*ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಿ*
ವಕೀಲರು ತಾವು ಲಸಿಕೆಯನ್ನು ಪಡೆದುಕೊಳ್ಳುವುದರ ಜೊತೆಗೆ ತಮ್ಮಕುಟುಂಬ ವರ್ಗದವರಿಗೂ ಹಾಗೂ ಸುತ್ತ ಮುತ್ತಲಿನ ಜನರಿಗೂ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಬೇಕು ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ವಕೀಲರ ಸಂಘದಲ್ಲಿ ಎರಡನೆಯ ಡೋಸ್ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. 
ಕೋವಿಡ್ ನಿರ್ಮೂಲನೆಗೆ ಲಸಿಕೆ ಅಗತ್ಯವಾಗಿದೆ. ವಕೀಲರು ಹಲವಾರು ಪಕ್ಷಗಾರರ ಜೊತೆಗೆ ಒಡನಾಟ ಹೊಂದಿರುವುದರಿAದ ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಪಕ್ಷಗಾರರಿಗೂ ಕೂಡಾ ಲಸಿಕೆ ಪಡೆದುಕೊಳ್ಳುಂತೆ ತಿಳಿಸಬೇಕು. 
ಲಸಿಕೆ ಪಡೆದುಕೊಳ್ಳುವುದರ ಕುರಿತು ಯಾವುದೆ ಭಯ ಬೇಡ ಎಂದು ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶೆ ಸುಶ್ಮಾ ಟಿ. ಅವರು ಲಸಿಕೆಯನ್ನು ಪಡೆದುಕೊಂಡರು. 

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ