ವರದಿ : ವಿಜಯ ವಾಜಂತ್ರಿ
ತೇರದಾಳದ ಪುರಸಭೆ ನೂತನ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರನ್ನು ಡಾ.ಚಿದಾನಂದ ಸರಿಕರ ಅಭಿಮಾನ ಬಳಗದಿಂದ ಸನ್ಮಾನ ಮಾಡಲಾಯಿತು.

ನೂತನ ಮುಖ್ಯಾಧಿಕಾರಿಗೆ ಸನ್ಮಾನ
ತೇರದಾಳ : ಡಾ. ಚಿದಾನಂದ ಸರಿಕರ ಅಭಿಮಾನ ಬಳಗದಿಂದ ಪಟ್ಟಣದ ನೂನತ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರನ್ನು ಸನ್ಮಾನಿಸಲಾಯಿತು. 
  ಈ ಸಂದರ್ಭದಲ್ಲಿ ರಾಜು ರೋಡಕರ ಮಾತನಾಡಿ ತೇರದಾಳ ಪಟ್ಟಣದಕ್ಕೆ ಮುಖ್ಯಾಧಿಕಾರಿಯಾಗಿ ಬಡ್ತಿ ಹೊಂದಿ ಬಂದಾಗಿನಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದು ಪಟ್ಟಣದ ಜನತೆಯಲ್ಲಿ ಸಂತಷವನ್ನುಂಟು ಮಾಡಿದೆ. ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ ಸರ್ಕಲ್‍ದಲ್ಲಿ ಚರಂಡಿಯನ್ನು ಜೆಸಿಬಿಯಿಂದ ಸ್ವಚ್ಚಗೊಳಿಸುವ ಮೂಲಕ ಅಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಜನರ ಮೇಲೆ ಕಾಳಜಿಯುಳ್ಳವರಾಗಿದ್ದಾರೆ. ಸದಾ ಅವರು ಪಟ್ಟಣದ ಅಭಿವೃದ್ಧಿಕಾರ್ಯಗಳನ್ನು ಮಾಡಲಿ ಅವರಿಗೆ ಪಟ್ಟಣದ ಜನತೆಯ ಸಹಕಾರ ವಿರುತ್ತದೆ ಎಂದರು.
  ಈ ಸಂದರ್ಭದಲ್ಲಿ ಮಂಜು ಸರಿಕರ, ರಮೇಶ ಹಟ್ಟೆನ್ನವರ, ರಾಘು ಮಾಸ್ತಿ, ಸುನೀಲ ಕಾಂಬಳೆ, ಸುನೀಲ ರೋಡಕರ ಸೇರಿದಂತೆ ಇನ್ನಿತರರು ಇದ್ದರು.