ಯೋಗ ಪ್ರಾಣಾಯಾಮ ರೂಢಿಸಿಕೊಳ್ಳಿ-ಶಿವಶಂಕರ ಶ್ರೀ

ರಬಕವಿ-ಬನಹಟ್ಟಿ,ಮೇ29: ಕೋವಿಡ್‍ನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಮಾಸ್ಕ್ ಧರಿಸಿ ದಿನಂಪ್ರತಿ ಯೋಗ ಪ್ರಾಣಾಯಾ ರೂಢಿಸಿಕೊಳ್ಳಿಯೆಂದು ಜಗದ್ಗುರು ಹುಬ್ಬಳ್ಳಿಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಹೇಳಿದರು. 
 ರಾಮಪುರದ ನೀಲಕಂಠೇಶ್ವರಮಠದಲ್ಲಿ ಕೊಲ್ಲಾಪುರದ ಕನ್ಹೇರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ತಯಾರಿಸಿರುವ ಆಯುರ್ವೇದ ಔಷಧಿಯನ್ನು ಸಾರ್ವಜನಿಕರಿಗೆ ವಿತರಿಸಿ ಮಾತನಾಡಿದರು. 
 ರಾಮಪುರ ಗ್ರಾಮದ ಹಿರಿಯರಾದ ಹಟ್ಟಿ ಗುರುಗಳು, ಶಿವಪುತ್ರಪ್ಪ ಮುರುಗುಂಡಿ, ಶಿವಾನಂದ ಗೌಡರ, ಮಲ್ಲಿಕಾರ್ಜುನ ಹೊಸಮನಿ, ವಿಕ್ರಂ ಇಂಗಳೆ, ಶಿವಾನಂದ ಗಾಯಕ್ವಾಡ, ರವಿ ಕೊರತಿ ಇದ್ದರು.
ನೊಂದವರಿಗೆ ಸಹಾಯ:ಲಾಕ್ಡೌನ್ ಸಮಯದಲ್ಲಿ ಆಹಾರದ ಕೊರತೆಯಾಗಿದನ್ನು ಮನಗಂಡ ಸ್ವಾಮೀ ವಿವೇಕಾನಂದ ಪ್ರತಿಷ್ಠಾನ ಹಾಗೂ ಭಗತ್‍ಸಿಂಗ್ ಸಂಘದ ಕಳೆದೊಂದು ವಾರದಿಂದ ಹಸಿದವರಿಗೆ ಊಟ, ನೀರು ವಿತರಣೆಯಲ್ಲಿದ್ದಾರೆ.
ಶಂಕರ ಮೇತ್ರಿ, ರಾಗು ಇಂಗಳೆ, ಉಮೇಶ್ ಕಾಟಕರ್, ಶ್ರೀನಿವಾಸ ರಾವಳ, ಸದಾಶಿವ ದೇಶಟ್ಟಿ, ಮಲ್ಲು ಬೀಳಗಿ, ಸಚೀನ ಮಾಳವದೆ, ಸಚೀನಕಾಜವೇ ಸಚೀನ ಹುಶಾರೆ, ಮನೋಜ ವಾಕುಡೆ, ವೇಂಕಟೇಶ ಸಿಂಗನ್, ಪರುಶುರಾಮ ಪಿಸೆ ಇದ್ದರು