ನಡೆದಾಡುವ ದೇವರೇಂದೆನಿಸುವ ಸಿದ್ದೇಶ್ವರ ಶ್ರೀಗಳು.

ಕೋವಿಡ್‍ದಿಂದಾಗಿ ಶೈಕ್ಷಣಿಕ ರಂಗ ಕುಸಿತ-ಸಿದ್ದೇಶ್ವರ ಶ್ರೀಗಳು

 ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ನನ್ನದು ತನ್ನದೆಂಬ ಮಮಕಾರ ತೊರೆದ ಮಹಾ ಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳು,. ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡಾ. ಸಂತರ ನಾಡಿನಲ್ಲಿದ್ದರು ಈಗಲೂ ಇದ್ದಾರೆ. ಆದರೆ ಜ್ಞಾನ ಯೋಗಿಗಳು ಬಹಳ ಅಪರೂಪ. ಅಂತವರಲ್ಲಿ ಬಳಕೆ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳನ್ನು ದರ್ಶನ ಪಡೆದಾಗ ಕೋವಿಡ್ ಮಹಾಮಾರಿ ಎಲ್ಲೆಡೆ ತನ್ನ ಕಬಂದಬಾಹು ಚಾಚಿ ಮಕ್ಕಳ ಬಾಲ್ಯದ ಜೊತೆಗೆ ಶಿಕ್ಷಣವನ್ನು ಕಸಿದುಕೊಂಡಿತು. ವಿದ್ಯಾರ್ಥಿಗಳಿಗೂ ಶಾಲಾ ಶಿಕ್ಷಕರಿಗೂ ಇರುವ ಸಂಬಂಧವನ್ನು ಕೊರೊನಾ ಕಸಿದುಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಿದೆ ಎಂದು ಸಿದ್ಧೇಶ್ವರ ಶ್ರೀಗಳು ಹೇಳಿದರು.

 

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದು ಬರತದ ಅದು ಹೋಗುತದ. ಆದರ ಬಂದಾಂಗ ಹೋದರ ಚಲೋ ಅದ, ಹೋಗುವಾಗ ತಗೊಂಡ ಏನು ಹೊರಟಿದೆಯಲ್ಲ ಅದು ಎಲ್ಲರ ಮನಸ್ಸಿಗೆ ಬಾಳ ಕೆಟ್ಟ ಮಾಡೆತಿ. ಒಂದು, ಎರಡು, ಮೂರು ಅಲೆಗಳು ಅನ್ನಕತಾರು ಸಂಖ್ಯೆಗಳಿಗೆನು ಮಿತಿಯಿಲ್ಲ, ಕೊನೆಯಿಲ್ಲ, ಅವು ಬರತಾವು ಹೋಗತಾವು ಆದರ ನಾವು ಪರಿಸರವನ್ನು ಚನ್ನಾಗಿ ಇಟ್ಟಗೊಂಡು, ದೇಹದ ಆರೋಗ್ಯವನ್ನು ಚನ್ನಾಗಿ ಕಾಯ್ದುಕೊಳ್ಳಬೇಕು. ಪ್ರಕೃತಿ ವಿರುದ್ಧ ಹೋಗಬಾರದು ಅಲ್ಲದೇ ಅನೇಕ ಹೊರದೇಶಗಳಲ್ಲಿ ಸರಕಾರ ಮಾರ್ಗದರ್ಶನ ಮಾತ್ರ ಕೊಡುತ್ತದೆ. ಆದರೆ ಜನರು ಮಾತ್ರ ತಮ್ಮ ಆರೋಗ್ಯದ ಬಗ್ಗೆ ತಾವೇ ಕಾಳಜಿವಹಿಸಿಕೊಳ್ಳಬೇಕು. ಮತ್ತು ಹೊರದೇಶಗಳಲ್ಲಿ ಯಾವುದೇ ವಸ್ತುಗಳು ಉಚಿತವಾಗಿ ಕೊಟ್ಟಿಲ್ಲ. ಪ್ರಜೆಗಳ ಜವಾಬ್ದಾರಿ ಪ್ರಜೆಗಳ ಮೇಲೆ ಬಿಟ್ಟಿದೇ. ನಮ್ಮ ದೇಶದಲ್ಲಿ ಎಲ್ಲನ್ನೂ ಉಚಿತವಾಗಿ ಕೊಟ್ಟಿದ್ದರೂ ಜನರ ಜವಾಬ್ದಾರಿ ಕಡಿಮೆಯಾದಂತಿದೆ.  ಬಂದ ಭಕ್ತರ ಕ್ಷೇಮ ಸಮಾಚಾರವನ್ನು ಕೇಳುವುದನ್ನು ಮಾತ್ರ ಅವರು ಮರೆಯಲಿಲ್ಲ.

   ಈ ಸಂದರ್ಭದಲ್ಲಿ ಇಂಚಗೇರಿ ಸಾಂಪ್ರದಾಯದ ಪಾಕ್ಷಿಕ ಪತ್ರಿಕೆ ದೇವವಾಣಿ ಹಾಗೂ  ಸ್ವರೂಪ ಸಂದರ್ಶನ ಮಾಸ ಪತ್ರಿಕೆಯನ್ನು ಓದಿದರು. ಹಾಗೂ ಸಂಪಾದಕರಿಗೆ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಪತ್ರಿಕೆಗೆ ಶುಭ ಹಾರೈಸಿದರು.