ಸಕಲ ಜೀವರಾಶಿಗಳು ಉಸಿರಾಡಿ ಬಾಳಿ ಬದುಕಲು ಆಮ್ಲಜನಕ ಬೇಕು
ತೇರದಾಳ : ಸಕಲ ಜೀವರಾಶಿಗಳು ಉಸಿರಾಡಿ ಬಾಳಿ ಬದುಕಲು ಆಮ್ಲಜನಕ ಬೇಕು. ಅದು ಉತ್ಪತ್ತಿಯಾಗಲು ಗಿಡಮರಗಳನ್ನು ನೆಟ್ಟು ಪರಿಸರ ಹಾಗೂ ಜೀವವನ್ನು ಉಳಿಸಬೇಕು. ಗಿಡಗಳನ್ನು ನೆಡುವ ಮೂಲಕ ಮುಂಬರುವ ಪೀಳಿಗೆಗೆ ಒಳ್ಳೆಯ ಪರಿಸರವನ್ನು ನೀಡುವ ಮೂಲಕ ಪರಿಸರದ ಮಹತ್ವವನ್ನು ತಿಳಿಸಬೇಕಾಗಿದೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿದ್ಯಾಧರ ಸವದಿ ಹೇಳಿದರು.
ಪಟ್ಟಣದ ಮಹಾತ್ಮಾ ಗಾಂಧಿಜಿ ಕ್ರಿಡಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಪೃಕೃತಿಯನ್ನು ನಾವು ರಕ್ಷಿಸಿದರೆ, ಪೃಕೃತಿ ನಮ್ಮನ್ನು ರಕ್ಷಿಸುತ್ತದೆ. ಹಸಿರಿನೊಳಗೆ ಉಸಿರಿದೆ, ಉಸಿರನುಳಿಸಲು ಹಸಿರು ಗಿಡಗಳನ್ನು ಬೆಳಸಿಬೇಕಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಉಳಿಸಿ ಪೋಷಿಸಿ ಬೇಳಸಬೇಕಾಗಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಆಮ್ಲಜನಕದ ಮಹತ್ವ ತಿಳಿದ ನಾವುಗಳು ಈಗಿಂದಲೇ ಗಿಡಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಆಮ್ಲಜನಕದ ಮಹತ್ವವನ್ನು ನಾವು ತಿಳಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸದಾಶಿವ ಹೊಸಮನಿ, ಸಚೀನ ಕೊಡತೆ, ಶಂಕರ ಕುಂಬಾರ, ವಿರಾಜ ಬಂಕಾಪೂರ, ಕಾಶೀನಾಥ ರಾಠೋಡ, ಆಕಾಶ ತೇಲಿ, ಅಲ್ಲಪ್ಪ ಬಾಬಗೊಂಡ, ಆನಂದ ಚಮಕೇರಿ, ವಿಜಯ ಬಿಜ್ಜರಗಿ ಸೇರಿದಂತೆ ಇನ್ನಿತರರು ಇದ್ದರು.

Social Plugin