ಮತ್ತೇ ಮರುಕಳಿಸಿದ ಎರಡು ತಲೆಮಾರು ಹಿಂದಿನ ಶ್ರೀಅಲ್ಲಮಪ್ರಭು ಗದ್ದುಗೆ ಅಲಂಕಾರ
ತೇರದಾಳ : ಪಟ್ಟಣದ ಕ್ಷೇತ್ರಾಧಿಪತಿ ಶ್ರೀ ಅಲ್ಲಮಪ್ರಭು ದೇವರ ವಿಶೇಷ ಅಲಂಕಾರದಲ್ಲಿ ಎರಡು ತಲೆಮಾರಿನ ಹಿಂದೆ ಗದ್ದುಗೆಗೆ ಮಾಡುತ್ತಿದ್ದ ಅಲಂಕಾರ ಇಂದು ಶುಕ್ರವಾರ ಯುವ ಅರ್ಚಕರು ಮತ್ತೇ ಮಾಡಿರುವುದು ವಿಶೇಷ.
ಸುಮಾರು ಎರಡು ತಲೆಮಾರಿನ ಪೂರ್ವ ಅರ್ಚಕರು ಶ್ರೀಅಲ್ಲಮಪ್ರಭು ದೇವರಿಗೆ ಅಲಂಕಾರ ಮಡುತ್ತಿರುವ ರೀತಿಯಲ್ಲಿ ಇಂದಿನ ಯುವ ಅರ್ಚಕರು ದೇವಸ್ಥಾನದಲ್ಲಿ ವಿಶೇಷವಾಗಿ ಗದ್ದುಗೆ ಅಲಂಕಾರ ಮಾಡಿದ್ದರು. ಈ ಅಲಂಕಾರ ಮಾಡಲು ಬಹಳಷ್ಟು ಹಳೆಯದಾದ ಶ್ರೀಅಲ್ಲಮಪ್ರಭು ದೇವರ ಅಲಂಕಾರದ ಭಾವಚಿತ್ರವೊಂದು ಹನಗಂಡಿಯ ದೇಸಾರ ವಾಡೆಯಲ್ಲಿ ದೊರೆತಿತ್ತು. ಆ ಭಾವಚಿತ್ರವನ್ನು ಆಧಾರವಾಗಿಟ್ಟುಕೊಂಡು ಅದೇ ರೀತಿಯಾಗಿ ಅಲಂಕಾರ ಮಾಡಿದ್ದಾರೆ. ಶ್ರೀಅಲ್ಲಮಪ್ರಭುದೇವರ ಅಲಂಕಾರಗಳಲ್ಲಿ ವಿಧಗಳಿವೆ. ಬಾರಾಪಟ್ಟಿ ಅಲಂಕಾರ ಪೂಜೆ ಮಾಡುವ ಅರ್ಚಕರು ಯಾರೂ ಇಂದಿನ ದಿನಮಾನದಲ್ಲಿ ಇಲ್ಲವೆಂಬುದು ಅರ್ಚಕರಿಂದ ತಿಳಿದು ಬಂದಿದೆ. ಹಬ್ಬ ಹರಿದಿನಗಳಲ್ಲಿ ಹಾಗೂ ವಿಶೇಷ ದಿನಗಳಲ್ಲಿಇಂತಹ ಪೂಜೆಗಳನ್ನು ಕಟ್ಟಬಹುದು. ಇನ್ನು ನಾಗರ ಪಂಚಮಿ, ದಸರಾ ಹಬ್ಬಗಳಲ್ಲಿ ಚೌಕಿ ಪೂಜೆಯನ್ನು ಮಾಡಲಾಗುತ್ತಿದೆ. ಶಿವರಾತ್ರಿಯಂದು ವಿಶೇಷ ಶ್ವೇತ ವಸ್ತ್ರಾಭರಣ ಅಲಂಕಾರ ಪೂಜೆ ಮಾಡುವುದು ಇಲ್ಲಿಯ ವಿಶೇಷವಾಗಿದೆ.
ವಿಶೇಷ ಪೂಜೆಯನ್ನು ಕಟ್ಟಿದ ಯುವ ಅರ್ಚಕರಾದ ರಾಜು ಹಿತ್ತಲಮನಿ, ಆನಂದ ಹಿತ್ತಲಮನಿ ಸೇರಿದಂತೆ ಹಿತ್ತಲಮನಿ ಬಂಧುಗಳು ಹಾಗೂ ಅರ್ಚಕ ವೃಂದದವರು ಭಾಗವಹಿಸಿದ್ದರು.
Social Plugin