ತೇರದಾಳದ ಪುರಸಭೆ ನೀರು ಶುದ್ಧಿಕರಣ ಘಟಕದ ಆವರಣದಲ್ಲಿ ಶಾಸಕ ಸಿದ್ದು ಸವದಿ ಗಿಡಗಳನ್ನು ನೆಟ್ಟು ನೀರುಣಿಸಿದರು.
ತೇರದಾಳ : ಕೇಂದ್ರ ಸರಕಾರದ ಪ್ರಧಾನಿ ಮೋದಿಯವರ ಎರಡನೆಯ ಅವಧಿ ಆಡಳಿತದ ಯಶಸ್ವಿ ಎರಡು ವರ್ಷ ಅವಧಿ ಪೂರ್ಣಗೊಂಡ ಕಾರಣ ಪಟ್ಟಣದ ಸರಕಾರಿ ಆಸ್ಪತ್ರೆ ಹಾಗೂ ನೀರು ಶುದ್ದಿಕರಣ ಘಟಕದಲ್ಲಿ ಖಾಲಿಯಿರುವ ಸ್ಥಳದಲ್ಲಿ ಗಿಡಗಳನ್ನು ಶಾಸಕ ಸಿದ್ದು ಸವದಿ ನೆಟ್ಟು ನೀರುಣಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೊರೊನಾ ಸೋಂಕಿತರಿಗೆ ಕೋವಿಡ್ ಕಾಳಜಿ ಕೇಂದ್ರದಲ್ಲಿ ಆಹಾರ ಕಿಟ್ಟ್‍ಗಳನ್ನು ವಿತರಿಸುವುದು. ಮಾಸ್ಕ್, ಆರೋಗ್ಯ ಕಿಟ್ ಗಳನ್ನು , ಹಣ್ಣು ಹಂಪಲಗಳನ್ನು ಸೋಂಕಿತ ವ್ಯಕ್ತಿಗಳಿಗೆ ಕೊಡುವುದಾಗಲಿ, ಸರಕಾರಿ ಖಾಲಿ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ಅದರಂತೆ ಸೋಂಕಿತರಿಗೆ ಹಣ್ಣು ಹಂಪಲಗಳನ್ನು, ಮಾಸ್ಕ್ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬನಹಟ್ಟಿ ನಗರದಲ್ಲಿ ಸುಮಾರು 100 ಗಿಡಗಳನ್ನು ನೆಡಲಾಗಿದೆ. ತೇರದಾಳ ಪಟ್ಟಣದಲ್ಲಿ ಇವತ್ತು 100 ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಮತ್ತು ಒಂದು ಸಾವಿರ ಎನ್-95 ಮಾಸ್ಕ್ ನ್ನು ಆಸ್ಪತ್ರೆಗಳಲ್ಲಿನ ಸಿಬ್ಬಂದಿಗೆ ಹಾಗೂ ಕೋವಿಡ್ ವಾರಿಯರ್ಸ್ ಗೆ ಹಂಚಿಕೆ ಮಾಡಲಾಗುವುದು. ಕಳೆದ ಹದಿನೈದು ದಿನಗಳಿಂದ 500 ಆಹಾರದ ಕಿಟ್ ಗಳನ್ನು ಕೋವಿಡ್ ಆಸ್ಪತ್ರೆಗಳಿಗೆ, ಭಿಕ್ಷುಕರಿಗೆ, ಅಮಾಯಕರಿಗೆ ಹಂಚುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ತೇರದಾಳ ಮತಕ್ಷೇತ್ರದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಬಡ ರೋಗಿಗಳಿಗಾಗಿ ಎರಡು ಅಂಬ್ಯುಲೆನ್ಸ್ ಸಹ ಇಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಮಹಾವೀರ ಕೋಕಟನೂರ, ರಾಮಣ್ಣ ಹಿಡಕಲ್, ಸದಾಶಿವ ಹೊಸಮನಿ, ಸಿದ್ದು ಅಮ್ಮಣಗಿ, ಮುರಗೇಶ ಮಿರ್ಜಿ, ಶಂಕರ ಕುಂಬಾರ, ಸಚೀನ ಕೊಡತೆ ಸೇರಿದಂತೆ ಇನ್ನಿತರರು ಇದ್ದರು.

Social Plugin