*ಅಟೋ ಚಾಲಕರಿಗೆ ಸೂಕ್ತ ಸೌಲಭ್ಯಕ್ಕಾಗಿ ಮನವಿ*
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಂತೆ ನೇಕಾರರನ್ನು ಕೂಡಾ ಪರಿಗಣಿಸಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ವಿಶೇಷ ತಹಶೀಲ್ದಾರ್ ಎಸ್.ಬಿ.ಕಾಂಬಳೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ನೇಕಾರಿಕೆ ಉದ್ಯೋಗದ ಪೂರಕ ಕಾರ್ಯಗಳಲ್ಲಿ ತೊಡಗಿಕೊಂಡಿರುವವರನ್ನು ನೇಕಾರ ಸಮ್ಮಾನ ಯೋಜನೆಯಲ್ಲಿ ಸೇರಿಸಬೇಕು. ಅವರಿಗೆ ಕಾರ್ಮಿಕರಿಗೆದೊರೆಯುವ ಎಲ್ಲ ಸೌಲಭ್ಯ ಜೊತೆಗೆ ಪ್ರತಿ ವರ್ಷ ರೂ. ಹತ್ತು ಸಾವಿರ ಸಹಾಯ ಧನ, ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಹತ್ತು ಲಕ್ಷ ರೂ. ಪರಿಹಾರ ನೀಡಬೇಕೆಂದು ಶಿವಲಿಂಗ ಟಿರಕಿ ಆಗ್ರಹಿಸಿದರು. ಉದಯ ಕುಲಗೋಡ, ಲಕ್ಕಪ್ಪ ಪವಾರ, ಆರ್.ಎಂ.ಮಾಳಿ, ರವಿ ಕೊರ್ತಿ, ಮಹಾದೇವ ಹುಕ್ಕೇರಿ, ಎಸ್.ಎಸ್.ಉದಗಟ್ಟಿ ಇದ್ದರು.
*ಎಲ್ಲ ಆಟೊ ಚಾಲಕರಿಗೆ ಸರ್ಕಾರದ ಸೌಲಭ್ಯ ನೀಡಿ*
ಎಲ್ಲ ಅಟೋ ಚಾಲಕರಿಗೆ ಸರಕಾರದ ಸೌಲಭ್ಯ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಉತ್ತರ ಕರ್ನಾಟಕ ಆಟೊ ಚಾಲಕರ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಅರ್ಪಿಸಲಾಯಿತು.
ರಾಜ್ಯದಲ್ಲಿ ಸುಮಾರು ೬ ಲಕ್ಷ ಆಟೊ ಚಾಲಕರಿದ್ದು, ಕೇವಲ ೨.೧೦ ಲಕ್ಷ ಅಟೋ ಚಾಲಕರಿಗೆ ಮಾತ್ರ ಘೋಷಣೆ ಮಾಡಿದೆ. ಸರ್ಕಾರದ ನಿಯಮಗಳು ಆಟೊ ಚಾಲಕರಿಗೆ ಮೋಸವಾಗಿದ್ದು ಎಲ್ಲರಿಗೂ ಪರಿಹಾರ ದೊರಕುವಲ್ಲಿ ತಾರತಮ್ಯವಾಗಿದೆ. ಅಟೋ ಚಾಲಕರಿಗೆ ಕಾರ್ಮಿಕ ಕಾರ್ಡ್, ಆಹಾರದ ಕಿಟ್ ನೀಡಬೇಕು. ಹಾಗೂ ಎಲ್ಲ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ಕಂಪನಿಗಳು ಅಟೋ ಚಾಲಕರಿಗೆ ಒತ್ತಡ ಹಾಕದಂತೆ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಲಾಯಿತು.ಕರವೇ ತಾಲೂಕಾಧ್ಯಕ್ಷ ಮಾಳು ದುರ್ಗನ್ನವರ, ಮಹಮ್ಮದಹುಸೇನ ಲೆಂಗ್ರೆ, ದಾದಾಪೀರ ಶೀವಳ್ಳಿ, ಕೆಂಪಯ್ಯ ಡಾಳಗೋಳ, ಸೇರಿದಂತೆ ಅಟೋ ಚಾಲಕರಿದ್ದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin