ತೇರದಾಳದ ಬ್ರಹ್ಮಾನಂದ ಆಶ್ರಮದ ಹತ್ತಿರ ಚರಂಡಿಯನ್ನು ಸ್ವಚ್ಚಗೊಳಿಸಿದ ಪುರಸಭೆ ಸಿಬ್ಬಂದಿ.
ಸಾರ್ವಜನಿಕರ ಸಮಸ್ಯಗೆ ಕೂಡಲೆ ಸ್ಪಂಧಿಸಿದ ಮುಖ್ಯಾಧಿಕಾರಿ- ಅಶೋಕ ಗುಡಿಮನಿ
ತೇರದಾಳ : ಪಟ್ಟಣದ ಬ್ರಹ್ಮಾನಂದ ಆಶ್ರಮದ ಹತ್ತಿರ ರಸ್ತೆ ಸಂಚಾರಕ್ಕೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ದೂರವಾಣಿ ಮೂಲಕ ತೇರದಾಳ ಪಟ್ಟಣದ ನೂತನ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರಿಗೆ ಸಮಸ್ಯೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಬ್ರಹ್ಮಾನಂದ ಆಶ್ರಮದ ಹತ್ತಿರದ ಚರಂಡಿಯಿಂದ ಕೊಳಚೆಯನ್ನು ತಗೆದು ರಸ್ತೆಯ ಮೇಲೆ ಹಾಕಿ ರಸ್ತೆ ಸಂಚಾರಕ್ಕೆ ಅಡಚಣಿ ಉಂಟಾಗಿತ್ತು. ಇದರಿಂದ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳಿಗೆ ಸಂಚರಿಸಲು ತೊಂದರೆಯಾಗಿತ್ತು. ಇದನ್ನು ಸಾರ್ವಜನಿಕರು ದೂರವಾಣಿ ಮೂಲಕ ಮುಖ್ಯಾಧಿಕಾರಿಗಳ ಗಮನಕ್ಕೆ ಬಂದಾಗ ಅವರು ಚರಂಡಿಯಿಂದ ಕೊಳಚೆಯನ್ನು ತಗೆದು ರಸ್ತೆಯ ಮೇಲೆ ಹಾಕಿ ಸಂಚಾರಕ್ಕೆ ತೊಂದರೆ ಮಾಡಿದ್ದವರನ್ನು ಕರೆಯಿಸಿ ಅವರು ಜೊತೆ ಮಾತನಾಡಿ ಅದನ್ನು ಸರಿ ಪಡಿಸುವಲ್ಲಿ ಶೀಘ್ರ ಕ್ರಮ ಕೈಗೊಂಡರು. ಹಾಗೂ ನಿನ್ನೆಯ ದಿನ ವಾರ್ಡ ನಂ 19ರಲ್ಲಿ ಬೀದಿ ದೀಪಗಳು ಹತ್ತುತ್ತಿಲ್ಲವೆಂದು ದೂರು ಸಲ್ಲಿಸಿದ ಸಾರ್ವಜನಿಕರ ಸಮಸ್ಯೆಗೆ ರಜಾ ದಿನವೆನ್ನದೆ ರವಿವಾರ ದಿವಸ ದುರಸ್ತಿ ಕಾರ್ಯವನ್ನು ಮಾಡಿ ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸುವ ಮೂಲಕ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ತೇರದಾಳ ಪಟ್ಟಣವನ್ನು ಸ್ವಚ್ಚವಾಗಿರಿಸಲು ಬೆಳಿಗ್ಗೆ 5ಗಂಟೆಯಿಂದ ಪಟ್ಟಣದಲ್ಲಿ ಸೈಕಲ್ ಮೇಲೆ ಸುತ್ತು ಹಾಕುವುದರ ಮೂಲಕ ಸ್ವಚ್ಚತೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಬಂದಿರುವ ಮುಖ್ಯಾಧಿಕಾರಿಗಳು ಎಲ್ಲಿಯೋ ಮನೆ ಮಾಡಿ ಬೆಳಿಗ್ಗೆ 10 ಗಂಟೆಗೆ ಬರುವ ಬದಲು ಮೀಟಿಂಗ ನೆಪ ಹೇಳಿ ಕಚೇರಿ ಕೆಲಸಕ್ಕೆ ಬರದೇ ದಿನಗಳೆದು ಹೋಗಿದ್ದಾರೆ. ಈಗ ಬಂದಿರುವ ಮುಖ್ಯಾಧಿಕಾರಿಯವರು ಬೆಳಿಗ್ಗೆಯಿಂದಲೆ ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ವಿನಾ ಕಾರಣ ಪುರಸಭೆ ಅಧಿಕಾರಿಗಳ ಮೇಲೆ ಅರೋಪಗಳನ್ನು ಮಾಡದೇ ಅವರಿಗೆ ಕೈಜೋಡಿಸುವ ಕೆಲಸವಾಗಬೇಕಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಗಲೀಜು ಮಾಡುವುದು, ಕಸಕಡ್ಡಿ ಹಾಕುವುದನ್ನು ಬಿಟ್ಟು ನಿರ್ಧಿಷ್ಟ ಪಡಿಸಿದ ಸ್ಥಳದಲ್ಲಿ ಕಸವನ್ನು ಹಾಕಬೇಕು. ಇದರಿಂದ ಸಾರ್ವಜನಿಕರಿಗೆ ಒಳ್ಳೆಯದು. ಇದರಿಂದ ಪಟ್ಟಣ ಸ್ವಚ್ಚವಾಗಿರುವುದರಿಂದ ರೋಗ ರುಜಿನಗಳು ಬರುವುದಿಲ್ಲ ಇದರಿಂದ ಆರೋಗ್ಯಯುತವಾದ ಪಟ್ಟಣ ನಿರ್ಮಾಣ ಮಾಡುವಲ್ಲಿ ಪುರಸಭೆ ಅಧಿಕಾರಿಗಳೊಂದಿಗೆ ಕೈಜೋಡಿಸಿದಂತಾಗುತ್ತದೆ. ನಮ್ಮ ಪಟ್ಟಣ, ನಮ್ಮ ಪರಿಸರವನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕು. ಇಲ್ಲಿ ಸಾರ್ವಜನಿಕರ ಪಾತ್ರ ಮಹತ್ವವಾದದ್ದು.
Social Plugin