ವರದಿ : ವಿಜಯ ವಾಜಂತ್ರಿ

ತೇರದಾಳದ ಪುರಸಭೆಯ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮಾತನಾಡಿದರು.

ತೇರದಾಳ ಸಾಮಾನ್ಯ ಸಭೆಯಲ್ಲಿ ಮಾಸ್ಟರ್ ಪ್ಲ್ಯಾನಗೆ ಸಭೆಯ ಒಪ್ಪಿಗೆ

ತೇರದಾಳ : ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ನಕ್ಷೆ ಹಾಗೂ ಯೋಜನಾ ವರದಿಯನ್ನು ತಯಾರಿಸುವಂತೆ ತೇರದಾಳ ಮಾಸ್ಟರ್ ಪ್ಲ್ಯಾನ 2012ರಲ್ಲಿ ಘೋಷಣೆಯಾಗಿದೆ ಅದು ಈವರೆಗೆ ಜಾರಿಗೆ ಬಂದಿಲ್ಲ ಅದನ್ನು ಶೀಘ್ರವಾಗಿ ಜಾರಿಗೆ ತರಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು.

  ಕಟ್ಟಡ ಪರವಾಣಿಗೆಗಾಗಿ ಆನ್‍ಲೈನ್ ಅರ್ಜಿ ಸಲ್ಲಿಸಬೇಕು ಎಂಬ ವಿಷಯದ ಮೇಲೆ ಚರ್ಚೆ ನಡೆದು ಕಟ್ಟಡ ಪರವಾಣಿಗೆಯು ಸ್ಥಳಿಯವಾಗಿಯೇ ಸಿಗುವಂತಾಗಬೇಕು. ಇದರಿಂದ ಜನರು ಕಚೇರಿಗೆ ಅಲೆಯುವುದು ತಪ್ಪುತ್ತದೆ ಎಂದು ರುಸ್ತುಂ ನಿಪ್ಪಾಣಿ ಹೇಳಿದರು. ಪರವಾಣಿಗೆಗಾಗಿ ಜಮಖಂಡಿಗೆ ಬರುವ ಅವಶ್ಯಕತೆಯಿಲ್ಲ, ಆನಲೈನ ಪರವಾಣಿಗೆಯು 30ದಿನಗಳಲ್ಲಿ ಸಿಗುತ್ತದೆ ಸಹಾಯಕ ನಗರ ಯೋಜನಾಧಿಕಾರಿ ಹೇಳಿದರು. ಪರವಾಣಿಗೆ ಕೊಡುವಾಗ ಚರಂಡಿಗಳ ಮೇಲೆ ಕಟ್ಟೆಗಳನ್ನು ಕಟ್ಟುವುದು ಹಾಗೂ ಚರಂಡಿ ಮೇಲೆ ಸ್ಲ್ಯಾಪ್ ಹಾಕುವುದು ಚರಂಡಿ ಮೇಲೆ ಪಾಯರಿ ಕಟ್ಟದಂತೆ ಪರವಾಣಿಗೆ ಕೊಡಬೇಕು ಅಕಸ್ಮಾತ ಕಟ್ಟಿದರೆ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಆಧಿನಾಥ ಸಪ್ತಸಾಗರ ಕೇಳಿದ ಪ್ರಶ್ನೆಗೆ ಮುಖ್ಯಾಧಿಕಾರಿ ಮಾತನಾಡಿ ನಿಮ್ಮ ಸಹಕಾರವಿದ್ದರೆ ಇದನ್ನು ಕಾರ್ಯ ರೂಪಕ್ಕೆ ತರಲಾಗುವುದು ಎಂದರು. ಪವರಲೂಮಗಳಿಗೆ ಹಾಕುವ ತೆರಿಗೆ ಹೆಚ್ಚಾಗಿರುವುದರಿಂದ ಅದನ್ನು ಕಡಿಮೆ ಮಾಡಬೇಕು ಎಂದು ನೇಕಾರರಿಂದ ಕೇಳಿ ಬಂದಿರುವುದರಿಂದ ಕಡಿಮೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾಣ ಮಾಡಲಾಯಿತು.

     ವಾರ್ಡಗಳಲ್ಲಿ ಚರಂಡಿ ಸ್ವಚ್ಚ ಮಾಡುವ ಬಗ್ಗೆ ಉಪವಿಭಾಗಾಧಿಕಾರಿ ವಾಟ್‍ಶಾಪ್ ಗ್ರುಪ್‍ದಲ್ಲಿ ಬಿಡುವುದರ ಬಗ್ಗೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ವಾರ್ಡಗಳಲ್ಲಿ ಸದಸ್ಯರು ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ವಾರ್ಡ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಸಾಮಾನ್ಯ ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು. ಕುಡಚಿ ಕಾಗವಾಡ ರಸ್ತೆಯ ಪಕ್ಕದಲ್ಲಿರುವ ತೆರೆದ ಭಾವಿಯನ್ನು ಮುಚ್ಚುವ ಬದಲಾಗಿ ತಡೆಗೋಡೆ ನಿರ್ಮಿಸಬೇಕು. ಹಾಗೂ ಈ ಯೋಜನೆಯಿಂದ ಕಳೆದು ಹೋದ ಸರಕಾರಿ ಜಾಗೆಗಳು ಯಾವವು ಎಂದು ತಿಳಿಯುತ್ತದೆ. ರಸ್ತೆಗಳು ಎಲ್ಲೆಲ್ಲಿ ಎಷ್ಟೆಷ್ಟು ಅಡಿ ಇವೆ ಎಂದು ತಿಳಿಯುತ್ತದೆ ಎಂದು ಅಧಿಕಾರಿಗಳು ಸಭೆಗೆ ಹೇಳುತ್ತಿದ್ದಂತೆ ಸಭೆಯ ಒಪ್ಪಿಗೆ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಥಾಯಿ ಸಮೀತಿಯನ್ನು ರಚಿಸಲಾಯಿತು.

 ಸಭೆಯ ಅಧ್ಯಕ್ಷತೆಯನ್ನು ಅನ್ನಪೂರ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶಾಂತವ್ವ ಕಾಲತಿಪ್ಪಿ , ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಎಫ್.ಬಿ.ಗಿಡ್ಡಿ ಸೇರಿದಂತೆ ಪುರಸಭೆ ಸದಸ್ಯರು ಪುರಸಭೆ ಅಧಿಕಾರಿಗಳು ಇದ್ದರು.