ದಿನಂಪ್ರತಿ ರೈತರ ಮಧ್ಯ ಕೃಷಿಯ ಬಗ್ಗೆ ನಿರಂತರ ಸೇವೆ ಒದಗಿಸುವಲ್ಲಿ ಅತ್ಯಂತ ಉತ್ಕçಷ್ಠ ನೆಮ್ಮದಿಗೆ ಕಾರಣವಾಗಿದ್ದು, ದೇಶದಲ್ಲಿನ ಕೃಷಿ ಬದಲಾವಣೆಯತ್ತ ಸಾಗುತ್ತಿರುವದು ಹೆಮ್ಮೆ ಎಂದು ಸಹಾಯಕ ಕೃಷಿ ಅಧಿಕಾರಿ ಕೆ.ಎಸ್. ಅನಂತಪುರ ಹೇಳಿದರು.ಹರಪನಹಳ್ಳಿಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಬನಹಟ್ಟಿಯವರಾದ ಕೆ.ಎಸ್. ಅನಂತಪೂರ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುವದು ದೇಶ ಸೇವೆಯಷ್ಟೇ ಮಹತ್ವವೆಂದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಭುಜರುಕ್ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಎಸ್.ಎಂ. ಬಿರಾದಾರ, ಆರ್.ವಿ. ತುಳಸಿಗೇರಿ, ಎಸ್.ಎ. ಜಮಖಂಡಿ ಸೇರಿದಂತೆ ಅನೇಕರಿದ್ದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin