ಅನಧಿಕೃತ ಅಕ್ಕಿ ಸಂಗ್ರಹಣೆ : ತೇರದಾಳ ಪೋಲಿಸರಿಂದ ದಾಳಿ
ತೇರದಾಳ : ಪಟ್ಟಣದ ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ ಸರಕಾರದ ವಿವಿಧ ಯೋಜನೆಯಡಿಯಲ್ಲಿನ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟಿರುವ ಮಾಹಿತಿ ಮೇರಗೆ ತೇರದಾಳ ಠಾಣೆಯ ಪಿಎಸ್‍ಐ ರಾಜು ಬೀಳಗಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿಯನ್ನು ವಶ ಪಡಿಸಿಕೊಂಡು ಪ್ರಖರಣವನ್ನು ತೇರದಾಳ ಪೋಲಿಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
ಸುಮಾರು 40,050ರೂ ಬೆಲೆಬಾಳುವ 26ಕ್ವಿಂಟಾಲ 70 ಕೆಜಿ ಯಷ್ಟು ಸಾರ್ವಜನಿಕರಿಗೆ ಹಂಚುವ ಸರಕಾರದ ವಿವಿಧ ಯೋಜನೆಯಡಿ ಅಕ್ಕಿಯನ್ನು ಹನಗಂಡಿಯ ದೇವರಾಜ ಸಿದ್ದಪ್ಪ ನಾಯಿಕ(21) ಇತನು ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಂದ ಅನಧಿಕೃತವಾಗಿ ಸಂಗ್ರಹಿಸಿಕೊಂಡು ಹನಗಂಡಿಯ ಮಹಿಬೂಬಸಾಬ ಬುಡ್ಡಾಸಾಬ ರಾಮದುರ್ಗ (30) ಇತನಿಗೆ ಹೆಚ್ಚಿನ ಬೆಲೆಗೆ ಮಾರಾಟಮಾಡುವ ಉದ್ದೇಶದಿಂದ ಸಸಾಲಟ್ಟಿ ಗ್ರಾಮದ ಬಾಹುಬಲಿ ಜಿನ್ನಪ್ಪ ಪಾಟೀಲ ಇವರ ಪತ್ರಾಸ್ ಶೆಡ್ಡಿನಲ್ಲಿ ಸಂಗ್ರಹಿಸಿಟ್ಟದ್ದನ್ನು ಖಚಿತ ಮಾಹಿತಿ ಮೇರಗೆ ಪ್ರಭಾರಿ ಆಹಾರ ನಿರೀಕ್ಷಕ ಪ್ರಕಾಶ ರಾಚಯ್ಯ ಮಠಪತಿ ಹಾಗೂ ಪಿಎಸ್‍ಐ ರಾಜು ಬೀಳಗಿ ಸಿಬ್ಬಂದಿಯವರಾದ ಕೆ.ಎಚ್.ಸನ್ನಹಟ್ಟಿ, ಎಲ್.ಬಿ.ಮಾಳಿ ಸೇರಿದಂತೆ ಪೋಲಿಸ್ ಸಿಬ್ಬಂದಿಯವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
- ವರದಿ : ವಿಜಯ ವಾಜಂತ್ರಿ

Social Plugin