‘ಪೆಂಟಗನ್’ ಕಥೆಯಿಂದ ಪ್ರೀತಿಗೆ ಸ್ಫೂರ್ತಿ; ಥ್ರಿಲ್ಲರ್ ಲುಕ್ನಲ್ಲಿ ಗುರು ದೇಶ್ಪಾಂಡೆ ಪತ್ನಿ
‘ಜೆಂಟಲ್ಮನ್’ ಸಿನಿಮಾದ ಮೂಲಕ ನಿರ್ಮಾಪಕರಾದ, ನಿರ್ದೇಶಕ ಗುರು ದೇಶ್ಪಾಂಡೆ ಸದ್ಯ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದೊಂದು ಐದು ಕಥೆಗಳನ್ನ ಆಧಾರಿತ ಸಿನಿಮಾವಾಗಿದ್ದು, ಇದೀಗ ಅದೇ ಸಿನಿಮಾದ ಮೊದಲ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆಯಾಗಿದೆ. ಐದು ಕಥೆಗಳ ಸಿನಿಮಾ ಆಗಿರುವ ಕಾರಣಕ್ಕೋ ಏನೋ, ಸಿನಿಮಾಗೆ ‘ಪೆಂಟಗನ್’ ಅಂತಾನೇ ಹೆಸರಿಡಲಾಗಿದೆ. ಹೆಸರಿನಂತೆಯೇ ಬಿಡುಗಡೆಯಾದ ಮೊದಲ ಕ್ಯಾರೆಕ್ಟರ್ ಪೋಸ್ಟರ್ ಸಖತ್ ಥ್ರಿಲ್ಲಿಂಗ್ ಆಗಿದೆ. ಐದು ಕಥೆಗಳಲ್ಲಿ ಒಂದು ಕಥೆಗೆ ಡೆಬ್ಯೂ ಡೈರೆಕ್ಟರ್ ಕಿರಣ್ ಕುಮಾರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಕಥೆಯ ಮೊದಲ ಕ್ಯಾರೆಕ್ಟರ್ ಇಂದು ರಿವೀಲ್ ಆಗಿದೆ. ನಿರ್ಮಾಪಕ ಗುರು ದೇಶ್ಪಾಂಡೆ ಪತ್ನಿ ಪ್ರೀತಿಕಾ ದೇಶ್ಪಾಂಡೆ ಈ ಕಥೆಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ಪ್ರೀತಿ ಅವರ ಪೋಸ್ಟರ್ ಲಾಂಚ್ ಆಗಿದೆ.
ಪ್ರೀತಿಕಾ ದೇಶ್ಪಾಂಡೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ಡೇ ಪ್ರಯುಕ್ತ ಈ ಪೋಸ್ಟರ್ ರಿವೀಲ್ ಆಗಿದೆ.
ಕಳೆದ 15 ವರ್ಷಗಳಿಂದ ಪರಿಯ ಸಿನಿಮಾಗಳ ಕೆಲಸಗಳಲ್ಲಿ ಬೆನ್ನೆಲುಬಾಗಿರುವ ಪ್ರೀತಿ ದೇಶ್ಪಾಂಡೆ, ಚಾನ್ಸ್ ಸಿಕ್ಕಿದ್ದರೂ ಕೂಡ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ ಮತ್ತೆ ಸಿಕ್ಕಂತ ಅವಕಾಶವನ್ನ ಬಿಡದೇ, ಕಿರಣ್ ಕುಮಾರ್ ಕಥೆಯಿಂದ ಪ್ರೇರಿತರಾಗಿ ನಟಿಸೋದಕ್ಕೆ ಒಪ್ಪಿಕೊಂಡಿದ್ದಾರೆ. ಪೆಂಟಗನ್ ಮೂಲಕ ತಮ್ಮ ಸಿನಿ ಜರ್ನಿಯನ್ನ ಆರಂಭಿಸಿದ್ದಾರೆ. ‘ಜಿ ಸಿನಿಮಾಸ್’ ಹೆಸರಿನಲ್ಲಿ ಗುರು ದೇಶ್ಪಾಂಡೆ ಸಿನಿಮಾ ನಿರ್ಮಾಣ ಮಾಡ್ತಿದ್ದು, ಐದು ನಿರ್ದೇಶಕರು ಈ ಪೆಂಟಗನ್ ಸಿನಿಮಾದ ಭಾಗವಾಗಲಿದ್ದಾರೆ. ಸಂಗೀತ ನಿರ್ದೇಶಕ ಮಣೆಕಾಂತ್ ಕದ್ರಿ ಈ ಆ್ಯಂಥಾಲಜಿ ಸಿನಿಮಾಗೆ ಸಂಗೀತದ ಕಂಪು ತುಂಬಲಿದ್ದಾರೆ.
Social Plugin