ಅನ್ನಭಾಗ್ಯ ವಿತರಕರಾದ ಸಂತೋಷ್ ಈರಪ್ಪ ಕಂಚಿನಕೆ ವಯಸ್ಸು (42) ಸಾ: ರಬಕವಿ ವಿದ್ಯಾನಗರ ಇವರು ಮೊದಲನೇ ಆರೋಪಿ ಮತ್ತು ಎರಡನೆಯ ಆರೋಪಿಯಾಗಿ ಬಸವರಾಜ್ ಸಿದ್ದಪ್ಪ ಲಗಾಯಿ ವಯಸ್ಸು (21) ಸಾ: ಬಂಡಿಗಿಣಿ ತಾಲೂಕು ರಬಕವಿ ಬನಹಟ್ಟಿ. ಕಾರ್ಡುದಾರರಿಗೆ ಕೊಡಬೇಕಾಗಿರುವ ಅಕ್ಕಿಯ ಬದಲು ಗೋಧಿ (4 ಕೆಜಿ ಅಕ್ಕಿ ಕಡಿತ ಮಾಡಿ 1 ಕೆಜಿ ಗೋಧಿ ವಿತರಣೆ ) ಕಳಪೆಮಟ್ಟದ ಗೋಧಿಯನ್ನು ಜಮಖಂಡಿ ಪಟ್ಟಣದಿಂದ ಖರೀದಿಸಿ ಜನರಿಗೆ ವಿಸ್ತರಿಸುತ್ತಾನೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಕರೋನಾ ಸಮಯದಲ್ಲಿ ಆಹಾರ ಇಲ್ಲದೆ ಜನರು ಕಷ್ಟಪಡುತ್ತಿರುವ ಅನ್ನಭಾಗ್ಯ ಅಂಗಡಿ ಮಾಲೀಕರು ಪಡಿತರ ಧಾನ್ಯವನ್ನು ಕಳ್ಳ ದಿಂದ ಮೂಲಕ ಹೊರರಾಜ್ಯಗಳಿಗೆ ಕಳುಹಿಸುತ್ತಾರೆ. ಈ ವಿಷಯ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿದ್ದರೂ ತಮಗೆ ಗೊತ್ತೇ ಇಲ್ಲ ಅನ್ನುವ ರೀತಿಯಲ್ಲಿ ಇದ್ದಾರೆ. ಕಳ್ಳ ದಂಧೆಕೋರರನ್ನು ಅಶೋಕ ಲೈಲ್ಯಾಂಡ್ ಮಿನಿ ವಾಹನ ನಂಬರ್ ಕೆಫೆ 48 ಎ 1208 ಈ ಗಾಡಿಯಲ್ಲಿ 13.800/- ರೂಪಾಯಿಗಳ ಕಿಮ್ಮತ್ತಿನ 18 ಪ್ಲಾಸ್ಟಿಕ್ ಚೀಲದಲ್ಲಿ 920 ಕೆಜಿ ಅಕ್ಕಿಯನ್ನು ಲೋಡ್ ಮಾಡಿಕೊಂಡು ಹೋಗುವಾಗ ಬನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಆರ್ ಎಲ್ ಧರ್ಮಟ್ಟಿ ಅವರು ಸಿಬ್ಬಂದಿಯ ನೇತೃತ್ವದಲ್ಲಿ ಸಿಕ್ಕಿಬಿಡುತ್ತಾರೆ.

Social Plugin