ವರದಿ : ವಿಜಯ ವಾಜಂತ್ರಿ
ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮಲು 
ವಿರೋಧ ಪಕ್ಷದವರು ಟೀಕೆ ಬಿಟ್ಟು ಸರಕಾರಕ್ಕೆ ಸಲಹೆ ಕೊಡಿ - ಬಿ.ಶ್ರೀರಾಮಲು

ತೇರದಾಳ : ಕೋವಿಡ್ ಎರಡನೇ ಅಲೆ ಹೆಚ್ಚಾಗಿ ಎಲ್ಲಿಲ್ಲಿ ಹರಡುತ್ತದೆ ಅದನ್ನು ನಿಯಂತ್ರಿಸುವ ಸಲುವಾಗಿ ಯಾವ ಯಾವ ಜಿಲ್ಲೆಗಳಲ್ಲಿ ಉಸ್ತುವಾರಿ ಮಂತ್ರಿಗಳು ಇಲ್ಲವೋ ಅಲ್ಲಿ ಉಸ್ತುವಾರಿ ಮಂತ್ರಿಗಳನ್ನು ನೇಮಿಸಲಾಗಿದೆ. ಚುರುಕಾಗಿ ಕೆಲಸ ಮಾಡುವಂತ ಸಚಿವರನ್ನು ಬದಲಾವಣೆ ಮಾಡಿ ಸೋಂಕಿನ ಪ್ರಮಾಣ ಹೆಚ್ಚಾದಲ್ಲಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮಲು ಹೇಳಿದರು. 
   ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಕಾಲತಿಪ್ಪಿ ಅವರ ತೋಟದ ನಿವಾಸದಲ್ಲಿ ಸುದ್ದಿಗಾರರ ಉಸ್ತವಾರಿ ಮಂತ್ರಿಗಳನ್ನು ಬದಲಾವಣೆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದರಿಂದ ಆಕ್ಸಿಜನ್, ಔಷಧಿಗಳು, ಬೆಡ್‍ಗಳು, ರೆಮಿಡಿಸಿವಿರ್‍ಗಳು ಕೊರತೆಯಾಗದಂತೆ ಪೂರೈಸಲು ಸರಕಾರ ಮಾಡುತ್ತಿರುವುದರಿಂದ ಹೆಚ್ಚಾಗಿ ಸಚಿವರು ಅಲ್ಲಿಯೇ ಇರುತ್ತಿದ್ದಾರೆ. ಆರೋಗ್ಯ ಮಂತ್ರಿ ಡಾ. ಸುಧಾಕರರವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಅವರ ಶಕ್ತಿ ಮೀರಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸೋಂಕಿನ ಪ್ರಮಾಣವನ್ನು ತಡೆಯಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಯಾವುದೇ ಸ್ವಾರ್ಥ ವಿಚಾರವಿಲ್ಲದೆ ಕೋವಿಡ್ ವಿಚಾರದಲ್ಲಿ ಒಗ್ಗಟ್ಟಿನಿಂದ ಕೆಲಸವನ್ನು ಮಾಡುತ್ತಿದ್ದೇವೆ. ವಿರೋಧ ಪಕ್ಷದವರು ಟೀಕೆ ಮಾಡುವುದನ್ನು ಬಿಟ್ಟು ಸರಕಾರಕ್ಕೆ ಸಲಹೆಗಳನ್ನು ಕೊಡಬೇಕು ಎಂದು ಮನವಿ ಮಾಡುವುದರ ಮೂಲಕ ಕೇವಲ ಬಿಜೆಪಿ ಸರಕಾರ, ಯಡಿಯೂರಪ್ಪನವರ ಸರಕಾರ, ಬಿಜೆಪಿ ಸಂಸದರು, ಶಾಸಕರು ಎನ್ನವುದನ್ನು ಬಿಟ್ಟು ಒಗ್ಗಟ್ಟಿನಿಂದ ಕೈಜೋಡಿಸಿ ಕೆಲಸವನ್ನು ಮಾಡಿ. ಸರಕಾರದ ಬಗ್ಗೆ ತಪ್ಪು ಹೇಳಿಕೆಗಳನ್ನು ಕೊಟ್ಟು ಜನರನ್ನು ಗೊಂದಲದಲ್ಲಿ ಸಿಕ್ಕಿಸಬೇಡಿ. ಕೋವಿಡ್ ವಿಚಾರದಲ್ಲಿ ಯಾವುದೇ ಸ್ವಾರ್ಥ ವಿಚಾರವಿಲ್ಲದೆ ದಯವಿಟ್ಟು ಸರಕಾರಕ್ಕೆ ಸಹಕಾರವನ್ನು ಕೊಡುವದರ ಮೂಲಕ ಎಲ್ಲಿ ಸರಕಾರ ಎಡುವುತ್ತದೆಯೋ ಅಲ್ಲಿ ವಿರೋಧ ಪಕ್ಷದವರು ಸಲಹೆ ಸೂಚನೆಗಳನ್ನು ಕೊಟ್ಟು ಕೋವಿಡ್ ಕಠಿಣ ಸಂದರ್ಭದಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸವನ್ನು ಮಾಡೋಣ ಎಂದರು.