ಅನಾರೋಗ್ಯದಿಂದ ನಟ ದುನಿಯಾ ವಿಜಯ್ ತಾಯಿ ನಿಧನ
ಬೆಂಗಳೂರು: ಸ್ಯಾಂಡಲ್ವುಡ್ ನಟ, ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನರಾದರು.
ನಾರಾಯಣಮ್ಮ ಅವರಿಗೆ 80 ವರ್ಷ ವಯಸ್ಸಾಗಿತ್ತು. ಇತ್ತೀಚಿಗೆ ಬ್ರೇನ್ ಸ್ಟ್ರೋಕ್ಗೆ ಒಳಗಾಗಿದ್ದರು. ಮೊನ್ನೆಯಷ್ಟೇ ದುನಿಯಾ ವಿಜಿ ಅಮ್ಮನ ಅನಾರೋಗ್ಯದ ಸುದ್ದಿ ಹಂಚಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಕೋವಿಡ್ನಿಂದ ನಾರಾಯಣಮ್ಮ ಚೇತರಿಸಿಕೊಂಡಿದ್ದರು. ಎಲ್ಲವೂ ಸರಿ ಆಯಿತು ಎನ್ನುವಷ್ಟರಲ್ಲಿ ಬ್ರೇನ್ ಬ್ರೇನ್ ಸ್ಟ್ರೋಕ್ ಆಗಿ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು.
ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲದ ಕಾರಣ ಮನೆಯಲ್ಲೇ ಚಿಕಿತ್ಸೆಗೆ ವಿಜಯ್ ವ್ಯವಸ್ಥೆ ಮಾಡಿಸಿದ್ದರು. 20 ದಿನಗಳಿಂದ ನಿತ್ಯ ಮನೆಗೆ ಬಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಇಂದು ಚಿಕಿತ್ಸೆಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಶುಕ್ರವಾರ ಮಧ್ಯಾಹ್ನ ಆನೇಕಲ್ನ ಕುಂಬಾರ ಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Social Plugin