ವರದಿ : ವಿಜಯ ವಾಜಂತ್ರಿ
ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಕ್ರಮ ಖಂಡಿಸಿ ತೇರದಾಳ ವಿಧಾನಸಭಾ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ತೇರದಾಳ : ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯದಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಸಾಯುವಂತ ಸ್ಥಿತಿಗೆ ಬಂದಿದ್ದಾರೆ. ಪೆಟ್ರೋಲ್ ನೂರರ ಗಡಿ ಹಾಗೂ ಡಿಸೇಲ್ ಲೀ.ಗೆ 92 ತಲುಪಿದೆ ಸಾಮಾನ್ಯ ಜನರಿಗೆ ಹಾಗೂ ದುಡಿಯುವಂತ ಕೂಲಿ ಕಾರ್ಮಿಕರಿಗೆ ತುಂಬಾ ಹೊರೆಯಾಗಿದೆ. ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆಯೇರಿಕೆಯನ್ನು ಕಡಿಮೆ ಮಾಡಬೇಕು ಎಂದು ತೇರದಾಳ ವಿಧಾನಸಭಾ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಯುವ ಧುರೀಣ ಪ್ರವೀಣ ನಾಡಗೌಡ ಸರಕಾರವನ್ನು ಒತ್ತಾಯಿಸಿದರು.
   ಪಟ್ಟಣದ ಪೆಟ್ರೋಲ್ ಪಂಪಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಕ್ರಮ ಖಂಡಿಸಿ ತೇರದಾಳದ ವಿಧಾನಸಭಾ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಮೇರಿಕನ್ ಡಾಲರ್ ಪ್ರಕಾರ ಒಂದು ಬ್ಯಾರಲ್‍ಗೆ 70 ರಿಂದ 75 ಡಾಲರ್‍ಗೆ ಕಚ್ಚಾ ತೈಲ್ ಬರುತ್ತಿದೆ. ಆ ಪ್ರಕಾರ ನಮ್ಮ ದೇಶದಲ್ಲಿ ಪೆಟ್ರೋಲ್ ಲೀ.ಗೆ 30ರಿಂದ 35 ರೂ. ಗಳಷ್ಟು ಹಾಗೂ ಡಿಸೇಲ್ ಲೀ.ಗೆ 27ರೂ.ಗಳಷ್ಟು ಇರಬೇಕು. ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಜನರು ಸಾಯುತ್ತಿದ್ದಾರೆ. ಅದರ ವ್ಯವಸ್ಥೆ ಸರಿಯಾಗಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತೊಂದರೆಗೀಡಾಗಿದ್ದಾರೆ. ಆದ್ದರಿಂದ ಸರಕಾರ ಟ್ಯಾಕ್ಸ್‍ಗಳನ್ನು ಜನರ ಮೇಲೆ ಹಾಕಿ ವಸೂಲಿ ಮಾಡುತ್ತಿದ್ದಾರೆ. ಡಬಲ್ ಇಂಜನ್ ಸರಕಾರ ಜನರಿಗೆ ಬಹಳಷ್ಟು ಮೋಸ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಏರಿಕೆಯಾಗಿರುವ ದಿನಸಿ ವಸ್ತುಗಳಾಗಲಿ ಪೆಟ್ರೋಲ್ ಡಿಸೇಲ್ ಬೆಲೆಗಳನ್ನು ಇಳಿಸಬೇಕು ಎಂದು ಆಗ್ರಹಿಸಿದರು.
   ಈ ಸಂದರ್ಭದಲ್ಲಿ ಡಾ.ಪದ್ಮಜೀತ ನಾಡಗೌಡ ಪಾಟೀಲ, ಶಿವಪ್ಪ ಖವಾಸಿ ಮಾತನಾಡಿದರು. ಭರಮು ಉಳ್ಳಾಗಡ್ಡಿ, ಲಕ್ಷ್ಮಣ ದೇಸಾರಟ್ಟಿ, ಶಂಕರ ಸೋರಗಾವಿ, ನಿಲೇಶ ದೇಸಾಯಿ, ಆಧಿನಾಥ ಸಪ್ತಸಾಗರ, ಪ್ರಭು ಗಸ್ತಿ, ಮಾಶೂಂ ಇನಾಮದಾರ, ರಾಜೇಸಾಬ ನಗಾರ್ಜಿ, ಪೈಜುಲ್ಲಾ ಇನಾಮದಾರ, ಶಿವಪ್ಪ ಕಾಂಬಳೆ, ಅಶೋಕ ಉಳ್ಳಾಗಡ್ಡಿ, ಫಜಲ್ ಅತಾರಾವುತ್ ಸೇರಿದಂತೆ ಇನ್ನಿತರರು ಇದ್ದರು.