ತೇರದಾಳದ ಶ್ರೀ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿರುವ ಕಾಳಜಿ ಕೇಂದ್ರಕ್ಕೆ ಮೇವು ವಿತರಿಸಿದ ಡಾ.ಎ.ಆರ್ ಬೆಳಗಲಿ

ತೇರದಾಳ ಕಾಳಜಿ ಕೇಂದ್ರಕ್ಕೆ ಮೇವು ವಿತರಿಸಿದ ಡಾ.ಎ.ಆರ್.ಬೆಳಗಲಿ

ತೇರದಾಳ: ಪಟ್ಣದ ಶ್ರೀ ಕುರುವಿನಶೆಟ್ಟಿ ನೀಲಕಂಠೇಶ್ವರ ಮಠ ಹಾಗೂ ಸಾವರಿನ್ ಸಕ್ಕರೆ ಕಾರ್ಖಾನೆಯಲ್ಲಿ ತಮದಡ್ಡಿ ನೆರೆ ಸಂತ್ರಸ್ಥರಿಗಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಮಹಾಲಿಂಗಪೂರದ ಖ್ಯಾತ ವೈದ್ಯ ಹಾಗೂ ಮಾಜಿ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ.ಎ.ಆರ್.ಬೆಳಗಲಿ ಇಂದು ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಮೇವು ವಿತರಿಸಿದರು.

  ನೆರೆ ಹಾವಳಿಯಿಂದ ಸಂತ್ರಸ್ಥರಾಗಿರುವ ಜನರ ಕುಶಲೋಪಚಾರವನ್ನು ವಿಚಾರಿಸಿ, ನೊಂದವರಿಗೆ ಸಾಂತ್ವನ ಹೇಳಿ ಧೈರ್ಯವಾಗಿರುವಂತೆ ತಿಳಿಸಿ ಮಾತನಾಡಿದ ಅವರು ಈ ಸಂಧರ್ಭದಲ್ಲಿ ಸಂತ್ರಸ್ಥರೊಂದಿಗಿರಬೇಕಾದ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದರಲ್ಲಿಯೇ ತಲ್ಲೀಣರಾಗಿದ್ದು, ಇವರಿಗೆ ಜನರ ಕಷ್ಟಕ್ಕಿಂತ ಅಧಿಕಾರವೇ ಮುಖ್ಯವಾಗಿದ್ದು, ಪದೇ-ಪದೇ ನೆರೆಹಾವಳಿಗೆ ಒಳಗಾಗಿ ತತ್ತರಿಸಿರುವ ಜನರ ಬದುಕಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕೆಂದು ಆಗ್ರಹಿಸಿದ ಅವರು ಮುಂದೆ ನಮ್ಮ ಸರಕಾರ ಆಡಳಿತಕ್ಕೆ ಬಂದ ತಕ್ಷಣ ಪ್ರಥಮ ಆದ್ಯತೆಯಾಗಿ ಸಂತ್ರಸ್ಥರಿಗೆ ಶಾಶ್ವತ ಸೂರನ್ನು ಕಲ್ಪಿಸಲಾಗುವುದೆಂದು ತಿಳಿಸಿದರು. ಮಳೆಯ ಅಬ್ಬರ ಕಡಿಮೆಯಾಗಿದ್ದು ಇನ್ನೆರಡು ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ತಹಬದಿಗೆ ಬರುವ ಆಶಾಭಾವವನ್ನು ವ್ಯಕ್ತಪಡಿಸಿದ ಅವರು ಜನರು ಭಯಪಡದೆ ಯಾವುದೇ ಊಹಾಪೋವಗಳಿಗೆ ಕಿವಿಗೊಡದೆ ಧೈರ್ಯವಾಗಿರುವಂತೆ ತಿಳಿಸಿದರು.

            ಈ ಸಂಧರ್ಭದಲ್ಲಿ ಕಾಂಗ್ರೆಸ್ ಹಿಂದುಳಿದ ಘಟಕದ ರಾಜ್ಯ ಉಪಾಧ್ಯಕ್ಷ ಬಸವರಾಜ ಕೊಕಟನೂರ, ತೇರದಾಳ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ರಂಜಾನ ಕೊರಬು, ಗಂಗಪ್ಪ ನಿಲಜಗಿ, ಧರ್ಮಣ್ಣ ಕಾಂಬಳೆ, ಇಬ್ರಾಹಿಂ ಅಲಾಸ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.