ಅಳಗವಾಡಿ ಗ್ರಾಮದಲ್ಲಿ ಶಾಲಾ ದಾಖಲಾತಿ ಆಂದೋಲನ...
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ೧: ಸಮೀಪದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಅಳಗವಾಡಿ ಶಾಲೆಯಲ್ಲಿ ಶಾಲಾ ದಾಖಲಾತಿ ಆಂದೋಲನವನ್ನು ದಿನಾಂಕ : 1-7-2021 ಕೈಗೊಳ್ಳಲಾಯಿತು
ಈ ವರ್ಷದಿಂದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಅಳಗವಾಡಿಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ಪ್ರಾರಂಭವಾಗಿದ್ದು ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರವೇಶ ಪಡೆಯಲು ತಿಳಿಸಲಾಯಿತು ಒಂದರಿಂದ ಏಳನೇ ತರಗತಿಯ ಕನ್ನಡ ಮಾಧ್ಯಮದ ತರಗತಿಗಳಿಗೂ ಪ್ರವೇಶ ಪಡೆಯಲು ತಿಳಿಸಲಾಯಿತು.
ಪ್ರಭಾತಪೇರಿಯಲ್ಲಿ ಕೈಗೊಂಡು ಪಾಲಕರಿಗೆ ಮಕ್ಕಳಿಗೆ ಆನ್ಲೈನ್ ಶಿಕ್ಷಣ, ಶಿಕ್ಷಣ ಚಂದನ ಟಿವಿ ವಾಹಿನಿಯಲ್ಲಿ ಬರುವ ಪಾಠಗಳ ಪ್ರಸಾರದ ಕುರಿತು ಹಾಗೂ ಕರೋನ 19ರಲ್ಲಿ ಮಕ್ಕಳಿಗೆ ಹಾಗೂ ಪಾಲಕರಿಗೆ ಲಸಿಕೆಯ ಮಹತ್ವದ ಕುರಿತು ಜನ ಜಾಗೃತಿ ಮೂಡಿಸಲಾಯಿತು.
ಪ್ರಧಾನ ಗುರುಗಳು ಶ್ರೀ ಸುಲೇಮಾನ್ ಶೇಕ್ ಹಾಗೂ ಶ್ರೀ ಆಯ್ ಆರ್ ನದಾಫ್ ಸಹ ಶಿಕ್ಷಕರುಗಳಾದ ರುಕ್ಸಾನ ಮುಲ್ಲಾ, ಲಕ್ಷ್ಮಿ ಸರಸ್ವತಿ, ಹೇಮಮಾಲಿನಿ ಯು ಎಸ್, ಅಡುಗೆ ಸಿಬ್ಬಂದಿ ಅವರು ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.