ಬಂಡಿಗಣಿ 02:ಕಾಯಕ ಯೋಗಿ ಪ್ರಶಸ್ತಿ ನೀಡಿ ನನಗೆ ದಾಸೋಹ, ಸಪ್ತಾಹ ಹೆಚ್ಚಾಗಿ ಮಾಡುವದಕ್ಕೆ ಸ್ಫೂರ್ತಿ ನೀಡಿದಂತಾಯಿತು. ಶ್ರದ್ದಾ ಭಕ್ತಿಯಿಂದ ಮಾಡಿದ ಪುಣ್ಯದ ಕಾರ್ಯಕ್ಕೆ ಪ್ರತಿ ಫಲ ದೊರೆಯುವದು, ಭಕ್ತಿ,ದಾನ ಗುಪ್ತವಿದ್ದರೆ ಅದು ದೇವರಿಗೆ ಸಲ್ಲುತ್ತದೆ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ನಡೆದ ಪಾರಮಾರ್ಥಿಕ ಸಪ್ತಾಹದ ದಿವ್ಯ ಸಾನಿಧ್ಯವಹಿಸಿದ ಹಾಗೂ ಕಾಯಕ ಯೋಗಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ ಧಾರ್ಮಿಕ ಕಾರ್ಯವನ್ನು ಆಶಾಭಾವನೆ ಬಿಟ್ಟು ನಿಸ್ಕಾಮದಿಂದ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವದು. ಅಧಿಕಾರ, ಹೆಣ್ಣು ಹೊನ್ನು ಆಸ್ತಿಗಾಗಿ ಜೀವ ಹತ್ಯೆ,ತಂಟೆ ತಕರಾರು ಮಾಡಿ ಕೋರ್ಟು ಕಚೇರಿ ಅಲುದಾಡಿ ಜೀವನ ಹಾಳು ಮಾಡಿಕೊಳ್ಳದೆ. ನ್ಯಾಯವನ್ನು ಗ್ರಾಮದ ಸತ್ಯವಂತ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಂಡು ಸುಖ ಜೀವನ ಸಾಗಿಸಿರಿ. ಬೇರೆಯವರ ಸಂತ ಮಹಾತ್ಮರ ಮನಸ್ಸನ್ನು ನೋಯಿಸುವದು ಮಹಾಪಾಪವಾದದ್ದು.
ವ್ಯಸನದಿಂದ ಮುಕ್ತವಾದರೆ ಜೀವನ ಸುಖವಾಗಿದ್ದು ಮನಸ್ಸಿಗೆ ಶಾಂತಿ ನೆಲೆಸುವದು. ಶ್ರೇಷ್ಠವಾದ ಮಾನವ ಜನ್ಮ ಹಾಳು ಮಾಡಿಕೊಳ್ಳದೆ ಸಾರ್ಥಕ ಮಾಡಿಕೊಳ್ಳಿರಿ.ಮನ ಅನ್ನುವ ಹೊಲವನ್ನು ಸ್ವಚ್ಛವಾಗಿಟ್ಟು ನೀತಿ ಮಾರ್ಗದಲ್ಲಿದ್ದು ಭಕ್ತಿ ಮಾಡಿದರೆ ಮುಕ್ತಿ ದೊರೆಯುವದು.ಗೋ ಹತ್ಯೆ ಶಿಸು ಹತ್ಯೆ ಜೀವ ಹತ್ಯೆ ಪಾಪದಂಥ ಕಾರ್ಯ ಕಡಿಮೆ ಆಗಿ ದಾನ ಧರ್ಮದಂಥ ಕಾರ್ಯ ಹೆಚ್ಚು ನಡೆದರೆ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವದೆಂದು ಹೇಳಿದರು. ಕಪರಟ್ಟಿ-ಕಳ್ಳಿಗುದ್ದಿ ಬಸವರಾಜ ಸ್ವಾಮಿಗಳು ಹಿರೇಮಠ ಮಾತನಾಡಿ ರಾಜ್ಯ,ಹೊರ ರಾಜ್ಯಗಳಲ್ಲಿ ಅನ್ನದಾಸೋಹ ಸಪ್ತಾಹ ನಡೆಸಿ ಭಕ್ತರಿಗೆ ಸನ್ಮಾರ್ಗ ತೋರಿಸಿ ಜಗತ್ತು ಉದ್ದಾರ ಮಾಡುವ ದಾನೇಶ್ವರ ಶ್ರೀಗಳಿಗೆ ಎಷ್ಟು ಪ್ರಶಸ್ತಿ ನೀಡಿದರು ಸಾಲದು. ದಾನೇಶ್ವರ ಅಪ್ಪಾಜಿಯವರ ಕ್ರಪೆಯಿಂದ
ಮಕ್ಕಳ ಬಾಗ್ಯ ಶ್ರೀ ಸಂಪತ್ತು ಸುಖದಿಂದ ನೆಮ್ಮದಿಯಾಗಿ ಜೀವನವನ್ನು ನಡೆಸುತ್ತಿದ್ದೇವೆ ಹೇಳಿದರು. ಶಾಂತಮ್ಮ ತಾಯಿ ಬಿಲಕುಂದಿ ಮಾತನಾಡಿ ಸತ್ಸಂಗದಲ್ಲಿದ್ದು ಸಾದು ಸಂತರ ಮಾರ್ಗದರ್ಶನದಲ್ಲಿ ಸಾಗಿದರೆ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವದು. ಕಪರಟ್ಟಿ- ಕಳ್ಳಿಗುದ್ದಿ ಶ್ರೀ ಬಸವಾನಂದ ಸ್ವಾಮಿಗಳು, ಕಪರಟ್ಟಿ,ಕಳ್ಳಿಗುದ್ದಿ ಗೊಸಬಾಳ ಗುರು ಹಿರಿಯರು ದಾನೇಶ್ವರ ಶ್ರೀಗಳಿಗೆ "ಕಾಯಕ ಯೋಗಿ" ಪ್ರಶಸ್ತಿ ನೀಡಿದರು.ಹಾಗೂ ಹೊನಕುಪ್ಪಿ ಸದ್ಭಕ್ತರಿಂದ ದಾನೇಶ್ವರ ಶ್ರೀಗಳನ್ನು ಸನ್ಮಾನಿಸಿ ಸತ್ಕರಿಸಿದರು. ಇದೆ ಸಂದರ್ಭದಲ್ಲಿ ಮಹಾಂತೇಶ ಮಠದ.ಕಳ್ಳಿಗುದ್ದಿ ಗ್ರಾಮ ಪ ಅಧ್ಯಕ್ಷ ಲಕ್ಷ್ಮಣ ಚನ್ನಾಳ. ಭೀಮಸೆಪ್ಪಾ ಅಳಗೋಡಿ. ಮುತ್ತೇಪ್ಪ ಇಟ್ಟಪ್ಪಗೋಳ. ವೀಣಾ ಹೂಗಾರ ನ್ಯಾಯವಾದಿಗಳು. ಕರೆಪ್ಪ ದಡ್ಡಿಮನಿ.ಚತುರ ಲಗಳಿ.ಬಸವರಾಜ ಹೆಗಡೆ.ಮಹಾಲಿಂಗ ಪರುಶುಟ್ಟಿ.ಬಿ ಕೆ ಪುಗಶೆಟ್ಟಿ. ಬಸಪ್ಪ ಹಳ್ಳೂರ. ರಮೇಶ ದಳವಾಯಿ. ಅಡಿವೆಪ್ಪ ಬುಳ್ಳಿ. ಬಸಪ್ಪ ಕಪರಟ್ಟಿ. ಬಸವರಾಜ ನಾಯ್ಕ.ಸೇರಿದಂತೆ ಅನೇಕರಿದ್ದು ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು.

Social Plugin