*ಉಪನೊಂದಣಾಧಿಕಾರಿ ಅಮಾನತ್ತಿಗೆ ಡಿಎಸ್‌ಎಸ್ ಒತ್ತಾಯ*
*ಕಿರು ಹಣಕಾಸು ಸಂಸ್ಥೆಯಿಂದ ಕಿರುಕುಳ: ಹಕ್ಕು ಪತ್ರಕ್ಕೆ ಆಗ್ರಹ*

ವರದಿಚಂದ್ರಶೇಖರ ತುಂಗಳ

 ತೇರದಾಳದ ಉಪನೊಂದಣಿ ಅಧಿಕಾರಿ ಅಮಾನತ್ತು, ಕಿರು ಹಣಕಾಸು ಸಂಸ್ಥೆಯಿಂದ ಕ್ಷೇತ್ರಾದ್ಯಂತ ಕಿರುಕುಳ ಹಾಗು ಕಾಲತಿಪ್ಪಿ ಗ್ರಾಮದಲ್ಲಿನ ದಲಿತ ಕುಟುಂಬಗಳಿಗೆ ಉತಾರ ನೀಡುವಂತೆ ಒತ್ತಾಯಿಸಿ ಡಿಎಸ್‌ಎಸ್(ಭೀಮ ಘರ್ಜನೆ)ದಿಂದ ಇಂದು ಏಕಾಏಕಿ ದಿಢೀರ್ ಪ್ರತಿಭಟನೆ ಮೂಲಕ ಮನವಿ ಅರ್ಪಿಸಲಾಯಿತು.

ರಬಕವಿ-ಬನಹಟ್ಟಿಯ ತಹಶೀಲ್ದಾರ ಕಚೇರಿಗೆ ಆಗಮಿಸಿ ಮನವಿ ಅರ್ಪಿಸಿದ ಸಂಘದ ಜಿಲ್ಲಾ ಸಂಚಾಲಕ ರಾಜು ಸರಿಕರಮಾತನಾಡಿ, ತೇರದಾಳ ಉಪನೊಂದಣಿ ಇಲಾಖೆಯಲ್ಲಿ ಜಿಲ್ಲಾ ದಸ್ತು ಬರಹಗಾರರಿಂದ ಭಾರಿ ಭ್ರಷ್ಟಾಚಾರ ನಡೆಯಿತ್ತಿದ್ದು, ಸುಮಾರು ೫ ರಿಂದ ೧೦ ಪಟ್ಟು ದುಡ್ಡು ವಸೂಲಿಗಿಳಿದು, ಅಲ್ಲಿನ ಉಪನೋಂದಣಿ ಅಧಿಕಾರಿಗಳೊಂದಿಗೆ ಶ್ಯಾಮೀಲಾಗಿದ್ದಾರೆಂದು ಮನವಿಪತ್ರದಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.

ಕಿರು ಹಣಕಾಸು ಸಂಸ್ಥೆಯಿಂದ ಲಾಕ್‌ಡೌನ್ ಸಂದರ್ಭದಲ್ಲಿ ಕ್ಷೇತ್ರದ ನೂರಾರು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಿರುಕುಳ ನೀಡುತ್ತ ಹಣ ವಸೂಲಿಗಿಳಿದಿದ್ದು, ಸಾಕಷ್ಟು ಮಹಿಳೆಯರು ಇದರಿಂದ ನೊಂದು ಹೋಗಿದ್ದಾರೆ. ಅಂಥಹ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು. ಹಾಗು ತೇರದಾಳ ಸಮೀಪದ ಕಾಲತಿಪ್ಪಿ ಗ್ರಾಮದಲ್ಲಿ ಕಳೆದ ೨೦೧೬-೧೭ ನೇ ಸಾಲಿನಲ್ಲಿ ತಾತ್ಕಾಲಿಕ ಹಕ್ಕು ಪತ್ರಗಳನ್ನು ನೀಡಿ ಕೈತೊಳೆದುಕೊಂಡಿರುವ ಸರ್ಕಾರ ಶೀಘ್ರವೇ ಉತಾರೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಗ್ರೇಡ್-೨ ತಹಶೀಲ್ದಾರ ಎಸ್.ಬಿ. ಕಾಂಬಳೆ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಇವೆಲ್ಲವುಗಳ ಬಗ್ಗೆ ಪರಿಶೀಲಿಸಿಮೇಲಧಿಕಾರಿಗಳಿಗೆ ಮನವಿ ತಲುಪಿಸಿ, ಮುಂದಿನ ಕ್ರಮ ಜರುಗಿಸಲಾಗುವದೆಂದರು.

ದೀಪಕ ಕಾಂಬಳೆ, ಸಂದೇಶ ಕಾಲತಿಪ್ಪಿ,ಮಹಾವೀರ ಸಿಂಘೆ, ಗಜಾನನ ಮಾಂಗ, ಅಣ್ಣಪ್ಪ ಮೈತ್ರಿ, ನಾಗಪ್ಪ ಜಗದಮನಿ, ಶಾನೂರ ಮಾಂಗ ಸೇರಿದಂತೆ ಡಿಎಸ್‌ಎಸ್ ಸಂಘದ ಅನೇಕ ಸದಸ್ಯರಿದ್ದರು.