Corona ಸಂದರ್ಭದಲ್ಲಿ ಯಾರಾದರೂ ನಂಬರ್ 1 mla ಇದ್ದರೆ ಅದು ಹೊನ್ನಾಳಿ ಶಾಸಕ M P ರೇಣುಕಾಚಾರ್ಯ ಅವರು. ನಿಜವಾಗಿಯೂ ನೀವು ನಮ್ಮ ಮನಸ್ಸು ಗೆದ್ದಿದ್ದೀರಿ. ಕೋವಿಡ್ ಸೋಂಕಿತರೆಂದರೇ ಮಕ್ಕಳು, ಸಂಬಂಧಿಕರೂ ಕೂಡ ದೂರ ಓಡುವ ಈಗಿನ ಸಂದರ್ಭದಲ್ಲಿ , ಅವರ ಹತ್ತಿರನಿಂತು ಅವರ ಮಗನಾಗಿಯೋ , ಅಣ್ಣ ನಾಗಿಯೊ ತಮ್ಮನಾಗಿಯೊ, ಧೈರ್ಯ ಹೇಳಿದವರು ನೀವು.
ಪ್ರಚಾರಕ್ಕಾಗಿ ಹೀಗೆಲ್ಲ ಮಾಡ್ತಾರೆ ಅಂತ ಯಾರ ಏನು ಬೇಕಾದರೂ ಹೇಳಲಿ, ಹೀಗೆ ಮಾಡಲು ಖಂಡಿತ ಒಂದು ಯಮ ಗುಂಡಿಗೆ ಬೇಕು. ಧೈರ್ಯಬೇಕು , ಮಾನವೀಯತೆ ಬೇಕು. ತಮ್ಮ ಜನರಿಗಾಗಿ ಮಿಡಿಯುವ.. ಅವರನ್ನು ಉಳಿಸಿಕೊಳ್ಳಲು ತುಡಿಯುವ ಹೃದಯ ಬೇಕು. ಅದು ನಿಮಗಿದೆ.
ನಿಮ್ಮ ಕ್ಷೇತ್ರದಲ್ಲಿ ಯಾವುದೇ ಮದುವೆ ಮುಂಜಿ ಸಾವು ನೋವಿನ ವೇಳೆ ನೀವು ಅಲ್ಲಿರುವಿರಿ.... ಗೊತ್ತು.
ಅದು ಒಬ್ಬ ಶಾಸಕನ ಕರ್ತವ್ಯ ಎಂದು ಭಾವಿಸಿದರೂ , covid ನ ಈ ವಿಷಮ ಪರಿಸ್ಥಿತಿಯಲ್ಲಿ ಇಡೀ ತಾಲ್ಲೂಕಿನ ಜನರೊಂದಿಗೆ ಬೆರೆತು, ಅವರಿಗೆ ಧೈರ್ಯ ತುಂಬಿ ಹಾಡಿ, ಕುಣಿಯುವ ಜೊತೆಗೆ, ನಿಮ್ಮವರಿಗಾಗಿ oxygen ಸಿಲಿಂಡರ್ ಗಾಗಿ ಬಡಿದಾಟ , food kit , ಹಾಸಿಗೆ ವ್ಯವಸ್ಥೆ ಮಾಡೋದು , ಇಡೀ ಕ್ಷೇತ್ರದಲ್ಲಿ ಚಕ್ರ ಕಟ್ಟಿಕೊಂಡು ತಿರುಗಾಡಿ ಜನರ ಯೋಗ ಕ್ಷೇಮ ವಿಚಾರಿಸುತ್ತಿದ್ದೀರಿ...
*ಕೊರೊನಾ ಬಂದು ಹುಷಾರಾಗಿ ಎರಡೇ ದಿನಕ್ಕೆ ಕೋವಿಡ್ ಆಸ್ಪತ್ರೆಗೆ ಹೋಗಿ ರೋಗಿಗಳನ್ನ ವಿಚಾರಿಸಿಕೊಂಡು ಬರ್ತಾರೆ..
*ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ ಆಗ್ತಿದೆ ಅಂತ ಗೊತ್ತಾಗ್ತಿದ್ದ ಹಾಗೇ ತಾವೇ ಖುದ್ದು ಹೋಗಿ ಆಕ್ಸಿಜನ್ ತರ್ತಾರೆ..
*ಕೋವಿಡ್ ಆಸ್ಪತ್ರೆಗೆ ನಿರಂತರವಾಗಿ ಭೇಟಿ ಕೊಟ್ಟು ಅಲ್ಲಿ ರೋಗಿಗಳು ಹಾಗೂ ಕುಟುಂಬದವ್ರ ಜೊತೆ ಮಾತಾಡ್ಕೊಂಡು ಸಮಾಧಾನ ಮಾಡಿ ಬರ್ತಾರೆ...
*ಇವತ್ತು ಪಬ್ಲಿಸಿಟಿಗೋ ಮತ್ತೊಂದಕ್ಕೋ ಗೊತ್ತಿಲ್ಲ ಮೃತ ಸೋಂಕಿತನ ದೇಹ ಇದ್ದ ಆ್ಯಂಬ್ಯುಲೆನ್ಸ್ ಓಡ್ಸಿದ್ದಾರೆ, ಜೊತೆಗೆ ಪಿಪಿಇ ಕಿಟ್ ಮತ್ತೆ ಇನ್ನಿತರೇ ವಸ್ತುಗಳ ಖರ್ಚಿಗೆ ಸ್ವಲ್ಪ ದುಡ್ಡು ಕೊಟ್ಟು ಬಂದಿದಾರೆ..
*ಮೊನ್ನೆ ಮೊನ್ನೆ ಸೋಂಕಿತರಿಗೋಸ್ಕರ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಿ ಅವ್ರು ಜೊತೆ ತಾವು ಕೂಡ ಡ್ಯಾನ್ಸ್ ಮಾಡಿದಾರೆ..
ಅಂದ್ಹಾಗೆ ನಾನು ಹೇಳ್ತಿರೋದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಗ್ಗೆ...ಅವ್ರು ಪ್ರಚಾರಕ್ಕೆ ಈ ಕೆಲ್ಸಗಳ್ನೆಲ್ಲ ಮಾಡ್ತಿದ್ರೂ ಖುಷಿನೇ...ಯಾಕಂದ್ರೆ ಇದ್ರಿಂದ ಒಂದಿಷ್ಟು ಮಂದಿಗೆ ಸಹಾಯ ಆಗ್ತಿರೋದಂತು ಸುಳ್ಳಲ್ಲ...ಈ ಹಿಂದಿನಗಿಂತ ಈಗ ಇವ್ರು ಮಾಡ್ತಿರೋ ಕೆಲ್ಸ ನಿಜಕ್ಕೂ ಶ್ಲಾಘನೀಯ..ಈ ವಿಷಯದಲ್ಲಿ ಮಾತ್ರ ಇವ್ರನ್ನ ನೋಡಿ ಅವ್ರದ್ದೇ ಪಕ್ಷದ ಜೊತೆಗೆ ಇತರೇ ಪಕ್ಷದ ಶಾಸಕರು, ಸಚಿವರು ಕಲಿಬೇಕಾಗಿರೋದು ತುಂಬಾ ಇದೆ.
ನಿಮ್ಮ ಮಾದರಿ ನಡೆಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು.
(ಯಾವೆಲ್ಲ ಶಾಸಕರು ಸಂಸದರು ಜನ ಸೇವೆಯಲ್ಲಿ ತೊಡಗಿದ್ದಾರೋ ಅವರಿಗೆಲ್ಲ ಜಯವಾಗಲಿ. ಒಳಿತಾಗಲಿ...)
#MLARenukacharya

Social Plugin