ತೇರದಾಳ ಸಮೀಪದ ತಮದಡ್ಡಿ ಗ್ರಾಮಕ್ಕೆ ತಹಶೀಲ್ದಾರ ಸಂಜಯ ಇಂಗಳೆ ಹಾಗೂ ನೊಡಲ್ ಅಧಿಕಾರಿ ಅಶೋಕ ಗುಡಿಮನಿ ಭೇಟಿ ನೀಡಿ ಪರಿಸ್ಥಿತಿ ವೀಕ್ಷಣೆ ಮಾಡಿದರು.
ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳ ಠೀಕಾಣಿ....
ತೇರದಾಳ : ಮಹಾರಾಷ್ಟ್ರದಲ್ಲಿ ಮಳ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಸಮೀಪದ ತಮದಡ್ಡಿ ಗ್ರಾಮದ ಜನರ ರಕ್ಷಣೆಗಾಗಿ ಗ್ರಾಮದಲ್ಲಿ ನೋಡಲ್ ಅಧಿಕಾರಿ ಅಶೋಕ ಗುಡಿಮನಿ ಹಾಗೂ ಕಂದಾಯ ಅಧಿಕಾರಿಗಳು ಟೀಕಾಣಿ ಹೂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾದಂತೆ ಕಾಣುತ್ತಿದ್ದು, ಶನಿವಾರ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನೀರಿನ ಪ್ರಮಾಣ ಎರಡುಮೂರು ಅಡಿಯಷ್ಟು ಹೆಚ್ಚಾಗಿದ್ದು ಕಂಡು ಬಂದಿದೆ. ಪ್ರವಾಹ ಹೆಚ್ಚಾದರೆ ಗ್ರಾಮಸ್ಥರನ್ನು ಸ್ಥಳಾಂತರ ಮಾಡುವ ಪರಿಸ್ಥಿತಿ ಬಂದರೆ ಗ್ರಾಮಸ್ಥರ ರಕ್ಷಣೆಗಾಗಿ ಕಾಳಜಿ ಕೇಂದ್ರಗಳನ್ನು ಹಾಗೂ ದನಗಳಿಗೆ ಮೇವು ವ್ಯವಸ್ಥೆಯನ್ನು ಮಾಡಲು ನಾವು ಸುಸಜ್ಜಿತವಾಗಿದ್ದೇವೆ. ಸಧ್ಯಕ್ಕೆ ನೀರು ಕೃಷ್ಣಾ ನದಿಯ ವಡಲಿನಲ್ಲಿಯೇ ಇದೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದರೆ ಕೊಯನಾದಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡಬಹುದು ಇದರಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಪ್ರವಾಹ ಹೆಚ್ಚಾದರೆ ನಾವು ಪರಿಸ್ಥಿಯನ್ನು ನಿಭಾಯಿಸಲು ಮೇಲಾಧಿಗಳ ಆದೇಶದಂತೆ ನಾವು ಸನ್ನಧರಾಗಿದ್ದೇವೆ. ಅವಶ್ಯ ಬಿದ್ದರೆ ಜನ ಜಾನುವಾರಗಳನ್ನು ಸ್ಥಳಾಂತರ ಮಾಡುವಂತೆ ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ ಎಂದು ಅಶೋಕ ಗುಡಿಮನಿ ಪತ್ರಿಕೆಗೆ ತಿಳಿಸಿದ್ದಾರೆ. ಪೋಲಿಸ್, ಕಂದಾಯ ಹಾಗೂ ಆರೋಗ್ಯ ಇಲಾಖೆಯವರು ಸೇರಿ ಜನರ ರಕ್ಷಣೆಗಾಗಿ ನಾವು ಗ್ರಾಮದಲ್ಲಿಯೇ ಟೀಕಾಣಿ ಹೂಡಿದ್ದೇವೆ. ಜನರಿಗೆ ಯಾವುದೇ ರೀತಿಯ ತೊಂದರೆಯಾಗಂದತೆ ನಿಟ್ಟಿನಲ್ಲಿ ಕ್ರಮವಹಿಸಲು ಪ್ರಯತ್ನ ಮಾಡುತ್ತಿದ್ದೇವೆ.
ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದರು.
ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಪಿಎಸ್‍ಐ ರಾಜು ಬೀಳಗಿ, ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ ಗ್ರಾಮದ ಮುಖಂಡರು ಇದ್ದರು.
Social Plugin