ಹಾರೂಗೇರಿಯಲ್ಲಿ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕೊಲೆ ಮಾಡಿರುವ ಆರೋಪಿಯ ಪ್ರತಿಕೃತಿ ದಹನ ತೇರದಾಳದ ವಿಶೇಷ ತಹಶೀಲ್ದಾರ ಕಚೇರಿ ಎದುರು ಮಾಡಲಾಯಿತು.

ಹಾರೂಗೇರಿಯಲ್ಲಿ ಬಾಲಕಿ ಕೊಲೆ, ಶ್ರೀರಾಮ ಸೇನೆಯ ಪ್ರತಿಭಟನೆ 

ತೇರದಾಳ : ಬೆಳಗಾವಿ ಜಿಲ್ಲೆಯಲ್ಲಿ ಹಾರೂಗೇರಿಯಲ್ಲಿ ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕೊಲೆ ಮಾಡಿರುವ ಆರೋಪಿ ಅಮೀರ ಲಾಲಸಾಬ ಜಮಾದಾರಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ತೇರದಾಳದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಮೀರ ಜಮಾದಾರನ ಪ್ರತಿಕೃತಿಯನ್ನು ವಿಶೇಷ ತಹಶೀಲ್ದಾರ್‍ರ ಕಚೇರಿ ಮುಂದೆ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

   ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ರೇಣಕೆ ಮಾತನಾಡಿ ಇತ್ತಿಚಿಗೆ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ರಾಜ್ಯ ವ್ಯಾಪ್ತಿ ನಡೆಯಬಹುದು, ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕೊಲೆ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆವಿಧಿಸಬೇಕು ಎಂದರು.

   ಈ ಸಂದರ್ಭದಲ್ಲಿ ಬಾಳು ದೇಶಪಾಂಡೆ, ಪ್ರದೀಪ ದೇಶಪಾಂಡೆ, ಪ್ರಕಾಶ ಹೊಸಮನಿ, ವಿಜಯ ಅರಭಾವಿ, ಸದಾಶಿವ ಗೋಡ್ಸೆ ಲಕ್ಷ್ಮಣ ಕುಂಬಾರ, ವಿನಾಯಕ ಶೆಡಬಾಳ, ಶ್ರೀನಿವಾಸ ಗೌಂಡಿ, ಪ್ರಕಾಶ ಮನ್ಮಿ, ಆನಂದ ಚಮಕೇರಿ ಸೇರಿದಂತೆ ಇನ್ನಿತರರು ಇದ್ದರು.