ವರದಿ : ವಿಜಯ ವಾಜಂತ್ರಿ

ತೇರದಾಳ ಸಮೀಪದ ಹನಗಂಡಿ ಗ್ರಾಮದಲ್ಲಿ ಕುರಿ ಹಾಗೂ ಆಡುಗಳಿಗೆ ರೋಗ ನಿರೋಧಕ ಲಸಿಕೆಯನ್ನು ಹಾಕಲಾಯಿತು.

ಸಿಡುಕು ರೋಗ ತಡೆಯಲು ಕುರಿಗಳಿಗೆ ಲಸಿಕೆ ಹಾಕಿಸಿ

ತೇರದಾಳ : ಸಿಡುಕು ರೋಗ ಕುರಿ ಮತ್ತು ಆಡುಗಳಿಗೆ ಮಳೆಗಾಲದಲ್ಲಿ ಬರುವಂತ ರೋಗ. ಶೇ. 20 ಕುರಿಗಳು ರೋಗ ಬಂದ ಎರಡು ದಿನಗಳಲ್ಲಿ ಮರಣ ಹೊಂದುವ ಸಾಧ್ಯತೆ ಇದೆ. ಈ ರೋಗವನ್ನು ತಡೆಯಲು ಇಟಿ ಎಂಬ ಲಸಿಕೆಯನ್ನು ಹಾಕುವುದರಿಂದ ಸಿಡುಕು ರೋಗವನ್ನು ತಡೆಗಟ್ಟಬಹುದು ಎಂದು ಪಶು ವೈದ್ಯಾಧಿಕಾರಿ ಡಾ. ಜಿ. ಬಿ. ಗುರವ ಹೇಳಿದರು.

  ಇಲ್ಲಿಗೆ ಸಮೀಪದ ಹನಗಂಡಿ ಗ್ರಾಮದ ಯಲ್ಲಮ್ಮ ದೇವಸ್ಥಾನದ ಹತ್ತಿರ ಶ್ರೀ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘ ತೇರದಾಳ ಹಾಗೂ ಪಶು ಸಂಗೋಪನಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕುರಿಗಳಿಗೆ ಲಸಿಕೆ ಹಾಗೂ ಜಂತುನಾಶಕ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಕುರಿ ಮತ್ತು ಆಡುಗಳು ಹಸಿರು ಮೆಯಿವುದರಿಂದ ಅವುಗಳಿಗೆ ರೋಗ ಬಾಧೆ ಕಾಡುವುದರಿಂದ ಈಟಿ ಎಂಬ ಲಸಿಕೆಯನ್ನು ಎಲ್ಲ ಕುರಿ ಹಾಗೂ ಆಡುಗಳಿಗೆ ಹಾಕಲಾಗುತ್ತಿದೆ. ಆ ರೋಗಗಳು ಬರದಂತೆ ತಡೆಯಲು ಈಟಿ ಲಸಿಕೆಯನ್ನು ಹಾಕಲಾಗುತ್ತಿದೆ. ಇದರ ಜೊತೆಗೆ ಜಂತು ನಾಶಕ ಮತ್ತು ವಿಟಾಮಿನ್ ಹಾಗೂ ಮಿನರಲ್ ಔಷಧಿಯನ್ನು ಸಹ ನೀಡುವ ಕಾರ್ಯಕ್ರಮ ಇದಾಗಿದೆ. ಅದಕ್ಕೆ ಸರಕಾರ ಕುರಿಗಳಿಗೆ ಬರುವ ರೋಗಗಳನ್ನು ಗಮನದಲ್ಲಿಟ್ಟುಕೊಂಡು ಕುರಿಗಾರರಿಗೆ ಅನುಕೂಲವಾಗಲಿ ಎಂದು ಸರಕಾರ ಕಾಲ ಕಾಲಕ್ಕೆ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಈ ಕಾರ್ಯಕ್ರಮವನ್ನು ಎಲ್ಲ ಕುರಿಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

  ಈ ಸಂದರ್ಭದ ಸಂಘದ ಅಧ್ಯಕ್ಷ ಅಶೋಕ ಹಾಡಕಾರ, ಮುಖ್ಯ ಕಾರ್ಯದರ್ಶಿ ಸಂಜು ಹಾಡಕಾರ, ನಿರ್ದೇಶಕರಾದ ಪ್ರಭು ಗಡದಿ, ಕುರಿಗಾರರಾದ ಸಿದ್ದಪ್ಪ ಕೊಳ್ಳನವರ, ಮಾರುತಿ ಮೀಶೆನ್ನವರ, ಪ್ರಕಾಶ ಅರೆನಾಡ ಸೇರಿದಂತೆ ಇನ್ನಿತರರು ಇದ್ದರು.