ತೇರದಾಳದ ಪೋಲಿಸ್ ಠಾಣೆಗೆ ಬಾಗಲಕೋಟ ಎಸ್‍ಪಿ ಲೋಕೇಶ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣೆಯ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.
ಕೊರೊನಾ ಮರುಕಳಿಸದಂತೆ ನಮ್ಮಷ್ಟಕ್ಕೆ ನಾವು ಎಚ್ಚರದಿಂದ ಇರಬೇಕು-ಎಸ್‍ಪಿ ಜಗಲಾಸರ್
ತೇರದಾಳ : ಜಿಲ್ಲೆಯಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್ ಹಂತಹಂತವಾಗಿ ಸಡಿಲಿಕೆ ಆಗುತ್ತಲಿದೆ. ಜನರು ಮೈಮರೆಯಬಾರದು. ಕೊರೊನಾ ಮೊದಲನೆಯ ಅಲೆಯಿಂದಾಗಿ ಮೈಮರೆತಿದ್ದರಿಂದ ಎರಡನೆಯ ಅಲೆ ಬಂದಂತಾಗಿದೆ. ಇದು ಮತ್ತೇ ಮರುಕಳಿಸದಂತೆ ನಮ್ಮಷ್ಟಕ್ಕೆ ನಾವು ಎಚ್ಚರದಿಂದ ಇರಬೇಕು ಎಂದು ಬಾಗಲಕೋಟ ಎಸ್‍ಪಿ ಲೋಕೇಶ ಜಗಲಾಸರ್ ಹೇಳಿದರು.
ಅವರು ಪಟ್ಟಣದ ಪೋಲಿಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಜಿಲ್ಲೆಯಲ್ಲಿನ ಐದು ಜನ ಪೋಲಿಸ ಸಿಬ್ಬಂದಿಯವರು ಕೋವಿಡ್‍ನಿಂದಾಗಿ ಮೃತ ಪಟ್ಟಿದ್ದಾರೆ. ಮೊದಲನೆಯ ಅಲೆಯಲ್ಲಿ ಇಬ್ಬರು ಎರಡನೆಯ ಅಲೆಯಲ್ಲಿ ಮೂವರು ಮೃತ ಪಟ್ಟಿದ್ದಾರೆ. ಅವರಿಗೆ ಸಿಗಬೇಕಾಗಿದ್ದ ಪರಿಹಾರ ಹಣ ದೊರಕಿದೆ. ಆಕ್ರಮವಾಗಿ ಮರಳು ಸಾಗಾಣಿಕೆ ಇದ್ದಲ್ಲಿ ಹೇಳಿದರೆ ನಾವು ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ಇಲಾಖೆಯ ಪೋಲಿಸ್ ಸಿಬ್ಬಂದಿಯವರು ರಾತ್ರಿ ಹಗಲು ಕೆಲಸವನ್ನು ಮಾಡಿರುತ್ತಾರೆ. ಹಗಲು ರಾತ್ರಿ ಕೆಲಸವನ್ನು ಮಾಡುವ ಏಕೈಕ ಇಲಾಖೆ ನಮ್ಮದು. ಪೋಲಿಸ್ ಇಲಾಖೆಯವರು ಸಾರ್ವಜನಿಕರಿಗೆ ನೀಡುವ ಮನವಿಗಳಾಗಲಿ ಸೂಚನೆಗಳಿಗಾಗಲಿ ಜನರು ಸ್ಪಂಧಿಸಬೇಕು. ಈಗಾಗಲೇ ಜಿಲ್ಲೆಯ ಜನರು ಸಹಕಾರ ನೀಡಿದ್ದಾರೆ. ಆದರೂ ನಮ್ಮ ನಿರೀಕ್ಷೆಗೆ ಸಹಕಾರ ಮಾಡಬೇಕು. ಜನರ ಕಲ್ಯಾಣಕ್ಕಾಗಲಿ ಅಥವಾ ಅವರ ಒಳಿತಿಗಾಗಲಿ ಪೋಲಿಸರು ಸದಾ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಸಿಬ್ಬಂದಿಗಳಾದ ಬಸವರಾಜ ಮುದಿಬಸವನಗೌಡ, ರಾಜು ಪೂಜಾರಿ, ವಿವೇಕ ಸುವರ್ಣಖಂಡಿ ಇವರಿಗೆ ಒಳ್ಳೆಯ ಕೆಲಸಗಾರ ಎಂದು ಪ್ರಶಸ್ತಿ ನೀಡಿದರು.
ಈ ಸಂದರ್ಭದಲ್ಲಿ ಪೋಲಿಸ್ ಠಾಣೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದರು. ಡಿವಾಯ್‍ಎಸ್‍ಪಿ ಪಾಂಡುರಂಗಯ್ಯ, ಸಿಪಿಐ ಜೆ.ಕರುಣೇಶಗೌಡ, ಪಿಎಸ್‍ಐ ವಿಜಯ ಕಾಂಬಳೆ, ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ, ಬನಹಟ್ಟಿ ಪಿಎಸ್‍ಐ ರವಿಕುಮಾರ ಧರ್ಮಟ್ಟಿ, ಮಹಾಲಿಂಗಪೂರ ಪಿಎಸ್‍ಐ ಗಿರೀಶ ಉಪ್ಪಾರ, ಎಎಸ್‍ಐ ಎಲ್.ಬಿ.ಮಾಳಿ, ಅರುಣ ಕೋಳೆಕರ, ಆಯ್.ಬಿ.ಕಮತರ, ಎಚ್‍ಸಿ ಎಸ್.ಎಮ್.ಬಗಲಿ, ಕೆ.ಎಚ್.ಸನ್ನಟ್ಟಿ, ಎ.ಬಿ.ಸವದಿ, ಬಿ.ಎಸ್.ಚವಲಗಿ,ಬಸವರಾಜ ಮುದಿಬಸವನಗೌಡ, ರಾಜು ಪೂಜಾರಿ, ವಿವೇಕ ಸುವರ್ಣಖಂಡಿ ಮಹೇಶ ಸೌದಿ, ಎಮ್.ಕೆ.ಎಳ್ಳಂಟಿ, ಸಿದ್ದನ್ನವರ, ಮಹಿಳಾ ಪಿಸಿ ಚಲವಾದಿ ಸೇರಿದಂತೆ ಠಾಣೆಯ ಸಿಬ್ಬಂದಿಯವರು ಇದ್ದರು.

Social Plugin