ತೇರದಾಳ: ವಿಠ್ಠಲ ಮಂದಿರದ ಹತ್ತಿರ ಇರುವ ಬೀದಿ ದೀಪ ಹಾಗೂ ಅಗಸಿ ಹತ್ತಿರ ಇರುವ ಬೀದಿ ದೀಪ ಬಂದ್ ಆಗಿ ಹಲವು ತಿಂಗಳು ಕಳೆದಿವೆ ದಯವಿಟ್ಟು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಆದಷ್ಟು ಬೇಗ ಸರಿಪಡಿಸ ಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತಿದ್ದೆನೆ,ಏಕೆಂದರೆ ಶ್ರಾವಣ ಮಾಸದ ಪ್ರಯುಕ್ತ ನಗರದ ಎಲ್ಲ ಜನರು ಅಲ್ಲಮ ಪ್ರಭು ದೇವರ ದರ್ಶನ ಪಡೆಯಲು ಓಡಾಡುತ್ತಿರುತ್ತಾರೆ ಎಂದು ಸಾರ್ವಜನಿಕ ಗ್ರೂಪ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿ ಸಾರ್ವಜನಿಕ ವ್ಯವಸ್ಥೆಯನ್ನು ಸರಿಮಾಡಿಕೊಳ್ಳುವ ಪರಿಸ್ಥಿತಿ ತೇರದಾಳ ಪಟ್ಟಣದಲ್ಲಿ ಆಗಿರುವುದು ವಿಪರ್ಯಾಸ ಇದನ್ನು ಕುರಿತು ಪೋಸ್ಟ್ ಮಾಡಿದವರನ್ನು ವಿಚಾರಿಸಿದಾಗ ಅವರು ಹೇಳಿದ್ದು, ನೋಡಿ ಸರ್, ನಾವೂ ಯಾರಿಗೆ ಹೇಳಬೇಕು? ನೀವೇ ಹೇಳಿ ಚುನಾಯಿತ ಪ್ರತಿನಿಧಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಪ್ರತಿದಿನ ಓಡಾಡುತ್ತಾರೆ, ಆದರೂ ಜಾಣ ಕುರುಡರ ಹಾಗೆ ಇರುತ್ತಾರೆ. ಇವರ ಅಭಿವೃದ್ಧಿ ಹಾಗೂ ಸುಧಾರಣೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನೋಡಬಹುದು, ಇದು ಸಾರ್ವಜನಿಕರಾದ ನಮ್ಮ ದೌರ್ಬಾಗ್ಯ ಅಲ್ಲದೇ ಇದನ್ನು ಸಾರ್ವಜನಿಕರಾದ ನಾವೂ ಹೇಳಬೇಕೆ? ನಾವೇ ಹೇಳುವುದಾದರೆ ಇವರು ಏನು ಮಾಡುತ್ತಿರುತ್ತಾರೆ? ನಮ್ಮಲ್ಲಿ ಎಲ್ಲಾ ಆರಂಭ ಶೂರರಿದ್ದಾರೆ. ಇನ್ನೂ ಮುಂದಾದರೂ ಗಮನಿಸಿ ಸರಿ ಪಡಿಸಲಿ ಎಂದು ಹೇಳಿದರು.
Social Plugin