ಮಾಸಗಳಲ್ಲಿ ಶ್ರಾವಣ ಮಾಸ ಶ್ರೇಷ್ಟವಾದ ಮಾಸ 

ತೇರದಾಳ : ವರ್ಷದಲ್ಲಿ ಹನ್ನೆರಡು ಮಾಸಗಳು ಆ ಮಾಸಗಳಲ್ಲಿ ಶ್ರೇಷ್ಟವಾದದು. ಶ್ರವಣ ಮಾಸವೆಂದು ಕರೆಯುತ್ತಾರೆ. ಕಿವಿಗೆ ಇಂಪನ್ನು ಕೊಡುವಂತ ಮಾಸವೇ ಶ್ರವಣ ಮಾಸ. ಶ್ರಾವಣ ಮಾಸದಲ್ಲಿ ಪ್ರಭುಲಿಂಗ ಲೀಲೆ ಪ್ರವಚನವನ್ನು ಕೇಳಿ ಜನರ ಜೀವನ ಪಾವನವಾಗಬೇಕು ಹಾಗೂ ಅವರ ಕಿವಿಗಳು ಮುಕ್ತವಾಗಬೇಕು ಎಂದು  ಶ್ರೀಶಿವಕುಮಾರ ದೇವರು ಹುಕ್ಕೇರಿ ಮಠ ಹಾವೇರಿ ಇವರು ಹೇಳಿದರು. 

  ಪಟ್ಟಣದ ಶ್ರೀಅಲ್ಲಮಪ್ರಭುದೇವರ ಕಲ್ಯಾಣ ಮಂಟಪದಲ್ಲಿ ಶ್ರೀಪ್ರಭುಲಿಂಗೇಶ್ವರ ಅನ್ನ ಪ್ರಸಾದ ಸಮೀತಿಯವರು ಹಮ್ಮಿಕೊಂಡ 'ಪ್ರಭುಲಿಂಗ ಲೀಲೆ' ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಶ್ರಾವಣ ಮಾಸದಲ್ಲಿ ಮಹಾತ್ಮರ ಆಶೀರ್ವಚನ ಕೇಳಿದರೆ ಜನ್ಮ ಸಾರ್ಥಕವಾಗುವುದು. ಅಲ್ಲಮಪ್ರಭುದೇವರು ರಚಿಸಿರುವ ಬೆಡಗಿನ ವಚನಗಳು ಕಬ್ಬಿನದ ಕಡಲೆಗಳಿದ್ದಂತೆ ಈ ವಚನಗಳನ್ನು ಅರಗಿಸಿಕೊಳ್ಳುವುದು ಬಹಳ ಕ್ಲೀಷ್ಟಕರ ಎಂದರು.

  ಚಿಮ್ಮಡ ವಿರಕ್ತ ಮಠದ ಪ್ರಭು ಮಹಾಸ್ವಾಮಿಗಳು ಮತ್ತು ಸ್ಥಳಿಯ ಬಾಲಗಂಗಾಧರ ದೇವರು ಜ್ಯೋತಿ ಬೆಳಗಿಸುವ ಮೂಲಕ "ಪ್ರಭುಲಿಂಗ ಲೀಲೆ" ಪ್ರವಚನವನ್ನು ಉದ್ಘಾಟಿಸಿದರು. ಮಲ್ಲಪ್ಪ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಪಿಎಸ್‍ಐ ರಾಜು ಬೀಳಗಿ, ಎನ್.ವ್ಹಿ.ಅಸ್ಕಿ, ನ್ಯಾಯವಾದಿ ವೆಂಕಟೇಶ ನಿಂಗಸಾನಿ, ಸದಾಶಿವ ಹೊಸಮನಿ, ಅಲ್ಲಮಪ್ರಭುದೇವಸ್ಥಾನದ ಅರ್ಚಕರು ಸೇರಿದಂತೆ ಇನ್ನಿತರರು ಇದ್ದರು.

ರಾಯಪ್ಪ ಕುಂಬಾರ ಪ್ರಾರ್ಥಿಸಿದರು. ಪ್ರವೀಣ ಖವಾಸಿ ನಿರೂಪಿಸಿ ಸ್ವಾಗತಿಸಿದರು. ವಿಷ್ಣು ಅಥಣಿ ವಂದಿಸಿದರು.