ವರದಿ ಮುರಿಗೆಪ್ಪ ಮಾಲಗಾರ    
                            ಹಳ್ಳೂರ 21:ಶಿವ ಶರಣ  ನೂಲಿಚಂದಯ್ಯನವರ ಜಯಂತಿ ಆಚರಿಸಲು ಶ್ರೀಕಾಂತ್ ಭಜಂತ್ರಿ ಕರೆ  ಕೊರಮ, ಕೊರಚ,ಕುಳವ ಸಮಾಜದ ಕುಲದೈವ ಕಾಯಕ ಜಂಗಮರಾದ  ಶ್ರಿ ನೂಲಿ ಚಂದಯ್ಯನವರ 914ನೇ ಜಯಂತಿಯನ್ನು ಕುಲಬಾಂಧವರು 22 ರಂದು ರಾಜ್ಯದ್ಯಂತ ಆಚರಿಸಬೇಕೆಂದು ತಾಲೂಕಾ ಅಧ್ಯಕ್ಷರು ರಾಜು ಭಜಂತ್ರಿ ಹಾಗೂ  ಉಪಾಧ್ಯಕ್ಷರು ಶ್ರೀಕಾಂತ್ ಭಜಂತ್ರಿ ಕುಲಬಾಂಧವರಿಗೆ ಕರೆ ನೀಡಿದರು 22 ರಂದು ರಾಜ ಮಟ್ಟದಲ್ಲಿ ಏಕಕಾಲಕೆ ಶ್ರೀ ನೂಲಿಯ ಚಂದಯ್ಯ ನವರ ಜಯಂತಿಯನ್ನು ಆಚರಿಸಬೇಕೆಂದು ರಾಜ್ಯ  ಮಟ್ಟದಲ್ಲಿ ಮಹಾಸಂಘ ನಿರ್ಣಯ ತೆಗೆದುಕೊಂಡ ಕಾರಣ ಜಿಲ್ಲಾ ತಾಲೂಕು ಹೋಬಳಿಗಳಲ್ಲಿ ಮತ್ತು ಮನೆ ಮನೆಗಳಲ್ಲಿ ಜಯಂತಿಯನ್ನು ಆಚರಿಸಬೇಕು ಹಾಗೂ ಕಾರ್ಯಾಕ್ರಮಕ್ಕೆ ಗಣ್ಯರನ್ನು ಜನಪ್ರತಿನಿದಿಗಳನ್ನು ಮತ್ತು ಪತ್ರಕರ್ತರನ್ನು ಆಮಂತ್ರಿಸಿ ಭಕ್ತಿ ಪೂರ್ವಕ ಜಯಂತಿಯನ್ನು ಆಚರಸುವುದರ ಜೊತೆಗೆ ಕಾಯಕಯೋಗಿ ಶ್ರೀ ನೂಲಿಯ ಚಂದಯ್ಯಾ ನವರ ಜಯಂತಿಯನ್ನು ರಜಾ ರಹಿತವಾಗಿ ಸರ್ಕಾರವೇ ಆಚರಿಸಬೇಕೆಂದು ಕುಲಬಾಂಧವರು ಸರ್ಕಾರವನ್ನು ಒತ್ತಾಯಿಸಬೆಕೆಂದು ತಾಲೂಕು ಅಧ್ಯಕ್ಷರು ರಾಜು ಭಜಂತ್ರಿ  ಹಾಗೂ ಉಪಾಧ್ಯಕ್ಷರು ಶ್ರೀಕಾಂತ್ ಭಜಂತ್ರಿ ಕುಲಬಾಂಧವರಲ್ಲಿ ಮನವಿ ಮಾಡಿಕೊಡಿದ್ದಾರೆ.