ವರದಿ : ಮಲ್ಲಿಕಾರ್ಜುನ ಘೋಸರವಾಡ.
ನಾಗರಮುನ್ನೋಳಿ: 'ಮನುಷ್ಯ ಪಾವನವಾಗುವುದು ದೇವರೆಡೆಗಿನ ಭಕ್ತಿ ಮಾರ್ಗದಿಂದ ಮಾತ್ರ ಸಾಧ್ಯ' ಎಂದು ನಿಡಸೋಸಿಯ ಸಿದ್ದಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕಲ್ಯಾಣ ಮಂಟಪದ ವಾಸ್ತುಶಾಂತಿ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಶ್ರಾವಣ ಮಾಸದಲ್ಲಿ ಇಡೀ ತಿಂಗಳು ಪ್ರವಚನ ಕೇಳುವುದರಿಂದ ಆತ್ಮ ಶುದ್ಧಿಯಾಗುತ್ತದೆ' ಎಂದರು. ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, 'ಯುವ ಜನಾಂಗಕ್ಕೆ ಭಾರತೀಯ ಕಲೆ, ಸಂಸ್ಕೃತಿ, ಸಾಮಾಜಿಕ ಹಾಗೂ ಧಾರ್ಮಿಕ
ಚಿಂತನೆಯ ಮೌಲ್ಯಗಳ ಅರಿವು ಮೂಡಿಸುವ ಅಗತ್ಯವಿದೆ' ಎಂದು ತಿಳಿಸಿದರು.
'ಕೋವಿಡ್‌ಗೆ ಭಯ ಪಡದೆ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಸೋಂಕಿನ ನಡುವೆಯೇ ಸುರಕ್ಷಿಸತ ಬದುಕಲು ಕಲಿಯಬೇಕಾದ ಅನಿವಾರ್ಯತೆ ಇದೆ' ಎಂದರು.

Social Plugin