ತೇರದಾಳ ಪೊಲೀಸರಿಂದ ಬೈಕ್ ಕಳ್ಳರ ಬಂಧನ - 3ಬೈಕ್ ಗಳು ವಶಕ್ಕೆ...
ವರದಿ : ವಿಜಯ ವಾಜಂತ್ರಿ.

ಇಂದು ದಿನಾಂಕ 19:06:2021 ರಂದು ತೇರದಾಳ ಪೊಲೀಸ ಠಾಣಾ ವ್ಯಾಪ್ತಿಯ ತೇರದಾಳ. ರಬಕವಿ ಹಾಗೂ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿದ್ದ ಮೂರು ಜನರನ್ನು ಬಂಧಿಸಿರುವ ತೇರದಾಳ ಠಾಣೆಯ ಪೊಲೀಸರು ಅವರಿಂದ ಕಳ್ಳತನವಾಗಿದ್ದ 3ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ದಿನಾಂಕ -01-04-2021ರಂದು ತೇರದಾಳ ನಗರದ ನಿವಾಸಿ ರಾಜು ಸಣ್ಣಕ್ಕಿ ಇವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಹೀರೊ ಎಚ್ ಎಫ್ ಡೀಲಕ್ಸ್ ಕಂಪನಿಯ ಮೋಟರ ಸೈಕಲ್ ರಾತ್ರಿ ಬೆಳಗಾಗುವುದರೊಳಗೆ ಕಳ್ಳತನ ಮಾಡಲಾಗಿತ್ತು.
ದಿನಾಂಕ -05-06-2021ರಂದು ರಬಕವಿ ಬಸವ ನಗರದಲ್ಲಿ ಮಂಜುನಾಥ ಕಾಶಪ್ಪ ಯರಗಾಣವಿ ಇವರ ಮನೆಯ ಮುಂದೆ ರಾತ್ರಿ ನಿಲ್ಲಿಸಿದ್ದ ಸಂಜು ಶಿವಪ್ಪ ಮಾಂಗ ಸಾ : ಅಳಗವಾಡಿ ಇವರ ಹೀರೊ ಹೋಂಡಾ splendor plus ಕಂಪನಿಯ ಮೋಟರ ಸೈಕಲ್ ನ್ನು ಸಹ ಕಳ್ಳತನ ಮಾಡಲಾಗಿತ್ತು. ಈ ಕುರಿತು ಮೇಲ್ಕಂಡ ಇಬ್ಬರು ವ್ಯಕ್ತಿಗಳು ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
  ಬೈಕ್ ಕಳ್ಳತನ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಬಾಗಲಕೋಟ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲೋಕೇಶ್ ಜಗಲಾಸರ ಮತ್ತು ಜಮಖಂಡಿ ಡಿ. ಎಸ್. ಪಿ. ಎಮ್ ಪಾಂಡುರಂಗಯ್ಯ ರವರ ಮಾರ್ಗದರ್ಶನದಲ್ಲಿ ಬನಹಟ್ಟಿ ಸಿ. ಪಿ. ಐ. ಜೆ ಕರುಣೇಶಗೌಡ ಮತ್ತು ತೇರದಾಳ ಪೊಲೀಸ ಠಾಣೆಯ ಪಿ. ಎಸ್. ಐ. ವಿಜಯ ಕಾಂಬಳೆ ರವರ ನೇತೃತ್ವದ ತಂಡವು ಕಳ್ಳತನ ಮಾಡಿದ್ದ ಆರೋಪಿತರಾದ 1) ಬಸವರಾಜ ಹುಚ್ಚಪ್ಪ ಕೊಕ್ಕನವರ ಸಾ : ರಬಕವಿ 2)ಪ್ರಭಾಕರ ಸುಭಾಸ ಮೆಣಸಿನಕಾಯಿ ಸಾ : ಮೂಡಲಗಿ ಮತ್ತು 3) ಶಾರುಕಖಾನ್ ಮುನೀರ್ ಶೇಖ ಸಾ : ಮಹಾಲಿಂಗಾಪುರ ಇವರನ್ನು ಇಂದು ಬೆಳಿಗ್ಗೆ ಅನುಮಾನಾಸ್ಪದವಾಗಿ ತೇರದಾಳದ ಬಸ್ ಸ್ಟ್ಯಾಂಡ್ ಹತ್ತಿರ ಬೈಕ್ ಮೇಲೆ ತಿರುಗಾಡುತ್ತಿದ್ದ ಮೇರೆಗೆ ಸಂಶಯ ಬಂದು ವಿಚಾರಿಸಿದಾಗ ಹಲವು ಬೈಕ್ ಗಳನ್ನು ತೇರದಾಳ, ರಬಕವಿ ಮತ್ತು ಜಮಖಂಡಿ ತಾಲೂಕಿನ ಮರೆಗುದ್ದಿಯಲ್ಲಿ ಕಳ್ಳತನ ಮಾಡಿದ ಬಗ್ಗೆ ತಿಳಿದು ಬಂದಿದ್ದು ಆ ಮೇರೆಗೆ ಮೂರು ಬೈಕ್ ಗಳನ್ನು ಆರೋಪಿತರಿಂದ ತೇರದಾಳ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.
  ಈ ಪ್ರಕರಣದ ತನಿಖಾಧಿಕಾರಿಗಳಾದ ಎಸ್ ಕೆ ಸೂರ್ಯವಂಶಿ ಪಿ. ಎಸ್. ಐ.(ಅಪರಾಧ ವಿಭಾಗ) ತೇರದಾಳ ಪೊಲೀಸ್ ಠಾಣೆಯವರು ಮೂವರು ಆರೋಪಿತರಿಗೆ ಬಂಧಿಸಿ ನ್ಯಾಯಾ0ಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
   ಈ ಕಾರ್ಯಚಾರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಎಲ್ ಬಿ ಮಾಳಿ, ಕೆ ಎಚ್ ಸನಹಟ್ಟಿ, ಆರ್ ವಾಯ್ ಪೂಜೇರಿ, ಎಮ್ ಕೆ ಯಳ್ಳ0ಟಿ, ಎಸ್ ಬಿ ಸವದಿ, ಬಿ ಎಸ್ ಚೌಲಗಿ, ಬಿ ಸಿ ಮುದಿಬಸನಗೌಡರ, ಎಮ್ ಎಲ್ ಬುಗುಟಿ, ಎಮ್ ಆರ್ ಕೆಂಚಣ್ಣವರ ಮತ್ತು ಬನಹಟ್ಟಿ ಪೊಲೀಸ್ ಠಾಣೆಯ ವ್ಹಿ ಎಸ್ ಅಜ್ಜನಗೌಡರ, ಎ ಎಮ್ ಜಮಖಂಡಿ ಪೊಲೀಸರು ಭಾಗವಹಿಸಿದ್ದರು. ಕಳ್ಳರನ್ನು ಬಂಧಿಸಿರುವ ಪೋಲೀಸರ ಈ ಕಾರ್ಯಕ್ಕೆ ಬಾಗಲಕೋಟ ಪೊಲೀಸ್ ಅಧಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.