ಕರೆಂಟಾನಿ ಬರುತ್ತಿದೆ ದಾರಿಬಿಡಿ!
 
ಒಟ್ಟು ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ರೈತರ ಬಳಕೆಯ ಪಾಲು ಕೇವಲ 17.9%. ಅನ್ನದಾತನ ಈ ವಿದ್ಯುತ್ ಬಳಕೆ “ಉಚಿತ” ಎಂಬ ಹೊಟ್ಟೆ ಉರಿ ಒಂದುಕಡೆಯಾದರೆ, ಇನ್ನೈದು ವರ್ಷಗಳಲ್ಲಿ ಮೈಲಿಗೊಂದು-ಮಾರಿಗೊಂದು ಬರಲಿರುವ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಕಾನೂನುವಹಿ ಸಿದ್ಧತೆ ಮಾಡಿಕೊಳ್ಳುವ ತರಾತುರಿ ಇನ್ನೊಂದುಕಡೆ.

ಇವೆರಡನ್ನೂ ಒಟ್ಟಿಗೆ ಸೇರಿಸಿ ಬಂದಿರುವುದೇ ವಿದ್ಯುತ್ ವಿತರಣೆ ಖಾಸಗೀಕರಣ ಮಸೂದೆ. 
ಸಚಿವರು ಇದನ್ನು ಲೈಸನ್ಸ್ ರಾಜ್‌ನಿಂದ ಮುಕ್ತಿ, ಸ್ಪರ್ಧಾತ್ಮಕ ವಾತಾವರಣಕ್ಕೆ ದಾರಿ ಎನ್ನುತ್ತಿದ್ದಾರೆ. ಸನ್ಮಾನ್ಯರೇ ಟೆಲಿಕಾಂ ಕ್ಷೇತ್ರದಲ್ಲಿ ಈ ಮುಕ್ತ ಸ್ಪರ್ಧೆಯ ಫಲ ಏನು? ಎಲ್ಲವೂ ಜಿಯೋಮಯ– ಜನ ಮಾತ್ರ ಅಯೋಮಯ. ವಿದ್ಯುತ್ ಕ್ಷೇತ್ರ ಇದಕ್ಕಿಂತ ಭಿನ್ನ ಆಗಲಿದೆಯೆ?

DISCOMಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ, ತಂತ್ರಜ್ಞಾನಕ್ಕೆ ಖರ್ಚು ಮಾಡಿದ್ದರೆ ಲಾಭದಲ್ಲಿ ನಡೆಯಬಹುದಾಗಿದ್ದ DISCOMಗಳನ್ನು ಸಾವಿರಾರು ಕೋಟಿ ಖರ್ಚುಮಾಡಿ, ಬೇಜವಾಬ್ದಾರಿಯಿಂದಾದ ನಷ್ಟದ ಹೊಂಡ ತುಂಬಿಸಿ, ಹರಿವಾಣದಲ್ಲಿಟ್ಟು ಖಾಸಗಿಯವರಿಗೆ ಕೊಡುತ್ತಿದ್ದೀರಲ್ಲ…. ನಿಮಗೆ ಎದೆಯಲ್ಲಿ ಪಸೆ ಉಳಿದಿದೆಯೆ?

ಪೂರ್ಣ ಸಂದರ್ಶನ ಇಲ್ಲಿ ಲಭ್ಯ: https://www.livemint.com/industry/energy/we-don-t-believe-in-attacking-others-power-systems-rk-singh-11628450973688.html
#ಆನಿಕಂಪನಿ #Privatization #Power