ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
#ವೆಂಕಟಾಚಲ_ದೇಶಿಕಂ ।।
ಗುರುಕಥಾ ಸಾಗರ :- ಪೂಜ್ಯ ಅವಧೂತ ಅನಂತ #ಶ್ರೀ_ಬಿಂದುಮಾಧವರೂ ಮತ್ತು ಪರಮ ಹಂಸ #ಶ್ರೀ_ಕೃಷ್ಣಯೋಗೀಂದ್ರ_ಸರಸ್ವತಿಗಳೂ:-
ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತು. ಸಂಜೆ ಕತ್ತಲಾದ ನಂತರ ಬಾಣಾವರದಿಂದ ಕಾರು ಹುಳಿಯಾರು ರಸ್ತೆಯ ಮೂಲಕ ಬೆಲಗೂರಿನ ಕಡೆ ಓಡಿತ್ತು.ಗುರುನಾಥರು ತಾವೇ ಖುದ್ದಾಗಿ , ಎಂದಿನಂತೆ ಬಹಳೇ ಸುವಾಸನೆ ಇಂದ ಕೂಡಿದ ಒಂದಿಷ್ಟು ಹಳಸಿನ ಹಣ್ಣು ಹಾಗೂ ಜೇನುತುಪ್ಪದ ಡಬ್ಬಿಯನ್ನು ಹಿಡಿದು ಹಿಂದೆ ಕುಳಿತುಕೊಂಡರು. ಸ್ವಲ್ಪ ಕೈ ನೋವುತ್ತಿದೆ ಕಣಯ್ಯಾ ಸ್ವಲ್ಪ ಟೈಗರ್ ಬಾಮ್ ಹಚ್ಚು ಎಂದು ಕೈಯ್ಯನ್ನು ಕೊಟ್ಟರು. ಆದರೇ ನಿಜವಾಗಿ ನನಗೂ ಕೈ ಬಹಳ ನೋವುತ್ತಿತ್ತು. ಹಾಗೇ ತೋಳನ್ನು ತೀಡುತ್ತಾ ಇದ್ದೆ ಸ್ವಲ್ಪ ಸಮಯದ ನಂತರ ಸಾಕು ಕಣಯ್ಯಾ ಎಂದರು.ನನ್ನ ಕೈಯ್ಯಿನ ನೋವು ಮಾಯವಾಗಿದ್ದು ನನಗೇ ತಿಳಿಯಲೇ ಇಲ್ಲ. ಕಾರಿನ ಮುಂದಿನ ಭಾಗದ ಹೆಡ್ ಲೈಟ್ ಮತ್ತು ಹಿಂಭಾಗದ ಕೆಂಪು ಬಣ್ಣದ ದೀಪಗಳನ್ನು ಬಿಟ್ಟರೇ ಅಕ್ಕಪಕ್ಕ ಕಾರ್ಗತ್ತಲು ತುಂಬಿದ ಕಾಡು.ಒಂದು ತಿರುವಲ್ಲಿ ಗುರುನಾಥರು ಕಾರು ನಿಲ್ಲಿಸಲು ಹೇಳಿದರು. ಗುರುಬಂಧುಗಳೊಬ್ಬರು ಕಾರನ್ನು ನಿಲ್ಲಿಸುವದುಬೇಡ ಈ ಹೊತ್ತು ಕಾಡುಪ್ರಾಣಿಗಳು ಒಡಾಡುವ ಹೊತ್ತು ಎಂದರು.ಅದಕ್ಕೆ ಗುರುನಾಥರು ಭಯಬೇಡ ,ಮನುಷ್ಯರಿಗಿಂತ ಪ್ರಾಣಿಗಳು ಉತ್ತಮ ಉತ್ತಮ ಸ್ವಭಾವವುಳ್ಳದ್ದು ಎಂದರು...
ಮರಗಳ ನಡುವೇ ಚರಚರ ಶಬ್ದ ,ಗುರುನಾಥರು ಪ್ರಕಾಶ ಹಲಸಿನ ಹಣ್ಣು ತೆಗೆದುಕೊಂಡುಬಾರಯ್ಯಾ ಎಂದರು. ತೆಗೆದುಕೊಂಡು ಬರುವಷ್ಟರಲ್ಲಿ ಏಳು ಅಡಿಗೂ ಎತ್ತರವಾದ ಮಹಾಕಾಯ ಕಪ್ಪು ಕರಡಿಯೊಂದು ಧೊತ್ತೆಂದು ಪ್ರತ್ಯಕ್ಷವಾಗಿತ್ತು.ಕಾರಿನ ಒಳಗಿಂದ ಅಯ್ಯೋ .. ಗುರುಗಳೇ ಕರಡಿ..ಕರಡಿ ಎಂದು ಕೂಗಿಕೊಂಡರು ,ಗುರುನಾಥರು ಸ್ವಲ್ಪವೂ ವಿಚಲಿತರಾಗದೇ ಹಳಸಿನಹಣ್ಣನ್ನು ತೆಗೆದುಕೊಂಡು ಯಾವುದೇ ಸಲಕರಣೆಗಳ ಸಹಾಯವಿಲ್ಲದೇ ಲೀಲಾಜಾಲವಾಗಿ ಕೈಯ್ಯಿಂದಲೇ ಹಣ್ಣನ್ನು ಬಗೆದು ತೊಳೆಗಳನ್ನು ಬಿಡಿಸುತ್ತಾ ಜೇನುತುಪ್ಪದ ಸಹಿತ ಎತ್ತರವಾಗಿ ನಿಂತಿದ್ದ ಕರಡಿಗೆ ಕೊಟ್ಟರು.ಸುಮಾರು ಎರಡು ಹಣ್ಣುಗಳನ್ನು ಸಂಪೂರ್ಣವಾಗಿ ಬಿಡಿಸಿಕೊಟ್ಟರು ದೈತ್ಯಾಕಾರವಗಿದ್ದ ಜಾಂಬವಂತನು ಎಳ್ಳಷ್ಟೂ ಮಿಸುಕಾಡದೆ ಸಹನೆಯಿಂದ,ತಾಯಿಯ ಕೈತುತ್ತೆಂಬಂತೆ ಆನಂದದಿಂದ ತಿಂದುತೇಗಿ ಕ್ಷಣಾರ್ಧದಲ್ಲಿ ಮರಗಳಲ್ಲಿ ಕಣ್ಮರೆಯಾಯಿತು.ಈ ರೀತಿಯಾದ ಅನುಭವಗಳು ಆಗಿಂದಾಗ್ಗೆ ನಡೆಯುತ್ತಿದ್ದದ್ದು ಹಲವು ಗುರುಬಂಧುಗಳ ಅನುಭವದಲ್ಲಿದೆ...
ಸುಮಾರು ಒಂಭತ್ತು ಘಂಟೆ ರಾತ್ರಿಯ ಹೊತ್ತಿಗೆ ಬೆಲಗೂರು ತಲುಪಿದ್ದೆವು.ದೇವಸ್ಥಾನದ ಬದಿಯಲ್ಲೇ ಇದ್ದ ದೊಡ್ದಮರದಿಂದ, ಮಂಟಪದ ಸ್ವಲ್ಪ ದೂರದಲ್ಲೇ ಕಾರನ್ನು ನಿಲ್ಲಿಸಲು ಹೇಳಿದರು. ಕಾರಿನಲ್ಲಿದ್ದ ಗುರುಬಂಧುಗಳು ಊರಿನೊಳಗಿನ ಮನೆಯ ಹತ್ತಿರ ಊಟದ ವ್ಯವಸ್ಥೆ ಆಗಬಹುದೇ ಎಂಬುದಾಗಿ ಕೇಳಲು , ಅವರಿಗೇ ಅಲ್ಲೇ ಇರಲು ಹೇಳಿದ , ಗುರುನಾಥರು ನನ್ನ ಕೈಹಿಡಿದುಕೊಂಡು ಅಲ್ಲಿಯೇ ಇದ್ದ ಮರದ ಹತ್ತಿರ ನಡೆದರು.ಕಗ್ಗತ್ತಲೆಯಿದ್ದ ಮರದಡಿಯಲ್ಲಿ ನಿಂತುಕೊಂಡೆವು. ಮರದ ಮೇಲಿಂದ ಹಳಸಿನ ಹಣ್ಣು ಬಹಳೇ ಚೆನ್ನಾಗಿತ್ತು ,ಜೇನು ತುಪ್ಪವೂ ಅಮೃತವೇ ಅಗಿತ್ತು ಎಂಬ ದನಿ ಕೇಳಲು ಬೆಚ್ಚು ಬಿದ್ದು ಮರದ ಮೇಲೆ ನೋಡಿದೆ ,ಏನೂ ಕಾಣಲಿಲ್ಲ ,ಯಾರೂ ಇದ್ದಂತೆ ಭಾಸವಾಗಲಿಲ್ಲ...
ಗುರುನಾಥರು ನೈವೇದ್ಯಕ್ಕೆಂದೇ ತಂದಿದ್ದೆವು. ಎಂದರು. ಇಪ್ಪತ್ತಕ್ಕೂ ಹೆಚ್ಚು ಅಡಿಯ ಎತ್ತರದ ಮರದ ಮೇಲಿಂದ ಹಾರಿ ಧೊಫ್ ಎಂದು ನೆಲದ ಮೇಲೇ ನನ್ನ ಮುಂದೆ, ಪೂಜ್ಯ ಅವಧೂತ ಬಿಂದು ಮಾಧವರು ಪ್ರತ್ಯಕ್ಷವಾಗಿದ್ದರು.ನನ್ನ ಜಂಘಾಬಲವೇ ಉಡುಗಿಹೋಯಿತೇನೋ ಎಂಬುದೂ ತಿಳಿಯದಂತಾಗಿತ್ತು.
ಹಾಗೇ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ದೇವಸ್ಥಾನದ ಬಾಗಿಲಿನಲ್ಲಿ ಕುಳಿತ ಪೂಜ್ಯ ಬಿಂದುಮಾಧವರು ಅಲ್ಲಿಯೇ ಇದ್ದ ಶಿಷ್ಯರ ಕಡೆ ನೊಡೂತ್ತಾ ಹೇಳಿದ ಮಾತುಗಳು ನನ್ನ ಜೀವನದ ಮೊದಲ ಆಶ್ಚರ್ಯದ ಮಾತುಗಳೇ ಆಗಿದ್ದವು. ಅದನ್ನು ಕೇಳಿಸಿಕೊಂಡು ಮೈ ಜುಮ್ಮೆಂದಿತ್ತು...
ಏನ್ರಪಾ ಇವತ್ತು ನಮ್ಮ ಪುಣ್ಯಗಳು ಹೆಚ್ಚಾಗಿ ಫಲಕೊಡುವ ಸಮಯ ,ಸಾಕ್ಷಾತ್ ಶ್ರೀಕೃಷ್ಣ ಯತೀಂದ್ರರು ಬಂದಿದ್ದಾರೆ,ಅವರು ಕೊಟ್ಟ ಹಣ್ಣುಗಳ ಸೇವನೆಯಿಂದ ನಮ್ಮ ಮನಸ್ಸು ಆನಂದತುಂದಿಲವಾಗಿದೆ , ಅವರಿಗೇ ಭಿಕ್ಷಾ ವ್ಯವಸ್ಥೆ ಆಗಬೇಕು ಎಂದು ಹೇಳುತ್ತಾ ಹಾಗೇ ಅಂತರ್ಮುಖಿಗಳಾದರು. ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತಿದ್ದೆವು. ನಂತರ ಪೂಜ್ಯರು ಕಣ್ತೆರೆದು ಗುರುನಾಥರಿಗೆ * ಅವಧೂತರೇ ಇಂದು ಇಲ್ಲೇ ಆಹಾರ ಸ್ವೀಕರಿಸಬಹುದಲ್ಲವೇ ? ಎಂದು ಕೇಳಿದರು.ಗುರುನಾಥರು ಸಮ್ಮತಿಸಿ ಊರೊಳಗೇ ಹೋಗಿ ಭೋಜನ ಸ್ವೀಕರಿಸಿದೆವು. ಅಲ್ಲಿಯೇ ಇದ್ದ ಓರ್ವ ಹೆಣ್ಣುಮಗಳೊಬ್ಬಳನ್ನು ಪೂಜ್ಯರು ಬರಮಾಡಿಕೊಂಡು ಗುರುನಾಥರನ್ನುದ್ದೇಶಿಸಿ ಈ ಕನ್ಯೆಗೆ ಬಹಳೇ ದಿನಗಳಿಂದ ಪ್ರಯತ್ನ ಮಾಡಿದರೂ ಕಂಕಣ ಭಾಗ್ಯವು ಕೂಡಿಬಂದಿಲ್ಲ . ಎಂದು ಹೇಳಿದರು. ಗುರುನಾಥರು ಅಂದಿನಿಂದ ಮೂರು ತಿಂಗಳೊಳಗೆ ಮದುವೆಯಾಗುತ್ತದೆ ಎಂದು ಹೇಳಿದ್ದು ಸತ್ಯವೇ ಆಗಿರುತ್ತದೆ. ನಂತರ ಪೂಜ್ಯ ಬಿಂದು ಮಾಧವರನ್ನು ಉದ್ದೇಶಿಸಿ ಸ್ವಂತ ಸಾಧನೆ ಶ್ರೇಷ್ಠವಾದರೂ , ಲೋಕಸಂಗ್ರಹ ನಿಮಿತ್ತ ತಾವು ಸ್ವಲ್ಪ ಕ್ಷೇತ್ರದ ಕಡೆಯೂ ಗಮನವಿಡಬೇಕು , ಸಾಧನೆಯು ಲೋಕದೃಷ್ಟಿಯಲ್ಲಿ ಇದ್ದರೇ ಭಕ್ತವೃಂದವರಿಗೆ ಬಹಳೇ ಅನುಕೂಲ ಹಾಗೂ ಈ ಕ್ಷೇತ್ರವು ಬಹಳ ಅಭುವೃದ್ಧಿಗೊಳ್ಳಲಿದೆ ಎಂಬುದಾಗಿ ಹೇಳಿದರು.ಇಂದಿಗೆ ಬೆಲಗೂರು ಅತೀಮುಖ್ಯ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ...
ಶ್ರೀ ಸದ್ಗುರು ಚರಣಾರವಿಂದಾರ್ಪಣಮಸ್ತು.
ಸತ್ಯಪ್ರಕಾಶ. ( ಮೂಲ ಲೇಖನ ಬರಹಗಾರರು )...

Social Plugin