ತೇರದಾಳದ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ಇವರನ್ನು ದೇವಸ್ಥಾನದ ಅರ್ಚಕರು ಸತ್ಕರಿಸಿದರು.

ನಸುಕಿನ ಜಾವದಲ್ಲೇ ಶ್ರೀಅಲ್ಲಮಪ್ರಭುವಿನ ದರ್ಶನ ಪಡೆದು ಅರ್ಚಕರಿಂದ ಸನ್ಮಾನ ಸ್ವೀಕರಿಸಿದರು

ತೇರದಾಳ : ಶ್ರಾವಣ ಮಾಸವು ಹೆಚ್ಚು ಪವಿತ್ರವಾದ ಮಾಸವಾಗಿದ್ದು ಈ ಮಾಸದಲ್ಲಿ ವಿಶೇಷವಾಗಿ ಶಿವನ ಆರಾಧನೆ ಮಾಡಲಾಗುತ್ತದೆ. ಈ ಮಾಸದಲ್ಲಿ ಹಬ್ಬಗಳ ಆಗಮನವು ಆರಂಭವಾಗುತ್ತದೆ. ಈ ಶ್ರಾವಣ ಮಾಸದ ಮೊದಲ ಸೋಮವಾರವಾದ ಇಂದು ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವರ ದರ್ಶನ ಪಡೆದು ಪುಣಿತರಾಗಲು ಭಕ್ತರು ಬರುವುದು ವಿಶೇಷ. ಅದರಲ್ಲಿ ಶ್ರಾವಣ ಮಾಸದ ಮೊದಲನೇ ಸೋಮವಾರದಂದು ತೇರದಾಳದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿರುವ ತಹಶೀಲ್ದಾರ ಪ್ರಶಾಂತ ಚನಗೊಂಡರವರು  ಶ್ರೀ ಅಲ್ಲಮಪ್ರಭು ದೇವರ ಆಶೀರ್ವಾದದಿಂದ ತಹಶೀಲ್ದಾರ ಹುದ್ದೆಯಲ್ಲಿದ್ದರೂ ಅವರು ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವರ ದೇವಸ್ಥಾಕ್ಕೆ ನಸುಕಿನ ಜಾವದಲ್ಲೇ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಅರ್ಚಕರಿಂದ ಸನ್ಮಾನ ಸ್ವೀಕರಿಸಿದರು.

  ಕೆಲಸದ ಒತ್ತಡದಲ್ಲಿಯೂ ಜಮಖಂಡಿಯಿಂದ ಸುಮಾರು ಮೂವತ್ತು ಕಿ.ಮೀ. ದೂರದಲ್ಲಿನ ತೇರದಾಳ ಪಟ್ಟಣಕ್ಕೆ ನಸುಕಿನ ಜಾವದಲ್ಲಿ ಆಗಮಿಸಿ ದರ್ಶನ ಪಡೆದು ಅರ್ಚಕರಿಂದ ಸನ್ಮಾನ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರಾವಣ ಮಾಸದಲ್ಲಿ ಎಷ್ಟೋ ಕೆಲಸದ ಒತ್ತಡವಿದ್ದರೂ ದೇವಸ್ಥಾನಕ್ಕೆ ಬರುವುದು ಮಾತ್ರ ತಪ್ಪುವುದಿಲ್ಲ. ಇಂದು ಮೇಲಾಧಿಕಾರಿಗಳ ಸಭೆಯಿದ್ದ ಕಾರಣ ನಾನು ನಸುಕಿನ ಜಾವದಲ್ಲಿಯೇ ಬರಬೇಕಾಯಿತು. ದರ್ಶನಕ್ಕೆ ಬರುವ ಭಕ್ತರು ಕೋವಿಡ್ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಬೇಕು, ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಸರಕಾರದ ಕೋವಿಡ್ ನಿಯಮಗಳನ್ನು ಚಾಚು ತಪ್ಪದೇ ಎಲ್ಲರು ಪಾಲಿಸಬೇಕು ಮತ್ತು ದೇವಸ್ಥಾನದಲ್ಲಿ ಸ್ವಚ್ಚತೆಯನ್ನು ಭಕ್ತರು ಕಾಪಾಡಬೇಕು ಎಂದು ಅವರು ಪತ್ರಿಕೆಗೆ ತಿಳಿಸಿದರು.

   ಈ ಸಂದರ್ಭದಲ್ಲಿ ಅರ್ಚಕರಾದ ನಿಂಗಯ್ಯ ಭಾವಿ, ಬಾಬು ಭಾವಿ, ರಾಜು ಭಾವಿ ಅರ್ಚಕ ವೃಂದ, ಶ್ರೀಅಲ್ಲಮಪ್ರಭು ಚಲನಚಿತ್ರ ನಿರ್ಮಾಪಕ ಮಾಧವಾನಂದ ಶೇಗುಣಸಿ, ಪ್ರಕಾಶ ಚಿಂಚಕಂಡಿ, ಸಂಗಮೇಶ ನಿವರಗಿ ಸೇರಿದಂತೆ ಭಕ್ತರಿದ್ದರು.