ಬೆಳಗಾವಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಘಟಪ್ರಭಾ ಮಲಪ್ರಭಾ ಕೃಷ್ಣ ಮತ್ತು ಮಾರ್ಕಂಡೇಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಮಾರ್ಕಂಡೇಯ ನದಿಯಲ್ಲಿ ಸಿದ್ದರಾಯ ಸುತಗಟ್ಟಿ ಎಂಬ ರೈತ ಕೊಚ್ಚಿಕೊಂಡು ಹೋಗಿದ್ದು ಕಾಕತಿ ಸುತ್ತಮುತ್ತಲಿನ ಪ್ರದೇಶದಲ್ಲಿ SDRF ತಂಡ ರೈತನಿಗಾಗಿ ಮೂಲಕ ಶೋಧ ಕಾರ್ಯ ನಡೆಸಿದೆ.
ಇನ್ನೂ ಮಲಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೋರ್ವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಸೌದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬಳಿ ನಡೆದಿದೆ. ಹುಸೇನ್ ಸಾಬ್ (52) ಎಂಬ ವ್ಯಕ್ತಿಯೇ ಕೊಚ್ಚಿಹೋಗಿದ್ದು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು SDRF ತಂಡದವರು ಶೋಧಕಾರ್ಯ ನಡೆಸಿದ್ದಾರೆ. ಹುಸೇನ್ ಸಾಬ್ ತನ್ನ ಇಬ್ಬರು ಮಕ್ಕಳ ಜೊತೆಗೆ ಮೀನು ಹಿಡಿಯಲು ನದಿಗೆ ಹೋಗಿದ್ದರು. ಈ ವೇಳೆ ತಪ್ಪೇ ಮುಳುಗಿ ಅವಗಡ ಸಂಭವಿಸಿದು ಇಬ್ಬರು ಮಕ್ಕಳು ಈಜಿ ದಡಕೆ ಸೇರಿದ್ದು ತಂದೆ ನೀರು ಪಾಲಾಗಿದ್ದಾನೆ.

Social Plugin