ಬಹು ದಿನಗಳಿಂದ ಸ್ವಚ್ಚಗೊಳ್ಳದ ಚರಂಡಿ ಸ್ವಚ್ಚತೆಗೊಳಿಸುತ್ತಿರುವುದು
ತೇರದಾಳ : ಬಹುದಿನಗಳಿಂದ ಸ್ವಚ್ಚಗೊಳ್ಳದೆ ಇದ್ದ ಚರಂಡಿ ಇಂದು ನೂತನ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರು ಹಾಕಿ ಕೊಂಡ ನಗರ ಸ್ವಚ್ಚತೆ ಯೋಜನೆಯಿಂದ ಪಟ್ಟಣದ ಕಾಳಿನ ಬಜಾರದಿಂದ ಮುಖ್ಯ ರಸ್ತೆ ಹುದ್ದಾರ ಕಿರಾಣಿ ಅಂಗಡಿಯ ಮಾರ್ಗವಾಗಿ ಚರಂಡಿಯನ್ನು ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾರ್ಗದರ್ಶನದಲ್ಲಿ ಸ್ವಚ್ಚತೆ ಕಾರ್ಯ ನಡೆಯಿತು.
ಪಟ್ಟಣದಲ್ಲಿನ ಒಂದೂಂದು ವಾರ್ಡಗಳಲ್ಲಿ ಒಂದು ದಿನ ಚರಂಡಿ ಸ್ವಚ್ಚತೆಯನ್ನು ಹಾಕಿಕೊಂಡಿರುವ ಅಧಿಕಾರಿಗಳು ತಮ್ಮ ದಿನಚರಿ ಯೋಜನೆಯಂತೆ ಸ್ವಚ್ಚತೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ ಪೌರಕಾರ್ಮಿಕರು ಸುಮಾರು 35ಜನರು ತೊಡಗಿರುತ್ತಾರೆ. ಜೆಸಿಬಿಯ ಮೂಲಕ ಚರಂಡಿಯಲ್ಲಿನ ಕೊಳಚೆಯನ್ನು ತೆಗೆದು ಟ್ರಾಕ್ಟರ್ ಮೂಲಕ ಬೇರೆಡೆಗೆ ಸಾಗಿಸಲಾಗುತ್ತಿದೆ. ಸುಮಾರು 20ವರ್ಷಗಳಿಂದ ಸ್ವಚ್ಚಗೊಳಿಸದೇ ಇರುವ ಚರಂಡಿಯನ್ನು ಈಗ ಸ್ವಚ್ಚಗೊಳಿಸಲಾಗುತ್ತಿದೆ. ಹೀಗೆ ಪಟ್ಟಣದಲ್ಲಿ ಬಹಳಷ್ಟು ದಿನಗಳಿಂದ ತುಂಬಿಕೊಂಡಿರುವ ಚರಂಡಿಗಳು ಈಗ ಸ್ವಚ್ಚತೆಯನ್ನು ಕಾಣುತ್ತಿವೆ. ಹಾಗೂ ಕುಡಿಯುವ ನೀರು ಸರಬರಾಜನಲ್ಲಿ ತೊಂದರೆಯಾಗಬಾರದು ಎಂದು ಹಳೆಯ ವ್ಹಾಲಗಳನ್ನು ಬದಲಾಯಿಸಿ ಹೊಸ ವ್ಹಾಲಗಳ ಜೋಡಣೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಹಳಿಂಗಳಿಯ ಜಾಕ್ ವೆಲ್ ಬಳಿ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದರು. ಅದು ದುರಸ್ತಿ ಕಾರ್ಯ ಮುಗಿದಿದ್ದು ನೀರು ಸರಬರಾಜು ಎಂದಿನಂತೆ ಪ್ರಾರಂಭವಾಗಿದೆ. ನೂತನ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರು ಪಟ್ಟಣಕ್ಕೆ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ಪಡೆದುಕೊಂಡಾಗಿನಿಂದ ಪಟ್ಟಣದಲ್ಲಿ ಬೀದಿ ದೀಪಗಳ ಸಮಸ್ಯೆ, ಚರಂಡಿ ಸ್ವಚ್ಚತೆ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿದ್ದಾರೆ.
ಈ ಕಾರ್ಯದಲ್ಲಿ ಪುರಸಭೆ ಅಧ್ಯಕ್ಷೆಯ ಪತಿ ಸದಾಶಿವ ಹೊಸಮನಿ, ಸಚೀನ ಕೊಡತೆ, ಶಂಕರ ಕುಂಬಾರ, ಸಂತೋಷ ಜಮಖಂಡಿ, ಕೇದಾರಿ ಪಾಟೀಲ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಶ್ರಮವಹಿಸುತ್ತಿದ್ದಾರೆ.

Social Plugin