ವರದಿ : ವಿಜಯ ವಾಜಂತ್ರಿ
ತೇರದಾಳದ ಶ್ರೀಭರಮಪ್ಪನ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಯನ್ನು ಹಾಕಿದರು.
ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂಜರಿಯಬೇಡಿ- ಸಚೀನ ಕೊಡತೆ
ತೇರದಾಳ : ಮಹಾಮಾರಿ ಕೋವಿಡ್ -19 ನ್ನು ತಡೆಗಟ್ಟಲು ಪಟ್ಟಣದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಮತ್ತು 23 ವಾರ್ಡಗಳ ಸದಸ್ಯರು ಎಲ್ಲ ವಾರ್ಡಿನ ಜನರಿಗೆ ಲಸಿಕೆ ದೊರೆಯುವಂತೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಲಸಿಕೆಯನ್ನು ಹಾಕಿಸಿಕೊಳ್ಳಲು ಯಾರೂ ಹಿಂಜರಿಯಬಾರದು ಎಂದು ಪುರಸಭೆ ಸದಸ್ಯ ಸಚೀನ ಕೊಡತೆ ಹೇಳಿದರು.
ಪಟ್ಟಣದ 10,11,12,14,15,17 ವಾರ್ಡುಗಳು ಸೇರಿ ಅರಳಿಕಟ್ಟಿ ಶ್ರೀ ಭರಮಪ್ಪನ ದೇವಸ್ಥಾನದಲ್ಲಿ ಕೊರೊನಾ ಲಸಿಕೆ ಹಾಕಲು ಚಾಲನೆ ನೀಡಿ ಮಾತನಾಡಿದ ಅವರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಲು ಇಂತಿಷ್ಟು ಜನರಿಗೆ ಎಂದು ಲಸಿಕೆಯನ್ನು ಹಾಕುತ್ತಿದ್ದರು. ಲಸಿಕೆಯನ್ನು ಹಾಕಿಸಿಕೊಳ್ಳಲು ಬಡವರು ಶ್ರೀಮಂತರು ಎಂದು ಭೇಧ ಭವವಿಲ್ಲದೆ ಸರದಿಯಲ್ಲಿ ನಿಂತು ಲಸಿಕೆಯನ್ನು ಪಡೆಯಬೇಕಾಗಿತ್ತು. ಆದರೆ ಲಸಿಕೆಯು ಕಡಿಮೆ ಡೋಸ್ ಬಂದಿದ್ದರೆ ಅದು ಎಲ್ಲರಿಗೂ ಸಿಗುವುದಲ್ಲ. ಆಗ ಸರದಿಯಲ್ಲಿ ನಿಂತಿರು ಜನರು ಲಸಿಕೆ ಸಿಗದೆ ಮನೆಗೆ ಮರಳಿ ಬರಬೇಕಾಗುತ್ತದೆ ಹಾಗೂ ಒಂದು ದಿನದ ಕೂಲಿಯು ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಟ್ಟಣದಲ್ಲಿ ಆರು ಕಂದಾಯ ವಾರ್ಡಗಳನ್ನಾಗಿ ವಿಭಾಗಿಸಲಾಗಿದೆ. ವಾರದ ಒಂದು ದಿನದಲ್ಲಿ ಒಂದು ಕಂದಾಯ ವಾರ್ಡಿಗೆ ಬಂದು ಲಸಿಕೆಯನ್ನು ಹಾಕುತ್ತಾರೆ ಅಲ್ಲಿ ಸಾರ್ವಜನಿಕರು ಲಸಿಕೆಯನ್ನು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಅಲ್ಲಪ್ಪ ಬಾಬಗೊಂಡ, ಸುರೇಶ ಕಬಾಡಗಿ, ಆಧಿನಾಥ ಸಪ್ತಸಾಗರ, ಕುಮಾರ ಸರಿಕರ, ಅನೀಲ ವಡ್ಡರ, ಪ್ರಕಾಶ ಶೇಡಬಾಳ, ಪ್ರವೀಣ ಕೋರಿಗೇರಿ, ಕಲ್ಪನಾ ಹಜಾರೆ, ರೂಪಾ ಮೋಪಗಾರ ಸೇರಿದಂತೆ ಇನ್ನಿತರರು ಇದ್ದರು.

Social Plugin