*ಎಲ್ಲ ವರ್ಗದ ನೇಕಾರರಿಗೂ ಯೋಜನೆ ಅನ್ವಯ*
ಸರ್ಕಾರದ ೨ನೇ ಪ್ಯಾಕೇಜ್‌ನಲ್ಲಿ ನಿಶ್ಚಿತವಾಗಿ ನೇಕಾರ ಸಮುದಾಯಕ್ಕೆ ಸಹಾಯ ಧನ ನೀಡುವದಾಗಿ ವಿಶ್ವಾಸ ಕಾರಣ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೇಕಾರ ಸಮುದಾಯ ಮೊದಲುಗೊಂಡು, ಮೀನುಗರರು, ಅರೆಕಾಲಿಕ ಶಿಕ್ಷಕರಿಗೆ, ಆಶಾ ಹಾಗು ಅಂಗನವಾಡಿ ಕಾರ್ಯಕರ್ತರಿಗೆ ವಿಶೇಷ ಪ್ಯಾಕೇಜ್‌ನೊಂದಿಗೆ ೩ ಸಾವಿರ ರೂ.ಗಳನ್ನು ಸಹಾಯ ಧನ ನೀಡಿರುವದು ಸ್ವಾಗತವೆಂದು ತೇರದಾಳ ಶಾಸಕ ಸಿದ್ದು ಸವದಿ M R NEWS ಗೆ ತಿಳಿಸಿದರು.
ಡಿಸಿಎಂ ಗೋವಿಂದ ಕಾರಜೋಳ, ಬೆಳಗಾವಿ ಶಾಸಕ ಅಭಯ ಪಾಟೀಲ ಹಾಗುರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ನೇತೃತ್ವದಲ್ಲಿ ನೇಕಾರರಿಗೆ ಕನಿಷ್ಠ ೫ ಸಾವಿರ ರೂ.ಗಳ ಬೇಡಿಕೆಯಿಟ್ಟಿದ್ದೆವು. ೩ ಸಾವಿರ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷ ಇಂತಹ ಸಂಕಷ್ಟ ಸ್ಥಿತಿಯಲ್ಲಿ ೨ ಸಾವಿರ ರೂ.ಗಳನ್ನು ಬಿಡುಗಡೆ ಮಾಡಿದ್ದು, ಈ ವರ್ಷ ಹೆಚ್ಚಳಗೊಳಿಸಿದ್ದು ನೆಮ್ಮದಿ ತಂದಿದೆ ಎಂದರು.
ಕಳೆದ ವರ್ಷದ ನೇಕಾರರ ಪಟ್ಟಿ ಸರ್ಕಾರ ಮಟ್ಟದಲ್ಲಿದೆ ಇನ್ನುಳಿದ ಫಲಾನುಭವಿಗಳು ವಿದ್ಯುತ್ ಬಿಲ್ ಸೇರಿದಂತೆ ಸಮರ್ಪಕ ದಾಖಲೆ ಒದಗಿಸಿದಲ್ಲಿ ಅಂಥವರಿಗೂ ಸಹಾಯ ಧನ ಒದಗಿಸಲಾಗುವದು. ಕಳೆದ ವರ್ಷ ಯೋಜನೆಯಿಂದ ವಂಚಿತರಾದವರು ಸೂಕ್ತ ದಾಖಲೆಗಳನ್ನು ಜವಳಿ ಇಲಾಖೆಗೆ ನೀಡಿ ಪರಿಹಾರದ ಪ್ರಯೋಜನ ಪಡೆದುಕೊಳ್ಳಬೇಕೆಂದರು. ವಿಪಕ್ಷ ಮೇಲೆ ಕಿಡಿ: ನಾವೇ ಪ್ಯಾಕೇಜ್ ಬಿಡುಗಡೆ ಮಾಡಿಸಿದ್ದೇವೆಂದು ಕಳಪೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಇಂತಹ ಪರಿಸ್ಥಿತಿಯಲ್ಲಾದರೂ ಸುಳ್ಳು ಹೇಳುವದನ್ನು ಬಿಡಬೇಕೆಂದು ಶಾಸಕ ಸವದಿ ವಿಪಕ್ಷದ ಮೇಲೆ ಕಿಡಿಕಾರಿದರು.
`ನೇಕಾರ ಸಮುದಾಯಕ್ಕೆ ೩ ಸಾವಿರ ರೂ.ಗಳನ್ನು ಸಹಾಯ ಧನ ಬಿಡುಗಡೆ ಮಾಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಪರಿಸ್ಥಿತಿ ಚಿಂತಾಜನಕವಿದ್ದು ಕನಿಷ್ಠ ೫ ಸಾವಿರ ರೂ.ಗಳಷ್ಟು ಮಾಡಬೇಕಿತ್ತೆಂದು ಪಾವರ್‌ಲೂಮ್ ಮಾಲಿಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ ಒತ್ತಾಯಿಸಿದರು.
ಸಂಕಷ್ಟದಲ್ಲಿರುವ ನೇಕಾರರಿಗೆ ಸಹಾಯ ಮಾಡಿರುವ ಸರ್ಕಾರಕ್ಕೆ ಅಭಿನಂದಿಸುವೆ. ನೇಕಾರರಷ್ಟೇ ಅಲ್ಲದೆ ಇದಕ್ಕೆ ಪೂರಕವಾಗಿರುವ ವಾಂಡರ್, ಸೈಜರ್, ನೂಲು ಸುತ್ತುವರು ಸೇರಿದಂತೆ ಅನೇಕ ಕಾರ್ಮಿಕರಿಗೂ ಯೋಜನೆ ಪ್ರಾಮಾಣಿಕವಾಗಿ ತಲುಪಲೆಂದು ಸೈಜಿಂಗ್ ಮಾಲಿಕರ ಸಂಘದ ಅಧ್ಯಕ್ಷ ಬ್ರಿಜ್ ಮೋಹನ ಡಾಗಾ ಹೇಳಿದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin