ಹಳ್ಳೂರ 19:ಕ್ರಿಯಾಜೆನ್ ಕಂಪನಿಯ ಉತ್ಪನ್ನ ಗಳನ್ನು ಬಳಸಿ ಉತ್ತಮ ಇಳುವರಿ ಪಡೆಯಿರಿ.ಬೆಳೆಗಳಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿ ಹಾಗೂ ರೋಗ ಬಾರದಂತೆ ಹತೋಟಿಯಲ್ಲಿಡಬಹುದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆದು ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳಲು ಕ್ರಿಯಾಜೆನ್ ಉತ್ಪನ್ನಗಳನ್ನು ಬಳಸುವದರಿಯಿಂದ ಸಹಕಾರಿಯಾಗುತ್ತದೆ ಎಂದು ಉಮೇಶ ಆನಿಗೋಳ ಹೇಳಿದರು. ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹಮ್ಮಿಕೊಂಡ ಕ್ರಿಯಾಜೆನ್ ಸಂಸ್ಥೆಯ ಮುಖ್ಯ ಅಧಿಕಾರಿಗಳಳಾದ ಅಜೇಯ ಗೌಡರ ಮಾರ್ಗದರ್ಶನ ಹಾಗೂ ಕುಮಾರ ಲೋಕಣ್ಣವರ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೆಳೆಗಳಿಗೆ ಸಮಗ್ರ ಪೋಷಕಾಂಶ ನಿರ್ವಹಣೆ ಕ್ರಿಯಾಜೆನ್ ಪಾತ್ರ ಮುಖ್ಯ ಕಾರ್ಯಾಗಾರದಲ್ಲಿ ಮಾತನಾಡಿ ಕಬ್ಬಿಣನಲ್ಲಿ ಡೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಹಾಗೂ ಅರಿಶಿನ ಬೆಳೆಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ರೋಗ ಮತ್ತು ಕೀಟಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಮಂಜುನಾಥ ಗುಲಗಂಜಿ ಮಾತನಾಡಿ ಕಬ್ಬಿಣ ಸಮಗ್ರ ಪೋಷಕಾಂಶ ನಿರ್ವಹಣೆಯಲ್ಲಿ ಕ್ರಿಯಾಜೆನ್ ಕಂಪನಿಯ ಔಷದಿ ಬಳಸುವದರಿಂದ ರೈತರಿಗೆ ಅನೇಕ ರೀತಿಯ ಲಾಭವನ್ನು ಪಡೆಯಬಹುದೆಂದು ಹೇಳಿದರು. ಇದೆ ಸಂದರ್ಭದಲ್ಲಿ ಕುಮಾರ ಲೋಕಣ್ಣವರ. ಅಡಿವೆಪ್ಪ ಪಾಲಬಾಂವಿ. ಮುಪ್ಪಯ್ಯ ಹಿಪ್ಪರಗಿ. ಬಸವರಾಜ ಲೋಕಣ್ಣವರ. ಯಮನಪ್ಪ ನೀಡೋಣಿ. ಸಂಗಪ್ಪ ನಾಯಿಕ. ಮುರಿಗೆಪ್ಪ ಮಾಲಗಾರ.ಭೀಮಪ್ಪ ಡಬ್ಬನವರ.ದುಂಡಪ್ಪ ಕೊಂಗಾಲಿ.ದುಂಡಪ್ಪ ಸುತಾರ.ಶ್ರೀಶೈಲ ಬಾಗೋಡಿ. ಅಪ್ಪಯ್ಯ ರಡರಟ್ಟಿ ಸ್ಥಳೀಯ ಅಧಿಕಾರಿಗಳಾದ ಭೀಮಶಿ ಮಾಳಿ ಹಾಗೂ ಶಿವಭೋದ ಬಿಜಗುಪ್ಪಿ.ಸೇರಿದಂತೆ ರೈತರಿದ್ದರು.
-----

Social Plugin