ಪ್ರತಿ #ಆಷಾಡ_ಹುಣ್ಣಿಮೆಯನ್ನು #ಗುರು_ಪೂರ್ಣಿಮಾ ಅಂತ ಆಚರಿಸುತ್ತೇವೆ ಯಾಕೆಂದರೆ ನಮ್ಮ ಜೀವನದಲ್ಲಿ ಗುರುವಿಗೆ ಅತ್ಯಂತ ದೊಡ್ಡ ಪಾತ್ರ ,ತಾಯಿ ಜನ್ಮ ಕೊಟ್ಟರೆ , ತಂದೆ ನಮ್ಮನ್ನು ಸಾಕಿ ಸಲಹುತ್ತಾನೆ . ಆದರೆ ಗುರು ಜೀವನಪೂರ್ತಿ ನಮ್ಮಲ್ಲಿರುವ ಅಂಧಕಾರವನ್ನು ತೊಳೆದು ಅನ್ನದ ಮಾರ್ಗವನ್ನು ತೋರಿಸುತ್ತಾನೆ ಹೀಗಾಗಿ #ತಂದೆ_ತಾಯಿ_ಗುರು ಈ ಮೂವರು ಬೆಲೆ ಕಟ್ಟಲಾಗದವರು ...ಇನ್ನು ಗುರು ಶಬ್ದವನ್ನು ವಿಶ್ಲೇಷಿಸಿದಾಗ
’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಗುರುವಾಗಿದ್ದಾನೆ...
#ಸಂಸ್ಕೃತದಲ್ಲಿ ಗುರು ಎಂಬ ಪದದ ಅರ್ಥ ‘ಕತ್ತಲೆಯನ್ನು ದೂರ ಮಾಡುವುದು’. ಭಾರತೀಯ ಸಂಸ್ಕೃತಿ ಯಾವಾಗಲೂ ಗುರುಗಳನ್ನು ಗೌರವಿಸಿದೆ. ಗುರು ನಿಮಗೆ ಕಲಿಸುತ್ತಾರೆ, ಜ್ಞಾನೋದಯ ನೀಡುತ್ತಾರೆ ಮತ್ತು ಬೆಳಕಿನೆಡೆ ನಿಮ್ಮನ್ನು ನಡೆಸುತ್ತಾರೆ. ನಿಮಗೆ ಜ್ಞಾನದ ಬೆಳಕನ್ನು ನೀಡುವ ಮೂಲಕ ನಿಮ್ಮನ್ನು ದೇವರಿಗೆ ಇನ್ನಷ್ಟು ಹತ್ತಿರ ಆಗುವಂತೆ ಮಾಡುತ್ತಾರೆ. ಆಷಾಢ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಗುರು ಪೂರ್ಣಿಮಾ ತಿಥಿ ಜುಲೈ 23 ರ ಬೆಳಿಗ್ಗೆ 10:43 ಕ್ಕೆ ಪ್ರಾರಂಭವಾಗಿ, ಜುಲೈ 24 ರ ಬೆಳಿಗ್ಗೆ 08:06 ಕ್ಕೆ ಕೊನೆಗೊಳ್ಳುತ್ತದೆ...
#ಗುರು_ಪೂರ್ಣಿಮೆಯ_ಆಚರಣೆ_ಹೇಗೆ? :- #ಆಯಾ_ಪಂಗಡದವರು ತಮ್ಮದೇ ಆದ ರೀತಿಯಲ್ಲಿ ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ. #ಆಧ್ಯಾತ್ಮದ_ಆಕಾಂಕ್ಷಿಗಳು ವೇದ ವ್ಯಾಸರ ಪೂಜೆಯನ್ನು ಇಟ್ಟುಕೊಳ್ಳುತ್ತಾರೆ. ಗುರು ಪೂರ್ಣಿಮೆ ಚಾತುರ್ಮಾಸದ ಆರಂಭವನ್ನು ಸೂಚಿಸುತ್ತದೆ. ಹಿಂದೂ, ಬೌದ್ಧ ಮತ್ತು ಜೈನ ಧರ್ಮದವರು, ಬ್ರಹ್ಮ ಮುಹೂರ್ತದಲ್ಲಿ (ಬೆಳಗ್ಗಿನ ಜಾವ 4 ಗಂಟೆಗೆ) ಎದ್ದು ಗುರು ಪೂರ್ಣಿಮೆ ಆಚರಿಸುತ್ತಾರೆ. ಅವು ತಮ್ಮ ಗುರುವಿನ ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಧ್ಯಾನ ಮಾಡುತ್ತಾರೆ. ಬಳಿಕ ಅವರು ಗುರುಗಳ ಪಾದ ಪೂಜೆ ಮಾಡುತ್ತಾರೆ.
ಆ ದಿನ ಸಾಧು ಸಂತರನ್ನು ಪೂಜಿಸಲಾಗುತ್ತದೆ ಮತ್ತು ಮಧ್ಯಾಹ್ನದ ಭೋಜನವನ್ನು ನೀಡಲಾಗುತ್ತದೆ. ದಿನವಿಡೀ ಸತ್ಸಂಗ ಇರುತ್ತದೆ. ಸನ್ಯಾಸ ತೆಗೆದುಕೊಳ್ಳಬಯಸುವವರು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ದಿನ ಕೆಲವರು ತಮ್ಮ ಆಧ್ಯಾತ್ಮಿಕ ಜ್ಞಾನ ಮತ್ತು ಗುರಿಗಳನ್ನು ಮುಂದುವರೆಸಲು ಹೊಸ ನಿರ್ಣಯಗಳನ್ನು ಮತ್ತು ಕೆಲವರು ಉಪವಾಸ ಮಾಡಬಹುದು. ಕೆಲವರು ಮೌನ ವೃತ ಆಚರಿಸಿ, ಇಡೀ ದಿನವನ್ನು ಅಧ್ಯಾತ್ಮಿಕ ಮತ್ತು ಧಾರ್ಮಿಕ ಪುಸ್ತಕಗಳ ಅಧ್ಯಯನದಲ್ಲಿ ಕಳೆಯುತ್ತಾರೆ. ತಮ್ಮ ಗುರುಗಳಿಗೆ ಧನ್ಯವಾದ ಹೇಳಿ , ಅವರ ಆಶೀರ್ವಾದ ಪಡೆಯುವ ಪುಣ್ಯ ದಿನವಿದು. ಈ ದಿನ ಯೋಗ, ಸಾಧನೆ ಮತ್ತು ಧ್ಯಾನದ ಅಭ್ಯಾಸಕ್ಕೂ ಸೂಕ್ತವಾಗಿದೆ.
#ಗುರು_ಪೂರ್ಣಿಮೆಯ_ಮಹತ್ವ :- ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ.
ಗುರುರ್ ಬ್ರಹ್ಮ
ಗುರುರ್ ವಿಷ್ಣು
ಗುರುರ್ ದೇವೋ ಮಹೇಶ್ವರಃ
ಗುರುರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಹಃ
#ಅದರ_ಅರ್ಥ: ( ಗುರುವು ನಮ್ಮೊಳಗೆ ಜ್ಞಾನವನ್ನು ಹುಟ್ಟಿಸುವ ಬ್ರಹ್ಮನಂತೆ, ನಮ್ಮ ಮನಸ್ಸಿನ ಜ್ಞಾನವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ವಿಷ್ಣುವಿನಂತೆ, ನಮ್ಮ ಜ್ಞಾನಕ್ಕೆ ಅಂಟಿಕೊಂಡಿರುವ ತಪ್ಪು ಪರಿಕಲ್ಪನೆಗಳನ್ನು ನಾಶಪಡಿಸುವ ಶಿವನಂತೆ. ಹಾಗಾಗಿ ಗುರುವು ನಮಗೆ ಪರಮ ದೈವದಂತೆ ನಾವು ನಮ್ಮ ಗುರುವನ್ನು ಪೂಜಿಸಬೇಕು ಮತ್ತು ಅವರಿಗೆ ಗೌರವ ನೀಡಬೇಕು.)
ಆ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ಆಚರಿಸುತ್ತಾರೆ.. ಹಿಂದೂಗಳ ಪಾಲಿಗೆ ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ.... ವೇದವ್ಯಾಸರು , ಗುರುಗಳ ಗುರುವೆಂಬ ಗೌರವಕ್ಕೆ ಪಾತ್ರರಾಗಿರುವ ದತ್ತಾತ್ರೇಯರ ಗುರು ಕೂಡ. ಹಿಂದೂಗಳು ಈ ದಿನವನ್ನು ಶಿವನಿಗೂ ಅರ್ಪಿಸುತ್ತಾರೆ. ವೇದ ಮತ್ತು ಪುರಾಣಗಳ ಜ್ಞಾನವನ್ನು ಸಪ್ತ ಋಷಿಗಳಿಗೆ ನೀಡಿದರು. ಹಾಗಾಗಿ ಭಗವಾನ್ ಶಿವನನ್ನು ಆದಿ ಗುರು , ಅಂದರೆ ಪ್ರಥಮ ಗುರು ಎಂದು ಕೂಡ ಕರೆಯುತ್ತಾರೆ.
ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿಗಳು ಹಾಗೂ ತಾಯಿ ಸತ್ಯವತಿದೇವಿ.. ಒಮ್ಮೆ ಮಹರ್ಷಿ ಪರಾಶರರು ನಾವೆಯೊಂದರಲ್ಲಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಮೀನು ಕೊಳೆತಾಗ ಬರುವ ಕೆಟ್ಟ ವಾಸನೆ ಬರುತ್ತಿತ್ತು. ಅವರು ಆ ದ್ವೀಪಕ್ಕೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ಕುರೂಪಿಯಾದ ಸ್ತ್ರೀ ಕುಳಿತಿದ್ದಳು. ಆಕೆಯ ದೇಹದಿಂದಲೇ ಆ ಕೆಟ್ಟ ವಾಸನೆ ಬರುತ್ತಿತ್ತು. ಆಕೆ ಪರಾಶರ ಮುನಿಗಳನ್ನು ನೋಡಿ , ಬಳಿಗೆ ಬಂದು ಅವರ ಪಾದಕ್ಕೆರಗಿದಳು. ಆಕೆಯ ಹೆಸರು ಸತ್ಯವತಿ. ಆಕೆಯ ದೇಹದಿಂದ ಮೀನಿನ ವಾಸನೆ ಬರುತ್ತಿದ್ದುದರಿಂದ ಆಕೆಯನ್ನು ಮತ್ಸ್ಯಗಂಧೀ ಎಂದೂ ಮತ್ತು ಆ ವಾಸನೆಯು ಯೋಜನ ದೂರದವರೆಗೂ ಪಸರಿಸುತ್ತಿದ್ದುದರಿಂದ ಆಕೆಯನ್ನು ಯೋಜನಗಂಧೀ ಎಂದೂ ಕರೆಯುತ್ತಾರೆ. ಆಕೆಯು ಮೂಲತಃ ಬೆಸ್ತರವಳಲ್ಲ. ಅದ್ರಿಕೆ ಎಂಬ ಒಬ್ಬಳು ಅಪ್ಸರೆಯು ಬ್ರಹ್ಮನ ಶಾಪದಿಂದಾಗಿ ಮತ್ಸ್ಯ ಕನ್ಯೆಯಾಗಿದ್ದಳು. ಆ ಮತ್ಸ್ಯಕನ್ಯೆ ಅದ್ರಿಕೆಗೆ ಜನಿಸಿದವಳು ಈ ಸತ್ಯವತಿ. ಬೆಸ್ತರ ರಾಜ ಕಂದರನು ಆಕೆಯನ್ನು ಸಾಕಿಕೊಂಡಿದ್ದುದರಿಂದ ಆಕೆ ಬೆಸ್ತರ ಮಗಳಾದಳು. ಆಕೆಯು ವಸುದೇವರಿಂದ ಶಾಪಗ್ರಸ್ತಳಾಗಿದ್ದುದರಿಂದ ಆಕೆಯ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು.
ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕೆಂದು ಆಕೆ ಪರಾಶರರನ್ನು ಪ್ರಾರ್ಥಿಸಿದಾಗ , ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡಿದರು. ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವಂತಳಾದಳು. ನಂತರ , ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ , ಗಾಂಧರ್ವ ರೀತಿಯಲ್ಲಿ ಆಕೆಯನ್ನು ವಿವಾಹವಾದರು. ಇವರಿಬ್ಬರಿಂದ ಜನಿಸಿದ ಮಗುವೇ ಕೃಷ್ಣ ದ್ವೈಪಾಯನ. ಅಂದರೆ ವ್ಯಾಸರು. ಕೃಷ್ಣ ಎಂದರೆ ಕಪ್ಪು ಎಂತಲೂ ದ್ವೈಪಾಯನ ಎಂದರೆ ಸುತ್ತಲೂ ನೀರು ಇರುವ ಪ್ರದೇಶ ಅಂದರೆ ದ್ವೀಪ ಎಂತಲೂ ಅರ್ಥ. ಹೀಗೆ ವ್ಯಾಸರ ಬಣ್ಣ ಕಪ್ಪಾಗಿದ್ದು ದ್ವೀಪದಲ್ಲಿ ಜನಿಸಿದವರಾದ್ದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಈ ದ್ವೀಪವು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ.
ಮಗುವಾಗಿ ಹುಟ್ಟಿದ ಕ್ಷಣವೇ ಕೃಷ್ಣದ್ವೈಪಾಯನರು ದೊಡ್ಡವರಾಗಿ ಬೆಳೆದು , ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾದರು. ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇರುವ ಏಳು ಚಿರಂಜೀವಿಗಳಲ್ಲಿ ಇವರೂ ಒಬ್ಬರು. ಕೃಷ್ಣದ್ವೈಪಾಯನರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ , ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿನ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳನ್ನು ಋಗ್ವೇದ , ಯಜುರ್ವೇದ , ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ , ಅವುಗಳನ್ನು ಕ್ರಮವಾಗಿ ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಪೈಲ , ವೈಶಂಪಾಯನ , ಜೈಮಿನಿ ಮತ್ತು ಸುಮಂತು ಮುನಿಗಳಿಗೆ ಬೋಧಿಸಿದರು.
ಆ ನಾಲ್ಕು ಮುನಿಗಳು ತಮ್ಮ ಶಿಷ್ಯ ಪರಂಪರೆಗೆ ಆ ವೇದವನ್ನು ಬೋಧಿಸಿದರು. ಹೀಗೇ ವೇದ ಪಾಠವು ಇಂದಿಗೂ ಗುರುಗಳಿಂದ ಶಿಷ್ಯರಿಗೆ ನಡೆಯುತ್ತಿದೆ. ಹೀಗೆ ವೇದವನ್ನು ವಿಭಜಿಸಿದುದರಿಂದ ಕೃಷ್ಣದ್ವೈಪಾಯನರಿಗೆ ವೇದವ್ಯಾಸ ಎಂಬ ಗೌರವ ನಾಮ ದೊರೆಯಿತು. ಭಗವಾನ್ ವೇದವ್ಯಾಸರು ನಾಲ್ಕು ವೇದಗಳನ್ನು ರಚಿಸಿದ್ದಲ್ಲದೇ , 18 ಪುರಾಣಗಳನ್ನು , ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ. ವೇದಾಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸ ಮಹರ್ಷಿಗಳು ಗುರುಗಳಿಗೆ ಗುರುಗಳಾಗಿ ಪರಮ ಗುರುಗಳಾಗಿದ್ದಾರೆ. ಹೀಗಾಗಿ ಅವರ ಜನ್ಮ ದಿನವಾದ ಈ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ.
ಹಿಂದೂಗಳಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಗುರಗಳದ್ದಾಗಿದೆ. ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಗೌರವ ತೋರುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವ್ಯಾಸರ ನೆನಪಿಗಾಗಿ ಈ ದಿವಸವನ್ನು ಆಚರಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸರ ಪೂಜೆಯನ್ನು ನೆರವೇರಿಸಲಾಗುತ್ತದೆ. ಇದೇ ದಿನದಂದು ಗುರುಗಳ ಪಾದಪೂಜೆಗಳನ್ನು ಮಾಡುತ್ತಾರೆ. ಯತಿಗಳು ಗುರುಪೂರ್ಣಿಮೆಯಂದು ಚಾತುರ್ಮಾಸ್ಯವನ್ನು ಆರಂಭಿಸುತ್ತಾರೆ. ವೇದವ್ಯಾಸರು ಇದೇ ದಿನದಂದು ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರಂತೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ. ಏಕಲವ್ಯನು ಇದೇ ದಿನದಂದು ತನ್ನ ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬರಳನ್ನೇ ಕತ್ತರಿಸಿಕೊಟ್ಟನಂತೆ.
ಬೌದ್ಧರಿಗೂ ಗುರು ಪೂರ್ಣಿಮೆಯು ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಬೌದ್ಧರು ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ.......

Social Plugin