*ಆಕ್ಸಿಜನ್ ಕೊರತೆ: ಸಂಘದಿಂದ ಕನ್ಸನ್‌ಟ್ರೇಟರ್ ದೇಣಿಗೆ*
-ವರದಿ:ಮಲ್ಲಿಕಾರ್ಜುನ ತುಂಗಳ ಮುಖ್ಯ ವರದಿಗಾರರು ಬಾಗಲಕೋಟೆ

  ಆಕ್ಸಿಜನ್ ಕೊರತೆ ನೀಗಿಸುವಲ್ಲಿ ಸಹಕಾರಿ ರಂಗ ಹಾಗು ಸಾರ್ವಜನಿಕರೂ ಸಹಾಯಕ್ಕೆ ಮುಂದಾಗಿರುವದು ಹೆಮ್ಮೆಯ ವಿಷಯ. ಈ ರೀತಿ ದಾನಿಗಳೂ ಮುಂದಾದಲ್ಲಿ ಆಕ್ಸಿಜನ್ ಕೊರತೆಯನ್ನುಶೀಘ್ರ ನೀಗಿಸಲು ಸಾಧ್ಯವೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದರು.

ಬನಹಟ್ಟಿಗೆ ಭೆಟ್ಟಿ ನೀಡಿದ ಸಂದರ್ಭ ರಬಕವಿಯ ಶ್ರೀನಿಧಿ ಸಹಕಾರಿ ಸಂಘದಿಂದ ಆಕ್ಸಿಜನ್ ಕನ್ಸನ್‌ಟ್ರೇಟರ್ ಕೊಡುಗೆ ನೀಡುವ ಸಂದರ್ಭ ಹಾಜರಿದ್ದಸಚಿವರು ದಾನಿಗಳಿಗೆ ಆಕ್ಸಿಜನ್ ಕನ್ಸಟ್ರೇಟರ್ ನೀಡಿದ್ದರಿಂದ ಜೀವ ಉಳಿಸುವ ಆಪತ್ಪಾಂಧವರಾಗಿದ್ದಕ್ಕೆ ಧನ್ಯವಾದ ತಿಳಿಸಿದರು.

ಇದೇ ಸಂದರ್ಭ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನಾಶಿ, ಮಲ್ಲಿಕಾರ್ಜುನ ಸಾಬೋಜಿ, ನೀಲಕಂಠ ಮುತ್ತೂರ, ಅಮಿತ್ ನಾಶಿ ಸೇರಿದಂತೆ ಅನೇಕರಿದ್ದರು.