ್ವಾಮಿಗಳು ಕಲಿಸಿದರು. ಕಲ್ಯಾಣದಲ್ಲಿ ಹನ್ನೆರಡನೆಯ ಶತಮಾನದಲ್ಲಿ ನಡೆಯುತ್ತಿದ್ದಂತ ಶಿವಾನುಭವವನ್ನು ತೇರದಾಳ ಭಾಗದಲ್ಲಿ ನಡೆಯುವಂತೆ ಸುಮಾರು ಜನರನ್ನು ಸೇರಿಸಿ ಅಕ್ಕನ ಬಳಗವನ್ನು ಕಟ್ಟಿಕೊಂಡು ಶಿವಾನಭವ ಸಂಘಟನೆಯನ್ನು ಮಾಡಿದರು. ಅದು ಈಗಲೂ ಸಹ ವಿರಕ್ತ ಮಠದಲ್ಲಿ ಪ್ರತಿ ಸೋಮವಾರ ಶಿವಾನುಭವ ನಡೆಯುತ್ತಿದೆ. ಮತ್ತು ಪ್ರತಿ ತಿಂಗಳ ಎರಡನೆಯ ರವಿವಾರ ಮನೆ ಮನೆಗಳಿಗೆ ಹೋಗಿ ವಚನ ಸಾಹಿತ್ಯವನ್ನು ತಲೆಮೇಲೆ ಹೊತ್ತುಕೊಂಡು ಸಂಚಾರಿ ಶಿವಾನುಭವವನ್ನು ಕೊಡುಗೆಯಾಗಿ ಕೊಟ್ಟವರು ತೇರದಾಳದ ವಿರಕ್ತ ಮಠದ ಶಿವಲಿಂಗ ಮಹಾಸ್ವಾಮಿಗಳು. ಭಕ್ತರ ಮನೆ ಮನೆಗೆ  ಪಾದಯಾತ್ರೆಯ ಮೂಲಕ ಹೋಗಿ ಅವರ ಕಷ್ಟ ಇಷ್ಟಾರ್ಥಗಳನ್ನು ತಿಳಿಯುತ್ತಿದ್ದರು.  ಸರಳತೆಯಿಂದ ಬಾಳಿ ಬದುಕಿದವರು. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಚನದ ಜೊತೆಗೆ ಗಜಾನನ ಮಿತ್ರ ಮಂಡಳಿವನ್ನು ಸ್ಥಾಪಿಸಿ ಅದು ನಿರಂತವಾಗಿ ನಡೆಯುವಂತೆ ಮಾರ್ಗದರ್ಶನ ಹಾಕಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಈಗಲೂ ಆ ಕಾರ್ಯಕ್ರಮಗಳು ಜರುಗುತ್ತಲಿವೆ. 

  ನೂರೊಂದು ವಿರಕ್ತ ಮಠಗಳಲ್ಲಿ ಇದು ಒಂದು. ವಿರಕ್ತ ಮಠದಲ್ಲಿ ಲಿಂ.ಶಿವಲಿಂಗೇಶ್ವರ ಸ್ವಾಮಿಗಳವರ 19ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಧರ್ಮ ಸಭೆ ಹಾಗೂ ಸೆ.20ರಿಂದ ಸೆ.30 ಗುರುವಾರದವರೆಗೆ ಪ್ರತಿದಿನ ಸಾಯಂಕಾಲ 7ರಿಂದ 8ಗಂಟೆಯ ವರೆಗೆ ಪ್ರವಚನವನ್ನು ಬಳೂಟಗಿಯ ಶಿವಕುಮಾರ ದೇವರು ಹೇಳುತ್ತಿದ್ದಾರೆ. ಮತ್ತು ಸೆ.30ರಂದು ಗುರುವಾರ ಬೆಳಿಗ್ಗೆ ಶಿವಲಿಂಗೇಶ್ವರ ಸ್ವಾಮಿಗಳ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚಣೆ ನಡೆಯುವುದು. ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಚಿಮ್ಮಡ ವಿರಕ್ತ ಮಠದ ಪ್ರಭು ಸ್ವಾಮಿಗಳು, ಸ್ಥಳೀಯ ಹಿರೇಮಠದ ಗಂಗಾಧರ ದೇವರು ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ಗಣ್ಯ ಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ. ಹಾಗೂ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊಳ್ಳುವುದೆಂದು ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

  ಈ ಸಂದರ್ಭದಲ್ಲಿ ಮಗಯ್ಯಸ್ವಾಮಿ ತೆಳಗಿನಮನಿ, ನಿಂಗಪ್ಪ ಮಾಲಗಾವಿ, ಮಹಾಂತೇಶ ಪಂಚಾಕ್ಷರಿ, ಬಸವರಾಜ ಪಟ್ಟಣಶೆಟ್ಟಿ, ಮನೋಹರ ಹುದ್ದಾರ, ನಿಂಗಪ್ಪ ಮಲಾಬದಿ, ಅಪ್ಪು ಮಂಗಸೂಳಿ, ಮಹಾದೇವ ಬಿಜ್ಜರಗಿ ಸೇರಿದಂತೆ ಇನ್ನಿತರರು ಇದ್ದರು. 

------------------------