ಬಳಸದೇ ಹಾಳಾದುದಕ್ಕೆ ಹೊಣೆ ಯಾರು?
- - - - - - -
ಕೊವಿಡ್ ತಯಾರಿ ಹೆಸರಲ್ಲಿ ಅಗತ್ಯ ಎಷ್ಟೆಂದು ಅಂದಾಜು ಮಾಡದೇ ತಂದು ಹಾಕಿಕೊಂಡ ಐಟಂಗಳು ಮುಂದಿನ ದಿನಗಳಲ್ಲಿ ದೊಡ್ಡ ರಾದ್ಧಾಂತ ಆಗಲಿರುವ ಸ್ಪಷ್ಟ ಲಕ್ಷಣ ಇದು.
ಕರ್ನಾಟಕದಲ್ಲಿ ಕೋವಿಡ್ ಆರಂಭದ ಹೊತ್ತಿಗೆ (ಜೂನ್2020) ಇದ್ದದ್ದು ಕೇವಲ 999 ವೆಂಟಿಲೇಟರ್‌ಗಳು. 16-9-2020ಕ್ಕೆ 2778ವೆಂಟಿಲೇಟರ್‌ಗಳಿದ್ದವೆಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಗೆ ತಿಳಿಸಿದ್ದರು. ಆದರೆ, ಈ ವರದಿ ಈಗ ಕರ್ನಾಟಕದಲ್ಲೇ ಇನ್ನೂ 900ಕ್ಕೂ ಮಿಕ್ಕಿ ವೆಂಟಿಲೇಟರ್‌ಗಳು ಬಳಕೆ ಆಗದೆ ಬಿದ್ದಿವೆ ಎಂದು ಹೇಳುತ್ತಿದೆ. ಅಂದರೆ PMCARES ಇತ್ಯಾದಿ ಮೂಲಗಳಿಂದ ಬಂದವುಗಳಲ್ಲಿ ಹೆಚ್ಚಿನವು ಇನ್ನೂ ಬಾಕ್ಸ್ ಬಿಚ್ಚಿ, ಸ್ಥಾಪನೆ ಆಗಿಲ್ಲ!

ಇವುಗಳಲ್ಲಿ ಖರೀದಿಸಿ ತಂದದ್ದೆಷ್ಟು? ದಾನ ಬಂದದ್ದೆಷ್ಟು?
ನಮಗೆ ಇವು ಬೇಡ ಎಂದಾದರೆ, ಅಗತ್ಯ ಇರುವಲ್ಲಿಗೆ (ಅಥವಾ ಕಡೆಯ ಪಕ್ಷ ಅಗತ್ಯ ಇರುವ ದೇಶಕ್ಕೆ) ಅದನ್ನು ರವಾನಿಸುವುದು ಸರ್ಕಾರದ ಜವಾಬ್ದಾರಿ ಆಗಲಿ. ಒಂದೆರಡು ವರ್ಷ ಈ ಸೊಫಿಸ್ಟಿಕೇಟೆಡ್ ಯಂತ್ರಗಳು ಬಳಕೆಯಾಗದೇ ಹಾಗೇ ಉಳಿದರೆ, ಅದನ್ನು ಯಾರೂ ಬಳಸುವುದು ಸಾಧ್ಯವಾಗುವುದಿಲ್ಲ.

ಈ ನಡುವೆ ಇಂದು ಮತ್ತೊಂದು ಸುತ್ತಿನ ಖರೀದಿಗೆ ತಯಾರಿ ಅಂತಿಮಗೊಂಡಿದೆ. ವೈದ್ಯಕೀಯ ಪರಿಣತರ ಟಾಸ್ಕ್ ಫೋರ್ಸ್ ಇಷ್ಟೇ ಸಂಖ್ಯೆಯ ಮಕ್ಕಳ ಬೆಡ್, ಮಕ್ಕಳ ವೆಂಟಿಲೇಟರ್ ಬೇಕೆಂದು ಸೂಚಿಸಿದೆಯಂತೆ…
ಇದೇ ಸಮಿತಿ, ಈ ಹೆಚ್ಚುವರಿ ಪರಿಕರಗಳನ್ನು ಏನು ಮಾಡಬೇಕೆಂದು ಹೇಳಬೇಕು ಮತ್ತು ಮುಂದಿನ ಸುತ್ತಿನಲ್ಲಿ ಹೀಗೆ ಉಳಿದರೆ ಅದರ ನೈತಿಕ ಹೊಣೆ ಹೊರಬೇಕು, ಅಲ್ಲವೆ?
#Whocares #Govidiots