ವರದಿ : ವಿಜಯ ವಾಜಂತ್ರಿ
ತೇರದಾಳದ ಕಾಲತಿಪ್ಪಿಯವರ ನಿವಾಸದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮಲು ಅವರನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿದರು.

ತೇರದಾಳ : ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಹರಡುವುದನ್ನು ತಡೆಯಲು ಸರಕಾರ ಮತ್ತು ಆರೋಗ್ಯ ಮಂತ್ರಿಗಳು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಸೂಕ್ತ ಸಮಯಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬೇಕು ಎನ್ನುವು ಕಾರಣದಿಂದ ಕೋವಿಡ್ ಚೈನ ಮುರಿಯಬೇಕು. ರಾಜ್ಯದಲ್ಲಿ ಯಾವುದೇ ಸಾವುಗಳು ಸಂಭವಿಸಬಾರದು. ರಾಜ್ಯದಲ್ಲಿ ಯಾರೂ ಜೀವವನ್ನು ಕಳೆದುಕೊಳ್ಳಬಾರದು, ರಾಜ್ಯದ ಜನತೆ ಜೀವ ಜೀವನದ ಜೊತೆ ಚನ್ನಾಗಿ ಇರಬೇಕು ಎಂದು ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸಚಿವ ಶಾಸಕರೊಡನೆ ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಶ್ರೀರಾಮಲು ಹೇಳಿದರು.
  ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿ ಕಾಲತಿಪ್ಪಿಯವರ ತೋಟದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೇರೆ ರಾಜ್ಯದಲ್ಲಿರುವವರು ಹಾಗೂ ಪಟ್ಟಣ ಪ್ರದೇಶದಲ್ಲಿರುವ ಜನರು ಗ್ರಾಮೀಣ ಪ್ರದೇಶಗಳಿಗೆ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ವಲಸೆ ಬರುತ್ತಿದ್ದಾರೆ. ಸೋಂಕು ಹರಡದಂತೆ ನೋಡಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕಾ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್‍ಗಳ ವ್ಯವಸ್ಥೆಯನ್ನು ಮಾಡಲಾಗುವುದು. ಎಲ್ಲ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವ ಮೂಲಕ ತಿಳುವಳಿಕೆ ನೀಡಬೇಕು ಎಂದು ಗ್ರಾಮಪಂಚಾಯತಿಗಳಲ್ಲಿನ ಕಾರ್ಯ ಪಡೆಗಳನ್ನು ಚುರುಕುಗೊಳಿಸಲಾಗುವುದು. ಆಕ್ಸಿಜನ್‍ಗಳ ಕೊರತೆಯಾಗದಂತೆ ಜಗದೀಶ ಶೆಟ್ಟರರವರು ಜಿಂದಾಲ ಕಾರ್ಖಾನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ರಾಜ್ಯದ ಜನತೆಗೆ ಆಕ್ಸಿಜನ್ ಕೊರತೆಯಾಗಬಾರದು ಎಂದು ಪ್ರಧಾನ ಮಂತ್ರಿಗಳು ಹಾಗೂ ಕೋರ್ ಕಮೀಟಿಯಲ್ಲಿ ನಿರ್ಧಾರವಾದಂತೆ ಕರ್ನಾಟಕ ರಾಜ್ಯದಲ್ಲಿ ಉತ್ಪನ್ನವಾಗುವ ಆಕ್ಸಿಜನ್ ಕರ್ನಾಟಕದಲ್ಲಿಯೇ ಬಳಕೆಯಾಗಬೇಕು ನಿಧಾರವನ್ನು ತಗೆದುಕೊಳ್ಳುವುದರ ಜೊತೆಗೆ ಜಗದೀಶ ಶೆಟ್ಟರ ಅವರಿಗೆ ಉಸ್ತುವಾರಿಯನ್ನು ವಹಿಸಲಾಗಿದೆ. ಆಕ್ಸಿಜನ್, ಬೆಡ್‍ಗಳು, ರೆಮಿಡಿಸಿವಿರ್ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳುವ ತೀರ್ಮಾಣವನ್ನು ಮಾಡಲಾಗಿದೆ.
   ಮೇ.10ರಿಂದ 14 ದಿನಗಳವರೆಗೆ ರಾಜ್ಯದ ಜನತೆಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಔಷಧಿಗಳು ಹಾಗೂ ರೆಮಿಡಿಸಿವಿರ್‍ಗಳ ಪೂರೈಕೆ ಕುರಿತು ಕೇಂದ್ರಕ್ಕೆ ಮನವಿಯನ್ನು ಮಾಡಲಾಗಿದೆ. ಮಹಾಮಾರಿಯನ್ನು ತಡೆಯುವುದಕ್ಕಾಗಿ ಜನರು ಸಹಕಾರವನ್ನು ಕೊಡಬೇಕು. ಮುಂದೆ ಯಾವುದೇ ರೀತಿಯ ಕೋವಿಡ್ ಮಹಾಮಾರಿಯಿಂದ ಜನರಿಗೆ ತೊಂದರೆಯಾಗದಂತೆ ಪೋಲಿಸ್ ಇಲಾಖೆ ಹಾಗೂ ಸರಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ತಗೆದುಕೊಳ್ಳುವ ಕೆಲಸವನ್ನು ಮಾಡಲಾಗಿದೆ ಎಂದರು. 
   ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ, ಬಾಗಲಕೋಟ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿದೇರ್ಶಕ ಮಹೇಶ ಪೋತದಾರ, ಪುರಸಭೆ ಸದಸ್ಯರು ಹಾಗೂ ಸಿಪಿಐ ಜೆ.ಕರುಣೇಶಗೌಡ, ಪಿಎಸ್‍ಐ ವಿಜಯ ಕಾಂಬಳೆ ಸೇರಿದಂತೆ ಇನ್ನಿತರರು ಇದ್ದರು.