ಚಿರತೆಯನ್ನು ದತ್ತುಪಡೆದ -ಗುರು ಮೆಟಗುಡ್ಡ!!
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೈಲಹೊಂಗಲ: ನಟ ದರ್ಶನ್ ಕರೋನಾ ಕಾಲಘಟ್ಟದಲ್ಲಿ ಜನರಂತೆ ಪ್ರಾಣಿ-ಪಕ್ಷಿಗಳು ಕೂಡ ಸಂಕಟದಲ್ಲಿವೆ ಅವುಗಳನ್ನು ಸಾಧ್ಯವಾದಷ್ಟು ದತ್ತು ಪಡೆಯಿರಿ ಎನ್ನುವ ವಿಚಾರವನ್ನು ಮಾಧ್ಯಮಗಳಲ್ಲಿ ಪ್ರಸ್ತಾಪಿಸಿದ್ದಾರೆ. ಸೆಲೆಬ್ರಿಟಿಗಳು ಏನಾದರೂ ಒಂದು ಉತ್ತಮ ಕಾರ್ಯ ಮಾಡಿದಾಗ ಅದನ್ನು ಅನೇಕರುನು ಮಾಡುವವರು ಮತ್ತು ಅವರಂತೆ ನಡೆದುಕೊಳ್ಳುವರು ತುಂಬಾ ಜನರಿದ್ದಾರೆ ಅದರಂತೆ ನಟ ದರ್ಶನ್ ಅವರು ಪ್ರಾಣಿ-ಪ್ರೀತಿ ಮತ್ತು ಪರಿಸರ ಕಾಳಜಿಯಿಂದ ಪ್ರೇರಣೆಗೊಳಗಾದ ಬಿಜೆಪಿ ಮುಖಂಡ ಗುರು ಮೆಟಗುಡ್ಡರು ಚಿರತೆ ದತ್ತು ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ತಾಲೂಕಿನ ಕಾಕತಿ ಹೊರವಲಯದಲ್ಲಿರುವ ಭೂತರಾಮನಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದ ಚಿರತೆ ಅರ್ಜುನನ್ನು ಬೈಲಹೊಂಗಲದ ಬಿಜೆಪಿ ಮುಖಂಡರಾದ ಗುರು ಮೆಟಗುಡ್ಡರವರ ಶುಕ್ರವಾರದಂದು ಒಂದು ವರ್ಷದ ಅವಧಿಗೆ ವರೆಗೆ ದತ್ತು ಸ್ವೀಕಾರ ಮಾಡಿದ್ದಾರೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಮ್ ವಿ ಅಮರ್ನಾಥ್ ರವರು ಅರ್ಜುನ್ ಚಿರತೆಯನ್ನು ದತ್ತುಪಡೆದ ಮೆಟಗುಡ್ ಅವರಿಗೆ ಪ್ರಮಾಣ ಪತ್ರ ವಿತರಿಸಿದ್ದಾರು. ಸಾರ್ವಜನಿಕರು ವನ್ಯ ಪ್ರೇಮಿಗಳು ಉದ್ಯಮಿಗಳು ಆರ್ಥಿಕವಾಗಿ ಸದೃಢರಾಗಿ ರವರು ಭೂತರಾಮನಟ್ಟಿಯ ಕಿತ್ತೂರ್ ರಾಣಿ ಚೆನ್ನಮ್ಮ ಮೃಗಾಲಯದ ವನ್ಯ ಪ್ರಾಣಿಗಳು ಮತ್ತು ಸ್ವೀಕಾರಕ್ಕೆ ಮುಂದೆ ಬರಬೇಕು ಎಂದು ಪ್ರಾಣಿಸಂಗ್ರಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಮ್ ವಿ ಅಮರ್ನಾಥ್ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಗಳಾದ ಡಿ ಶಿವಕುಮಾರ್ ರಾಕೇಶ್ ಅರ್ಜುನವಾಡ ಪರಿಸರ ಪ್ರೇಮಿ ದಯಾನಂದ್ ಪರಾಳಶೆಟ್ಟರ್ ಉಪಸ್ಥಿತರಿದ್ದರು.