ತೇರದಾಳ ವಿಶೇಷ ತಹಶೀಲ್ದಾರ ಕಚೇರಿಯಲ್ಲಿ 75ನೇ  ಸ್ವಾತಂತೋತ್ಸವ ಪೂರ್ವ ಭಾವಿ ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ ಎಸ್.ಬಿ.ಕಾಂಬಳೆ ಮಾತನಾಡಿದರು.

75ನೇ ಧ್ವಜಾರೋಹಣ ಶಿಸ್ತು ಸಂಭ್ರಮದಿಂದ ಆಚರಿಸಲು ನಿರ್ಧಾರ

ತೇರದಾಳ : ಕೋವಿಡ್-19ರ ತಡೆಗಟ್ಟುವ ನಿಯಮಗಳನ್ನು ಪಾಲಿಸುತ್ತ ಧ್ವಜ ಸಂಹಿತೆಯೊಂದಿಗೆ ವೀರ, ದೇಶಭಕ್ತರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರದ ಸ್ಮರಣೆ ಹಾಗೂ ದೇಶದ ಅಖಂಡತೆ, ಏಕತೆಯ ಪ್ರತೀಕವಾದ ಸ್ವಾತಂತ್ರೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸೋಣವೆಂದು ಗ್ರೇಡ್-2 ತಹಶೀಲ್ದಾರ ಎಸ್.ಬಿ.ಕಾಂಬಳೆ ಹೇಳಿದರು.

   ಪಟ್ಟಣದ ವಿಶೇಷ ತಹಶೀಲ್ದಾರ ಕಚೇರಿಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಮಹಾತ್ಮಾ ಗಾಂಧಿಜಿ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಎರಡು ರಾಷ್ಟ್ರೀಯ ಧ್ವಜಾರೋಹಣ ಕಾರ್ಯಕ್ರಮಗಳು ಮಾದರಿಯಾಗಿವೆ. 75ನೇ ಸ್ವಾತಂತ್ರ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸಲು ಕೊರೊಣ ಅಡ್ಡಿ ಮಾಡುತ್ತಿದೆ. ಆದರೂ ನಾವು ಮುನ್ನೆಚ್ಚರಿಕೆ ಕ್ರಮಾವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಕೋವಿಡ್ ಮುನ್ನೆಚ್ಚರಿಕೆಗಾಗಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭಾಗವಹಿಸುವಂತಿಲ್ಲ. ಕಾರ್ಯಕ್ರಮ ಜರುಗಲು ಎಲ್ಲರ ಸಹಕಾರ ಮುಖ್ಯವಾಗಿದೆ. ಶ್ರೀಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುವುದು. ಯೋಧರಿಗೆ, ಸೇವಾ ನಿವೃತ್ತರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲು ತೀಮಾನಿಸಲಾಯಿತು. ಮಹಾತ್ಮಾ ಗಾಂಧಿಜಿ ಕ್ರೀಡಾಂಗಣದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದ ಪೂರ್ವ ತಯಾರಿಯನ್ನು ಪುರಸಭೆಯವರು ಮಾಡಬೇಕು. ಶಿಸ್ತು ಶಾಂತಿಯುತವಾಗಿ ಕಾರ್ಯಕ್ರಮ ನಡೆಯುವಂತೆ ಎಲ್ಲರ ಜವಾಬ್ದಾರಿ. ಅಂದು ಬೆಳಿಗ್ಗೆ 8-30ಕ್ಕೆ ಧ್ವಜಾರೋಹಣ ನೆರವೇರುವುದು ಎಂದು ನಿರ್ಧರಿಸಲಾಯಿತು.

  ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಪ್ರಭಾರಿ ಆಹಾರ ನಿರೀಕ್ಷಕ ಪ್ರಕಾಶ ಮಠಪತಿ, ಪುರಸಭೆ ಜೆಇ ಸಿದ್ದಪ್ಪ ಮಾತಾಳೆ, ಸಿ ಆರ್‍ಪಿಗಳಾದ ಆರ್.ಎ.ನ್ಯಾಮಗೌಡ, ಹಾಗೂ ಎಸ್.ಬಿ.ಹಡಪದ, ಸದಾಶಿವ ಹೊಸಮನಿ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಎಲ್ಲ ಶಾಲೆಗಳ ಮುಖ್ಯಸ್ಥರು ಸೇರಿದಂತೆ ಇನ್ನಿತರರು ಇದ್ದರು.